Advertisement

18.84 ಲಕ್ಷ ರೂ.ಗಳ ಹೊಸ ಕಟ್ಟಡಕ್ಕೆ ಅಸ್ತು

09:22 AM May 12, 2022 | Team Udayavani |

ವಿಟ್ಲ: ಹೋಬಳಿಯ ನಾಡ ಕಚೇರಿ ಮತ್ತು ಕಂದಾಯ ನಿರೀಕ್ಷಕರ ಕಟ್ಟಡ ಗೆದ್ದಲು ತುಂಬಿ, ಕುಸಿದು ಬೀಳುವ ಶೋಚನೀಯ ಸ್ಥಿತಿಯಲ್ಲಿದ್ದ ಬಗ್ಗೆ ಕಳೆದ ಮೂರು ವರ್ಷಗಳಿಂದ ಉದಯ ವಾಣಿಯಲ್ಲಿ ನಿರಂತರ ಪ್ರಕಟವಾದ ವರದಿಗೆ ಫಲಶ್ರುತಿ ಪ್ರಕಟ ವಾಗಿದೆ. ಕೊನೆಗೂ ನಾಡಕಚೇರಿಗೆ ನೂತನ ಕಟ್ಟಡ ನಿರ್ಮಾಣಕ್ಕೆ ಅಟಲ್‌ಜೀ ಜನಸ್ನೇಹಿ ನಿರ್ದೇಶನಾಲಯ ಅಸ್ತು ಹೇಳಿದೆ.

Advertisement

18.84 ಲಕ್ಷ ರೂ.ಗಳ ಅನುದಾನ ಬಿಡುಗಡೆಗೊಳಿಸಿದೆ. ನಿರ್ಮಿತಿ ಕೇಂದ್ರ ಈ ನಿರ್ಮಾಣ ಕಾಮಗಾರಿ ಕೈಗೆತ್ತಿ ಕೊಳ್ಳಲಿದೆ. 6 ತಿಂಗಳೊಳಗೆ ಕಟ್ಟಡ ನಿರ್ಮಾಣ ಮಾಡಿಕೊಡಬೇಕಾಗಿದೆ.

3 ನಾಡಕಚೇರಿಗೆ ಅನುದಾನ

ಜಿಲ್ಲೆಯ ಉಳ್ಳಾಲ, ಉಪ್ಪಿ ನಂಗಡಿ ಮತ್ತು ವಿಟ್ಲದಲ್ಲಿ ನಾಡಕಚೇರಿ ನಿರ್ಮಾ ಣಕ್ಕೆ ತಲಾ 18.84 ಲಕ್ಷ ರೂ.ಗಳ ಅನುದಾನ ಬಿಡುಗಡೆಗೊಂಡಿದೆ. ಶೋಚನೀ ಯ ಸ್ಥಿತಿಯಲ್ಲಿದ್ದ ವಿಟ್ಲ ನಾಡ ಕಚೇರಿಗೆ ಇನ್ನಷ್ಟು ಅನುದಾನದ ಆವಶ್ಯಕತೆಯಿದೆ. ಶಾಸಕರ ಅನುದಾನ ವನ್ನು ಸೇರ್ಪಡೆ ಗೊಳಿಸಿ, ಮೀಟಿಂಗ್‌ ಹಾಲ್‌ ಅದೇ ಕಟ್ಟಡದಲ್ಲಿ ಸೇರಿಕೊಳ್ಳುವ ಸಾಧ್ಯತೆಯಿದೆ.

ಏನೇನಿದೆ?

Advertisement

ನೂತನ ನಾಡಕಚೇರಿ ಕಟ್ಟಡದಲ್ಲಿ ಉಪ ತಹಶೀಲ್ದಾರರು, ಕಂದಾಯ ನಿರೀಕ್ಷಕರು ಹಾಗೂ ಗ್ರಾಮಕರಣಿಕರ ಕಚೇರಿ ಇರ ಲಿದೆ. ಕಡತಗಳ ದಾಸ್ತಾನು ಕೊಠಡಿ, ಶೌಚಾ ಲಯ ವ್ಯವಸ್ಥೆಯೂ ಇರಲಿದೆ. ಇದೀಗ ಹಳೆಯ ಕಟ್ಟಡದ ಮಾಡನ್ನು ಕೆಡವಿ ಹಾಕಲಾಗಿದ್ದು, ಗೋಡೆಯನ್ನು ಕೆಡವಲು ಬಾಕಿಯಿದೆ.

