Advertisement

ಭಾರತ ಸಿದ್ಧಪಡಿಸಿದ ಸಿರಪ್‌ನಿಂದ 18 ಮಕ್ಕಳ ಸಾವು

12:55 AM Dec 29, 2022 | Team Udayavani |

ಹೊಸದಿಲ್ಲಿ : ಭಾರತದಲ್ಲಿ ಸಿದ್ಧಪಡಿಸಲಾ ಗಿ ರುವ ಕೆಮ್ಮಿನ ಸಿರಪ್‌ ಸೇವಿಸಿ ಹದಿ ನೆಂಟು ಮಂದಿ ಮಕ್ಕಳು ಅಸುನೀಗಿದ್ದಾರೆ ಎಂದು ಉಜ್ಬೇಕಿಸ್ಥಾನ ಸರ ಕಾರ ಹೇಳಿಕೊಂಡಿದೆ.

Advertisement

ಮಾರಿ ಯಾನ್‌ ಬಯೋ ಟೆಕ್‌ ಪ್ರೈ.ಲಿ (Marion Biotech Private Limited) ಎಂಬ ಕಂಪೆನಿ ಅದನ್ನು ಸಿದ್ಧಪಡಿ ಸಿದೆ. 2012 ರಲ್ಲಿ ಆ ಕಂಪೆನಿ ಉಜ್ಬೇ ಕಿಸ್ಥಾನ ಸರಕಾರದಿಂದ ಮಾನ್ಯತೆ ಪಡೆದಿ ಕೊಂಡಿತ್ತು.

ಈ ಬಗ್ಗೆ ಹೇಳಿಕೆ ನೀಡಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ “ನೋಯ್ಡಾ ಮೂಲದ ಮಾರಿಯಾನ್‌ ಬಯೋಟೆಕ್‌ ಪ್ರೈ.ಲಿ ಸಿದ್ಧಪಡಿಸಿದ ಡಾಕ್‌-1 ಮ್ಯಾಕ್ಸ್‌ ಕೆಮ್ಮಿನ ಸಿರಪ್‌ ಅನ್ನು ಮಕ್ಕಳು ಸೇವಿಸಿದ್ದರು. ಆದರೆ, 21 ಮಕ್ಕಳ ಪೈಕಿ 18 ಮಂದಿ ಸಿರಪ್‌ ತೆಗೆದುಕೊಂಡ ಬಳಿಕ ಉಂಟಾದ ತೊಂದರೆಯಿಂದ ಅಸುನೀ ಗಿ ದ್ದಾರೆ’ ಎಂದು ಹೇಳಿಕೆ ಯಲ್ಲಿ ತಿಳಿ  ಸಿದೆ. ಆಸ್ಪತ್ರೆಗೆ ದಾಖಲಾಗು ವುದಕ್ಕಿಂತ ಮೊದಲು ಮಕ್ಕಳು 2-7 ದಿನಗಳ ಕಾಲ ಪ್ರತಿ ದಿನ 3-4 ಬಾರಿ ಸಿರಪ್‌ ತೆಗೆದುಕೊಂಡಿದ್ದರು ಎಂದು ಕೇಂದ್ರ ಸರಕಾರತಿಳಿಸಿದೆ.

ಇದಕ್ಕೂ ಮೊದಲು ಪಶ್ಚಿಮ ಆಫ್ರಿಕ ದೇಶ ಗಾಂಬಿಯಾದಲ್ಲಿ ಕೂಡ ದೇಶದ ಕಂಪೆನಿಯೊಂದು ಸಿದ್ಧಪಡಿಸಿದ ಔಷಧ ತೆಗೆದುಕೊಂಡು ಹಲವರು ಅಸುನೀಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next