ಬೆಳ್ತಂಗಡಿ: ತಾಲೂಕಿನಲ್ಲಿ 46 ಗ್ರಾ.ಪಂ.ಗಳ 631 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಡಿ.11ರಂದ ಡಿ.16ರವರೆಗೆ 1729 ನಾಮಪತ್ರ ಸಲ್ಲಿಕೆಯಾಗಿದೆ.
ಅ.ಜಾತಿ ಸಾಮಾನ್ಯ-43,ಅ.ಜಾತಿ ಮಹಿಳೆ-109 ಸೇರಿ ಒಟ್ಟು 152. ಅ.ಪಂಗಡ (ಸಾ)-18, ಅ.ಪಂ. (ಮಹಿಳೆ)-100 ಒಟ್ಟು 118. ಹಿಂ.ವರ್ಗ ಎ (ಸಾ)-158, ಹಿಂ.ವರ್ಗ ಎ (ಮ)-199 ಸೆರಿ ಒಟ್ಟು-357, ಹಿಂ.ವರ್ಗ ಬಿ(ಸಾ)-43, ಹಿಂ.ವರ್ಗ ಬಿ(ಮ)-29, ಒಟ್ಟು- 88. ಸಾಮಾನ್ಯ-704, ಸಾಮಾನ್ಯ ಮಹಿಳೆ 316 ಸೇರಿ ಒಟ್ಟು 1020 ನಾಮಪತ್ರ ಸಲ್ಲಿಕೆಯಾಗಿದೆ. ಒಟ್ಟು ಸಾಮಾನ್ಯ-966 ಮಹಿಳೆ-763 ಸೇರಿ 1729 ನಾಮಪತ್ರ ಸಲ್ಲಿಕೆಯಾಗಿದೆ.
46 ಗ್ರಾ.ಪಂ.ಗಳ ಪೈಕಿ ನಾರವಿ 15 ಸ್ಥಾನಗಳಿಗೆ 40 ಮರೋಡಿ 11 ಸ್ಥಾನಗಳಿಗೆ 28, ಹೊಸಂಗಡಿ 12 ಸ್ಥಾನಗಳಿಗೆ 30, ಕಾಶಿಪಟ್ಣ7 ಸ್ಥಾನಗಳಿಗೆ 19, ಅಂಡಿಂಜೆ 13 ಸ್ಥಾನಗಳಿಗೆ 29, ಅಳದಂಗಡಿ 12 ಸ್ಥಾನಗಳಿಗೆ 38, ಸುಲ್ಕೇರಿ 7 ಸ್ಥಾನಗಳಿಗೆ 17, ಬಳಂಜ 13 ಸ್ಥಾನಗಳಿಗೆ 30, ಶಿರ್ಲಾಲು 11 ಸ್ಥಾನಗಳಿಗೆ 25, ಕುಕ್ಕೇಡಿ 11 ಸ್ಥಾನಗಳಿಗೆ 46,ಪಡಂಗಡಿ 17 ಸ್ಥಾನಗಳಿಗೆ 45, ಮಾಲಾಡಿ18 ಸ್ಥಾನಗಳಿಗೆ 44, ಕುವೆಟ್ಟು 25 ಸ್ಥಾನಗಳಿಗೆ 76, ಮೇಲಂತಬೆಟ್ಟು 12 ಸ್ಥಾನಗಳಿಗೆ 28, ಲಾಯಿಲ 20 ಸ್ಥಾನಗಳಿಗೆ 66, ನಡ 14 ಸ್ಥಾನಗಳಿಗೆ 38, ನಾವೂರು 8 ಸ್ಥಾನಗಳಿಗೆ 23, ಇಂದಬೆಟ್ಟು 11 ಸ್ಥಾನಗಳಿಗೆ 28, ಮಲವಂತಿಗೆ 8 ಸ್ಥಾನಗಳಿಗೆ 20 ಮಿತ್ತಬಾಗಿಲ 10 ಸ್ಥಾನಗಳಿಗೆ 24, ಕಡಿರುದ್ಯಾವರ 9 ಸ್ಥಾನಗಳಿಗೆ 24, ನೆರಿಯಾ 17 ಸ್ಥಾನಗಳಿಗೆ 41, ಚಾರ್ಮಾಡಿ 28 ಸ್ಥಾನಗಳಿಗೆ 84, ಮುಂಡಾಜೆ 11 ಸ್ಥಾನಗಳಿಗೆ 28, ಕಲ್ಮಂಜ 10 ಸ್ಥಾನಗಳಿಗೆ 