ಶೀಘ್ರ ಕಾಮಗಾರಿ ಆರಂಭಿಸುವ ಉದ್ದೇಶ ದಿಂದ ಶಿಲಾ ನ್ಯಾಸಕ್ಕೆ ದಿನ ನಿಗದಿ ಪಡಿಸಲು ಯೋ ಜನೆ ರೂಪಿಸಲಾಗುತ್ತಿದೆ. ಸದ್ಯ ನಾಡ ಕಚೇರಿ ವಿಟ್ಲ ಸಾಲೆತ್ತೂರು ರಸ್ತೆಯ ಅತಿಥಿ ಗೃಹದ ಬಳಿಯಿದೆ. ಅಲ್ಲಿ ಉಪ ತಹಶೀಲ್ದಾರರ ಕಚೇರಿ ಮತ್ತು ಜನಸ್ನೇಹಿ ಕೇಂದ್ರ ವಿದೆ. ಸಬ್‌ ರಿಜಿ ಸ್ಟ್ರಾರ್‌ ಕಚೇರಿಯ ಎಡ ಭಾಗದಲ್ಲಿ ಕಂದಾಯ ನಿರೀಕ್ಷಕರ ಕಚೇರಿ ಮತ್ತು ಗ್ರಾಮ ಕರ ಣಿಕರ ಕಚೇರಿಯಿದೆ. ಇದೀಗ ಕಂದಾಯ ನಿರೀಕ್ಷಕರ ಕಚೇರಿ ಮತ್ತು ಗ್ರಾಮ ಕರಣಿಕರ ಕಚೇರಿಯನ್ನು ಅಲ್ಲೇ ಪಕ್ಕದಲ್ಲಿರುವ ವಿಟ್ಲ ಮಹಿಳಾ ಮಂಡಳಿಯ ಕಟ್ಟಡಕ್ಕೆ ಫ‌ಲಶ್ರುತಿ ಸ್ಥಳಾಂತರಿಸಲಾಗಿದೆ.

ಒಬ್ಬ ಗ್ರಾಮ ಕರಣಿಕರಿಗೆ ನಾಲ್ಕು ಗ್ರಾಮ

ವಿಟ್ಲದ ಗ್ರಾಮಕರಣಿಕರಿಗೆ ನಾಲ್ಕು ಗ್ರಾಮಗಳ ಜವಾಬ್ದಾರಿ ನೀಡಲಾಗಿದೆ. ವಿಟ್ಲ ಕಸಬಾ, ವಿಟ್ಲ ಮುಟ್ನೂರು, ಬೋಳಂತೂರು, ವೀರಕಂಬ ಗ್ರಾಮಗಳ ಜವಾಬ್ದಾರಿ ನೀಡಲಾಗಿದೆ. ವಿಟ್ಲ ಗ್ರಾಮಕರಣಿಕರು ವಿಟ್ಲದ ಕಚೇರಿಗೆ ಪ್ರತಿದಿನ ಹಾಜರಾಗುವ ಅವಕಾಶ ಇಲ್ಲದಾಗಿದೆ. ಆದುದರಿಂದ ವಿಟ್ಲದ ನಾಗರಿಕರು ಪರದಾಡುವಂತಾಗಿದೆ. ಈ ಅವ್ಯವಸ್ಥೆಯನ್ನು ಸರಪಡಿಸಬೇಕೆಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.

ಶೀಘ್ರ ಸ್ಥಳಾಂತರ

ನಾಡಕಚೇರಿ ಕಟ್ಟಡಕ್ಕೂ 18.84 ಲಕ್ಷ ರೂ. ಅನುದಾನ ಬಿಡುಗಡೆಗೊಂಡಿದೆ. ನಾಡಕಚೇರಿಯ ಎಲ್ಲ ವಿಭಾಗಗಳೂ ಅಲ್ಲಿಗೆ ಸ್ಥಳಾಂತರಗೊಳ್ಳಲಿದೆ. ಆದಷ್ಟು ಬೇಗನೆ ಕಟ್ಟಡ ನಿರ್ಮಾಣವಾಗಲಿದೆ. ನಮ್ಮ ಮಾತೃಸಂಸ್ಥೆ ಅಟಲ್‌ಜೀ ಜನಸ್ನೇಹಿ ನಿರ್ದೇಶನಾಲಯ ಈ ಕಟ್ಟಡಕ್ಕೆ ಅನುದಾನ ಬಿಡುಗಡೆ ಮಾಡಿದೆ. ದಾದಾ ಫಿರೋಜ್‌, ಸೂಪರಿಂಟೆಂಡೆಂಟ್‌, ಜಿಲ್ಲಾಧಿಕಾರಿ ಕಚೇರಿ

ಫಲಕ ಅಳವಡಿಸಿ

ಹಳೆಯ ಕಟ್ಟಡ ಕೆಡವಿದ ಬಳಿಕ ಪ್ರಸ್ತುತ ಕಾರ್ಯ ನಿರ್ವಹಿಸುವ ಕಚೇರಿ ಎಲ್ಲಿದೆ ಎಂಬ ಬಗ್ಗೆ ಮಾಹಿತಿ ಸಿಗುವುದಿಲ್ಲ. ಆದುದರಿಂದ ಪಕ್ಕದ ಕಟ್ಟಡಕ್ಕೆ ಸ್ಥಳಾಂತರಗೊಳಿಸಲಾಗಿದೆ ಎಂಬ ಫಲಕ ಅಳವಡಿಸಬೇಕಿತ್ತು. ನಾಗರಿಕರು ಪರದಾಡುವಂತಾಗಿದೆ. ಅಚ್ಯುತ ಕಟ್ಟೆ, ವಿಟ್ಲ, ಸಾರ್ವಜನಿಕರು

Advertisement

Udayavani is now on Telegram. Click here to join our channel and stay updated with the latest news.

Next