Advertisement

175 ದಿನ ದಾಟಿದ “ಕಟಪಾಡಿ ಕಟ್ಟಪ್ಪ

11:47 AM Sep 19, 2019 | mahesh |

ಒಂದೊಮ್ಮೆ ಸಪ್ಪೆಯಾಗಿದ್ದ ಕೋಸ್ಟಲ್‌ವುಡ್‌ ಇದೀಗ ಗರಿಬಿಚ್ಚಿ ಕುಣಿಯಲಾರಂಭಿಸಿದೆ. ದಾಖಲೆಯ ಮೇಲೆ ದಾಖಲೆಯನ್ನು ಬರೆಯುತ್ತ ಇಲ್ಲಿನ ಸಿನೆಮಾಗಳು ಸದ್ದು ಮಾಡುತ್ತಿವೆ. ಪ್ರೇಕ್ಷಕರ ಶಹಬ್ಟಾಸ್‌ಗಿರಿ ಪಡೆದ ಇತ್ತೀಚಿನ ಮೂರು ಸಿನೆಮಾಗಳು ಕೋಸ್ಟಲ್‌ವುಡ್‌ನ‌ಲ್ಲಿ ಯಾರೂ ಮಾಡದ ದಾಖಲೆಯ ಹಾದಿಯಲ್ಲಿ ಮುನ್ನುಗ್ಗುತ್ತಿದೆ. ನಿಜಕ್ಕೂ ಇದು ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ಸಾಹಸ.

Advertisement

ಸದ್ಯ ಕೋಸ್ಟಲ್‌ವುಡ್‌ ಮಾತ್ರವಲ್ಲದೆ ಎಲ್ಲೆಲ್ಲೂ ಸದ್ದು ಮಾಡಿದ ಸಿನೆಮಾ “ಗಿರಿಗಿಟ್‌’. ಸುದೀಪ್‌ ಅಭಿನಯದ “ಪೈಲ್ವಾನ್‌’ ಸಿನೆಮಾ ಥಿಯೇಟರ್‌ನಲ್ಲಿ ಇದ್ದರೂ ಗಿರಿಗಿಟ್‌ ಅದೇ ಚಾರ್ಮ್ ನಲ್ಲಿ ಕುಡ್ಲ- ಬೆಂಗಳೂರು- ವಿದೇಶದ ಥಿಯೇಟರ್‌ನಲ್ಲಿ ಪ್ರದರ್ಶನ ಕಾಣುತ್ತಿದೆ. ಬಾಲಿವುಡ್‌ನ‌ ಖ್ಯಾತ ನಟ ಕರಾವಳಿಯ ಸುನೀಲ್‌ ಶೆಟ್ಟಿ ಅವರು ಕೂಡ ಗಿರಿಗಿಟ್‌ ಮೆಚ್ಚಿ ಕೊಂಡಾಡಿದ್ದಾರೆ. ಈ ಸಿನೆಮಾದ ಕೆಲವು ದೃಶ್ಯಗಳ ಬಗ್ಗೆ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದನ್ನು ಹೊರತುಪಡಿಸಿ, ಉಳಿದಂತೆ ಸಿನೆಮಾದ ಬಗ್ಗೆ ಸಾರ್ವತ್ರಿಕ ಮೆಚ್ಚುಗೆ ವ್ಯಕ್ತಪಡಿಸಿದ್ದು ವಿಶೇಷ. 25ದಿನಗಳನ್ನು ದಾಟಿದ್ದರೂ ಕೂಡ ಈಗಲೂ ಬಹುತೇಕ ಥಿಯೇಟರ್‌ನಲ್ಲಿ ಗಿರಿಗಿಟ್‌ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿರುವುದು ನಿಜಕ್ಕೂ ಶ್ಲಾಘನೀಯ.

ಅಂದಹಾಗೆ, ಆ.23ರಂದೇ ಬಿಡುಗಡೆಯಾದ ಕೊಂಕಣಿಯ “ನಿರ್ಮಿಲ್ಲೆಂ ನಿರ್ಮೊಣೆಂ’ ಸಿನೆಮಾ ಕೂಡ ಕೊಂಕಣಿ ಯಲ್ಲಿ ಹೊಸ ಮನ್ವಂತರ ಬರೆದಿದೆ. ದೇವರು ಹಣೆ ಯಲ್ಲಿ ಏನು ಬರೆಯ ುತ್ತಾನೋ ಅದೇ ಆಗು ವುದು ಎಂಬರ್ಥದ ಈ ಟೈಟಲ್‌ ಅಕ್ಷರಶಃ ನಿಜವಾಗಿದೆ. ಗಿರಿಗಿಟ್‌ ಒಪ್ಪಿರುವ ಸಿನಿಪ್ರಿಯರು ಕೊಂಕಣಿಯ ನಿರ್ಮಿಲ್ಲೆಂ ನಿರ್ಮೊಣೆಂ ಮೇಲೆಯೂ ಪ್ರೀತಿ ತೋರಿದ್ದಾರೆ.

ಹೀಗಾಗಿ ಸದ್ಯ ಈ ಸಿನೆಮಾ ಕೂಡ 25 ದಿನಗಳನ್ನು ದಾಟಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದೇ ರೀತಿ ರಾಜೇಶ್‌ ಬ್ರಹ್ಮಾವರ ನಿರ್ಮಾಣದ ಜೆ.ಪಿ.ತೂಮಿನಾಡ್‌ ನಿರ್ದೇಶನದ “ಕಟಪಾಡಿ ಕಟ್ಟಪ್ಪ’ ಸಿನೆಮಾ 175 ದಿನದ ಯಶಸ್ವಿ ಪ್ರದರ್ಶನ ದಾಖಲಿಸಿದೆ. ಈಗಲೂ ಮಂಗಳೂರಿನ ಪಿವಿಆರ್‌ನಲ್ಲಿ ಸಿನೆಮಾ ಪ್ರದರ್ಶಕ ಕಾಣುತ್ತಿದೆ. ಉದಯ್‌ ಪೂಜಾರಿ, ವಿಜಯ್‌ ಕುಮಾರ್‌ ಕೊಡಿಯಾಲ್‌ಬೈಲ್‌, ಯಜ್ಞೆàಶ್ವರ ಬರ್ಕೆ, ಅರವಿಂದ ಬೋಳಾರ್‌, ಭೋಜರಾಜ ವಾಮಂಜೂರು, ದೀಪಕ್‌ ರೈ ಪಾಣಾಜೆ, ಚರಿಷ್ಮಾ ಸಾಲ್ಯಾನ್‌ ಸಿನೆಮಾದಲ್ಲಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next