Advertisement
ದೈವಗಳ ನೇಮಜಾತ್ರೆಯ ಪ್ರಯುಕ್ತ ಮಾಡದಿಂದ ಮುಡಿಯಾಗುವ ಮಜಲಿಗೆ ಪಯ್ಯೋಳಿಗೆ ಹೋಗಿ ಬರುವ ಸಂಪ್ರದಾಯ ನಡೆದು ಎ. 19ರಂದು ರಾತ್ರಿ 8.30ರಿಂದ ಕಡಬ ಗುತ್ತು ಮನೆಯಿಂದ ಶ್ರೀ ಪುರುಷ ದೈವ, ಶ್ರೀ ಪೊಟ್ಟ ದೈವಗಳ ಭಂಡಾರ ಹಾಗೂ ಪಾಲೋಳಿಯಿಂದ ಬರುವ ಮಹಿಷಂತಾಯ ಇಷ್ಟ ದೇವತೆಯ ಭಂಡಾರದ ಜತೆ ಸೇರಿ ಮಾಡದಲ್ಲಿ ಭಂಡಾರ ಏರಿ ರಾತ್ರಿ 10 ಗಂಟೆಯಿಂದ ಕಲ್ಲಮಾಡದಲ್ಲಿ ಶ್ರೀ ಪುರುಷ ದೈವ, ಮಹಿಷಂತಾಯ, ಇಷ್ಟದೇವತೆ ಮತ್ತು ಸ್ಥಾನದ ಪಂಜುರ್ಲಿ ದೈವಗಳ ನೇಮ ಜರಗಲಿದೆ. 20ರಂದು ರಾತ್ರಿ 8 ಗಂಟೆಗೆ ಮಾಡದಿಂದ ಶ್ರೀ ಕಡಂಬಳಿತ್ತಾಯ ಸ್ವಾಮಿ ಮತ್ತು ಇತರ ದೈವಗಳ ಭಂಡಾರದೊಂದಿಗೆ ಪಯ್ಯೋಳಿ ಮುಡಿಯಾಗುವ ಮಜಲಿಗೆ ಹೋಗಿ ಅಲ್ಲಿಂದ ಕಡಬ ಪೇಟೆಯಲ್ಲಿರುವ ಓಲೆ ಸವಾರಿ ಕಟ್ಟೆಯಲ್ಲಿ ಕಟ್ಟೆಪೂಜೆ ನಡೆದು ಬಳಿಕ ಮಾಡಕ್ಕೆ ಬರುವುದು. 21ರಂದು ಮಧ್ಯಾಹ್ನ 12 ಗಂಟೆಗೆ ಮುಡಿಯಾಗುವ ಮಜಲಿನಲ್ಲಿ ಶ್ರೀ ಕಡಂಬಳಿತ್ತಾಯ ಸ್ವಾಮಿ ಮುಡಿಯಾಗುವುದು. 12.30ಕ್ಕೆ ಮಾಡದಲ್ಲಿ ಶ್ರೀ ಕಡಂಬಳಿತ್ತಾಯ ಸ್ವಾಮಿಯ ನೇಮ, ಅನ್ನಸಂತರ್ಪಣೆಯ ಬಳಿಕ ಶ್ರೀ ಉದ್ರಾಂಡಿ ದೈವ, ಶ್ರೀ ಗ್ರಾಮ ಪಂಜುರ್ಲಿ, ಶ್ರೀ ಪೊಟ್ಟ ದೈವ ಮತ್ತು ಶ್ರೀ ಪುರುಷ ದೈವಗಳ ನೇಮ. ಸಂಜೆ 6.30ಕ್ಕೆ ಶ್ರೀ ಪುರುಷ ದೈವದ ಪೇಟೆ ಸವಾರಿ ನಡೆದು ರಾತ್ರಿ 12 ಗಂಟೆಗೆ ಕೊಡಿ ಇಳಿಸಿ ಯಥಾಪ್ರಕಾರ ದೈವದ ಭಂಡಾರ ಭಂಡಾರದ ಮನೆಗಳಿಗೆ ತೆರಳುವುದು. 22 ರಂದು ಪೂರ್ವಪದ್ಧತಿಯಂತೆ ತೆಂಗಿನಕಾಯಿ ಕುಟ್ಟುವ ಸಂಪ್ರದಾಯ ನಡೆಯಲಿದ್ದು, 23 ರಂದು ಬೆಳಗ್ಗೆ 7.30ಕ್ಕೆ ಪಾಲೋಳಿ ಕೊಪ್ಪದಿಂದ ಶ್ರೀ ಕಲ್ಕುಡ ದೈವ ಮತ್ತು ಶ್ರೀ ಕಲ್ಲುರ್ಟಿ ದೈವದ ಭಂಡಾರ ಹಾಗೂ ಕಡಬ ಗುತ್ತು ಮನೆಯಿಂದ ಶಿರಾಡಿ ದೈವದ ಭಂಡಾರವು ಕಡಬ ಶ್ರೀ ಅಮ್ಮನವರ ದೇವಳದ ಬಲ ಬದಿಯಲ್ಲಿರುವ ದೈವಗಳ ಕಟ್ಟೆಯಲ್ಲಿ ಭಂಡಾರ ಏರುವುದು. 10 ಗಂಟೆಗೆ ಶ್ರೀ ಅಮ್ಮನವರ ಸನ್ನಿಧಿಯಲ್ಲಿ ಶ್ರೀ ಅಮ್ಮನವರ ಪೂಜೆ ಮತ್ತು ದೈವಗಳ ನೇಮ ಹಾಗೂ ಮಾರಿಪೂಜೆ ಜರಗಲಿದೆ.