Advertisement
ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಪೂರಕ ಅಂದಾಜು ಮಂಡಿಸಿದ್ದು, 1733.95 ಕೋಟಿ ರೂ.ಗಳ ಪೈಕಿ ಹೈಕೋರ್ಟ್ ನ್ಯಾಯಾಧೀಶರ ವೈದ್ಯಕೀಯ ವೆಚ್ಚ ಮರುಪಾವತಿಗೆ 4.47 ಕೋಟಿ ರೂ., ಉಪ ಲೋಕಾಯುಕ್ತರ ಕಟ್ಟಡ ವೆಚ್ಚಕ್ಕೆ 12 ಲಕ್ಷ ರೂ., ಅರ್ಚಕರ ಮಾಸಿಕ ಸಂಭಾವನೆ ಹೆಚ್ಚಳದ ಹಿನ್ನೆಲೆಯಲ್ಲಿ 33.25 ಕೋಟಿ ರೂ. ಒದಗಿಸುವುದು ಸೇರಿದೆ.
ಪೀಠ ಸ್ಥಾಪನೆಗೆ 2 ಕೋಟಿ ರೂ. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ವೇತನ ಹಾಗೂ ಸಿಬ್ಬಂದಿ ಭತ್ಯೆಗೆ 85
ಲಕ್ಷ ರೂ. ಹೆಚ್ಚುವರಿಯಾಗಿ ಒದಗಿಸಲು ಪ್ರಸ್ತಾಪಿಸಲಾಗಿದೆ. ಬೆಂಗಳೂರಿನ ಕೊಳಗೇರಿ ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜು ಹಾಗೂ ಕೊಳಗೇರಿಗಳ ಬಾಕಿ ಶುಲ್ಕ ಪಾವತಿಗಾಗಿ 23.71 ಕೋಟಿ ರೂ., ವಿಜಯಪುರ, ಕೋಲಾರ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲು 20 ಕೋಟಿ ರೂ., ಮೈಸೂರು ಜಯದೇವ ಹೃದ್ರೋಗ ಕೇಂದ್ರ ಸ್ಥಾಪಿಸಲು 20 ಕೋಟಿ ರೂ., ಬೆಂಗಳೂರಿನ ನಿಮ್ಹಾನ್ಸ್ ಸಂಸ್ಥೆಯ ನಿರ್ವಹಣೆ ಮತ್ತು ಆಡಳಿತಾತ್ಮಕ ವೆಚ್ಚಕ್ಕೆ 20 ಕೋಟಿ ರೂ. ಒದಗಿಸಲಾಗಿದೆ.