Advertisement
ಇದೇ ವೇಳೆ ದೇಶದ ಕೊರೊನಾ ಲಸಿಕೆ ಕೊವ್ಯಾಕ್ಸಿನ್‌ನ ಮೊದಲ ಹಂತದ ಪ್ರಯೋಗ ಪೂರ್ಣಗೊಂಡಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ಸಹಭಾಗಿತ್ವದಲ್ಲಿ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್‌ನ ಮುಂದಿನ ಹಂತದ ಪ್ರಯೋಗ ಸೆಪ್ಟೆಂಬರ್‌ನಲ್ಲಿ ನಡೆಯಲಿದೆ. ಈವರೆಗೆ ನಡೆಸಿದ ಪ್ರಯೋಗದಲ್ಲಿ, ಲಸಿಕೆ ಪಡೆದ ಯಾರಿಗೂ ಪ್ರತಿಕೂಲ ಪರಿಣಾಮ ಉಂಟಾಗಿಲ್ಲ. ಇದೊಂದು ಸುರಕ್ಷಿತ ಲಸಿಕೆ ಎಂಬ ಭರವಸೆ ಮೂಡಿದೆ ಎಂದು ಪ್ರಯೋಗದ ನೇತೃತ್ವ ವಹಿಸಿರುವಡಾ. ಸವಿತಾ ವರ್ಮಾ ಹೇಳಿದ್ದಾರೆ.