ವಾಷಿಂಗ್ಟನ್: ಪ್ರತಿಷ್ಠಿತ ಥಾಮಸ್ ಕುಕ್ ಕಂಪನಿ ಆರ್ಥಿಕ ಸಂಕಷ್ಟದಿಂದ ಪಾರಾಗಲು ಸಾಕಷ್ಟು ಪ್ರಯತ್ನ ನಡೆಸಿಯೂ ಕೊನೆಗೆ ವಿಫಲವಾದ ಹಿನ್ನೆಲೆಯಲ್ಲಿ ಥಾಮಕ್ ಕುಕ್ ಟ್ರಾವೆಲ್ ಕಂಪನಿ ದಿವಾಳಿಯಾಗಿದ್ದು, ಸೋಮವಾರ ಬೆಳಗ್ಗೆ ಜಾಗತಿಕವಾಗಿ 600,000 ಟಿಕೆಟ್ ಅನ್ನು ಕ್ಯಾನ್ಸಲ್ ಮಾಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಥಾಮಸ್ ಕುಕ್ ಕಂಪನಿ ಐಶಾರಾಮಿ ಹೋಟೆಲ್ ಗಳನ್ನು, ರೆಸಾರ್ಟ್ಸ್, ವಿಮಾನ ಯಾನ ವ್ಯವಹಾರ ನಡೆಸುತ್ತಿದ್ದು, 16 ದೇಶಗಳಲ್ಲಿ 21,000 ಉದ್ಯೋಗಿಗಳಿದ್ದಾರೆ. ಬ್ರಿಟನ್ ನಲ್ಲಿಯೇ 9000 ಸಾವಿರ ಮಂದಿ ಕೆಲಸಗಾರರಿದ್ದು, ಎಲ್ಲರೂ ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ವರದಿ ವಿವರಿಸಿದೆ.
178 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಥಾಮಕ್ ಕುಕ್ ಕಂಪನಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ 200 ಮಿಲಿಯನ್ ಪೌಂಡ್ಸ್ ನೆರವು ಕೇಳಲಾಗಿತ್ತು. ಆದರೆ ವಾರಾಂತ್ಯದಲ್ಲಿ ಶೇರುದಾರರು ಮತ್ತು ಕ್ರೆಡಿಟರ್ಸ್ ಜತೆಗೆ ನಡೆಸಿದ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಕಂಪನಿ ದಿವಾಳಿ ಹಂತಕ್ಕೆ ತಲುಪಿದೆ ಎಂದು ತಿಳಿಸಿದೆ.
ಥಾಮಸ್ ಕುಕ್ ತನ್ನ ವ್ಯವಹಾರವನ್ನು ಸ್ಥಗಿತಗೊಳಿಸಿದೆ. ಈ ನಿಟ್ಟಿನಲ್ಲಿ ವಿದೇಶಗಳಲ್ಲಿ ಇರುವ 150,000 ಬ್ರಿಟಿಷ್ ಕಸ್ಟಮರ್ಸ್ ಅನ್ನು ಮುಂದಿನ ಎರಡು ವಾರಗಳಲ್ಲಿ ತಾಯ್ನಾಡಿಗೆ ಕರೆತರುವ ವ್ಯವಸ್ಥೆ ಮಾಡಲಾಗುವುದು ಎಂದು ಬ್ರಿಟನ್ ನಾಗರಿಕ ವಿಮಾನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದೀಗ ಪ್ರತಿಷ್ಠಿತ ಥಾಮಸ್ ಕುಕ್ ಕಂಪನಿಗೆ ಆರ್ಥಿಕ ನೆರವು ನೀಡಲು ಕ ಸರಕಾರ ಮತ್ತು ಇನ್ಸೂರೆನ್ಸ ಕಂಪನಿ ಮುಂದಾಗಬೇಕಾಗಿದೆ ಎಂದು ವರದಿ ಹೇಳಿದೆ. ಕಂಪನಿಯನ್ನು ಆರ್ಥಿಕ ನಷ್ಟದಿಂದ ಮೇಲಕ್ಕೆತ್ತಲು ನಡೆಸಿದ ಪ್ರಯತ್ನಗಳು ವಿಫಲವಾಗಿದೆ. ಈ ಬಗ್ಗೆ ವಿಷಾದ ವ್ಯಕ್ತಪಡಿಸುವುದಾಗಿ ಚೀಫ್ ಎಕ್ಸಿಕ್ಯೂಟಿವ್ ಪೀಟರ್ ಫ್ಯಾಂಕ್ ಹೌಶೆರ್ ವಿವರಿಸಿದ್ದಾರೆ.
ನಮ್ಮ ಲಕ್ಷಾಂತರ ಗ್ರಾಹಕರು, ಸಾವಿರಾರು ಉದ್ಯೋಗಿಗಳು ನಮ್ಮ ಕಂಪನಿಯನ್ನು ಹಲವಾರು ವರ್ಷಗಳಿಂದ ಬೆಂಬಲಿಸಿದ್ದೀರಿ..ಈ ಸಂದಿಗ್ದ ಪರಿಸ್ಥಿತಿಯಲ್ಲಿ ನಾನು ಎಲ್ಲರಲ್ಲಿ ಕ್ಷಮೆಯಾಚಿಸುತ್ತಿದ್ದೇನೆ ಎಂದು ಫ್ಯಾಂಕ್ ಹೌಶೆರ್ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.