22, ಉಜಿರೆ 34 ಸ್ಥಾನಗಳಿಗೆ 74, ಕೊಯ್ಯೂರು 13 ಸ್ಥಾನಗಳಿಗೆ 41, ಕಳಿಯ 15 ಸ್ಥಾನಗಳಿಗೆ 50, ಮಡಂತ್ಯಾರು 16 ಸ್ಥಾನಗಳಿಗೆ 46, ಮಚ್ಚಿನ 14 ಸ್ಥಾನಗಳಿಗೆ 38, ತಣ್ಣೀರುಪಂಥ 22 ಸ್ಥಾನಗಳಿಗೆ 81,ಬಾರ್ಯ 17 ಸ್ಥಾನಗಳಿಗೆ 59, ತೆಕ್ಕಾರು 9 ಸ್ಥಾನಗಳಿಗೆ 26, ಇಳಂತಿಲ 14 ಸ್ಥಾನಗಳಿಗೆ 42, ಕಣಿಯೂರು 20 ಸ್ಥಾನಗಳಿಗೆ 51, ಬಂದಾರು 16 ಸ್ಥಾನಗಳಿಗೆ 36, ಬೆಳಾಲು 12 ಸ್ಥಾನಗಳಿಗೆ 30, ಧರ್ಮಸ್ಥಳ 25 ಸ್ಥಾನಕ್ಕೆ 60, ಪುದುವೆಟ್ಟು9 ಸ್ಥಾನಕ್ಕೆ 24, ಪಟ್ರಮೆ 6 ಸ್ಥಾನಕ್ಕೆ17, ಕೊಕ್ಕಡ 13 ಸ್ಥಾನಕ್ಕೆ 35, ನಿಡ್ಲೆ 8 ಸ್ಥಾನಕ್ಕೆ17, ಕಳೆಂಜ 13 ಸ್ಥಾನಕ್ಕೆ 32, ಶಿಶಿಲ 6 ಸ್ಥಾನಕ್ಕೆ 23, ಶಿಬಾಜೆ 6 ಸ್ಥಾನಕ್ಕೆ 16, ಅರಸಿನಮಕ್ಕಿ 13 ಸ್ಥಾನಕ್ಕೆ 38 ಸೇರಿ 1729 ನಾಮಪತ್ರ ಸಲ್ಲಿಕೆಯಾಗಿದೆ.
ಅತೀ ಹೆಚ್ಚು ಚಾರ್ಮಾಡಿ 28 ಸ್ಥಾನಗಳಿಗೆ 84, ತಣ್ಣೀರುಪಂಥ 22ಸ್ಥಾನಗಳಿಗೆ 81, ಕುವೆಟ್ಟು 25 ಸ್ಥಾನಗಳಿಗೆ 76 ಅತೀ ಹೆಚ್ಚು ನಾಮ ಪತ್ರ ಸಲ್ಲಿಕೆಯಾಗಿದೆ.
2015ರಲ್ಲಿ ಘೋಷಣೆಯಾದಂತೆ ನಾವೂರು, ಕಡಿರುದ್ಯಾವರ ಎರಡು ಗ್ರಾ.ಪಂ.ಗಳಿಗೆ ಎರಡನೇ ಬಾರಿ ಚುನಾವಣೆ ಎದುರಿಸಲಿದೆ.
ಬೆಳ್ತಂಗಡಿ ತಾಲೂಕಿನ 3 ಗ್ರಾ. ಪಂ.ನ 3 ವಾರ್ಡ್ ಗಳಲ್ಲಿ ಅವಿರೋಧ ಆಯ್ಕೆ ಆಗಿದೆ.
ಪಡಂಗಡಿ ಗ್ರಾ. ಪಂ.ನ ಗರ್ಡಾಡಿ 1ನೇ ವಾರ್ಡಿನಲ್ಲಿ ಬಿಜೆಪಿ ಬೆಂಬಲಿತ ಸುಮತಿ (ಸಾಮಾನ್ಯ ಮಹಿಳೆ), ಮಿತ್ತಬಾಗಿಲು ಗ್ರಾಮದ 3ನೇ ವಾರ್ಡ್ ನಲ್ಲಿ ಬಿಜೆಪಿ ಬೆಂಬಲಿತ ಶಾಂಭವಿ (ಸಾಮಾನ್ಯ ಮಹಿಳೆ), ಲಾಯಿಲ ಗ್ರಾ.ಪಂ. 2 ನೇ ವಾರ್ಡಿನಿಂದ ಹಿಂದುಳಿದ (ಅ) ವರ್ಗ ಮಹಿಳೆ ಮೀಸಲು ಕ್ಷೇತ್ರದಿಂದ ರಜನಿ ಎಂ.ಆರ್. (ಬಿಜೆಪಿ ಬೆಂಬಲಿತ ) ಅವರು ಅವಿರೋಧವಾಗಿ ಆಯ್ಕೆ ಬಂದಿದೆ.