Advertisement

1,700 ಕಾರ್ಮಿಕರು ಶ್ರಮಿಕ್‌ ರೈಲಿನಲ್ಲಿ ತವರಿನತ್ತ ಪ್ರಯಾಣ

12:00 PM May 31, 2020 | Suhan S |

ಬೆಳಗಾವಿ: ಲಾಕ್‌ಡೌನ್‌ನಲ್ಲಿ ಸಿಲುಕಿಕೊಂಡಿರುವ ಉತ್ತರ ಪ್ರದೇಶದ ಕಾರ್ಮಿಕರನ್ನು ತವರಿಗೆ ಕಳುಹಿಸಲು ಬೆಳಗಾವಿಯಿಂದ ಗೋರಖಪುರಕ್ಕೆ ಶನಿವಾರ ವಿಶೇಷ ರೈಲು ಕಾರ್ಮಿಕರನ್ನು ಹೊತ್ತುಕೊಂಡು ಪ್ರಯಾಣ ಬೆಳೆಸಿತು.

Advertisement

ಬೆಳಗಾವಿಯಿಂದ ನೋಂದಣಿ ಮಾಡಿದ್ದ 1,700 ಕಾರ್ಮಿಕರು ಗೋರಖಪುರಕ್ಕೆ ಪ್ರಯಾಣ ಬೆಳೆಸಿದರು. ಮಧ್ಯಾಹ್ನದಿಂದಲೇ ರೈಲು ನಿಲ್ದಾಣಕ್ಕೆ ಆಗಮಿಸಿದ್ದ ಕಾರ್ಮಿಕರು, ಸಾಮಾಜಿಕ ಅಂತರ ಕಾಪಾಡಿಕೊಂಡು ಸಾಲಾಗಿ ನಿಂತು ತಮ್ಮ ಹೆಸರು ನೋಂದಾಯಿಸಿಕೊಂಡರು. ಶನಿವಾರ ರಾತ್ರಿ 8ಕ್ಕೆ ಇಲ್ಲಿಂದ ಹೊರಟಿದ್ದು, ಜೂನ್‌ 1ರಂದು ಬೆಳಗ್ಗೆ 8ಗಂಟೆಗೆ ಗೋರಖಪುರಕ್ಕೆ ತಲುಪಲಿದೆ.ರೈಲು ನಿಲ್ದಾಣಕ್ಕೆ ಬಂದಿದ್ದ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಲಾಯಿತು.

ಪ್ರತಿಯೊಬ್ಬರಿಗೂ ಥರ್ಮಲ್‌ ಸ್ಕ್ರೀನಿಂಗ್‌ ಮಾಡಲಾಯಿತು. ಕಡ್ಡಾಯವಾಗಿ ಮಾಸ್ಕ್ ಧರಿಸಿದವರಿಗೆ ಮಾತ್ರ ಒಳಗೆ ಪ್ರವೇಶವಿತ್ತು. 1,700 ಕಾರ್ಮಿಕರಿಗೆ ಆಯಾ ಬೋಗಿಗಳಲ್ಲಿ ಆಸನ ವ್ಯವಸ್ಥೆ ಮಾಡಲಾಗಿತ್ತು. ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್‌ ಅಂಗಡಿ ಅವರು, ಸ್ವತಃ ರೈಲು ನಿಲ್ದಾಣಕ್ಕೆ ತೆರಳಿ ಕಾರ್ಮಿಕರಿಗೆ ಊಟ ಮತ್ತು ನೀರಿನ ವ್ಯವಸ್ಥೆ ಕಲ್ಪಿಸಿರುವಬಗ್ಗೆ ಖಚಿತಪಡಿಸಿಕೊಂಡರು. ಶಾಸಕ ಅನಿಲ್‌ ಬೆನಕೆ, ಡಿಸಿ ಡಾ| ಎಸ್‌.ಬಿ. ಬೊಮ್ಮನಹಳ್ಳಿ, ಐಜಿಪಿ ರಾಘವೇಂದ್ರ ಸುಹಾಸ್‌, ಪೊಲೀಸ್‌ ಆಯುಕ್ತ ಬಿ.ಎಸ್‌. ಲೋಕೇಶ್‌ ಕುಮಾರ್‌, ರೈಲ್ವೆ ಅಧಿಕಾರಿಗಳು ಇದ್ದರು. ನಗರದ ಸಿ.ಪಿ.ಎಡ್‌ ಮೈದಾನದಲ್ಲಿ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next