Advertisement
ಇತ್ತೀಚೆಗಷ್ಟೇ ಪಾಕಿಸ್ತಾನವೇ ವಿದೇಶಿ ಪತ್ರಕರ್ತರನ್ನು ಬಾಲಕೋಟ್‌ಗೆ ಕರೆದೊಯ್ದಿತ್ತು. ಈ ತಂಡದಲ್ಲಿದ್ದ ಇಟಲಿ ಪತ್ರಕರ್ತೆ ಫ್ರಾನ್ಸೆಕಾ ಮರಿನೋ, ಸ್ಥಳೀಯ ಮೂಲಗಳನ್ನು ಆಧರಿಸಿ ವಸ್ತುಸ್ಥಿತಿ ವರದಿ ಮಾಡಿದ್ದಾರೆ. ಭಾರತ ನಡೆಸಿದ ದಾಳಿಯಲ್ಲಿ ಸುಮಾರು 130-170 ಜೈಶ್ ಉಗ್ರರು ಸತ್ತಿದ್ದಾರೆ. 45ಕ್ಕೂ ಹೆಚ್ಚು ಉಗ್ರರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಇನ್ನೂ ಪಾಕ್ ಸೇನೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದೂ ಬರೆದಿದ್ದಾರೆ. ಇವರ ಪ್ರಕಾರ ದಾಳಿ ವೇಳೆ 100 ಕ್ಕೂ ಹೆಚ್ಚು ಉಗ್ರರು ಸ್ಥಳದಲ್ಲೇ, ಸೇನೆಯ ಆಸ್ಪತ್ರೆಯಲ್ಲಿ ಕೆಲವರು ಸತ್ತಿದ್ದಾರೆ ಎಂದು ವರದಿ ಮಾಡಿದ್ದಾರೆ.
Related Articles
Advertisement
ತ್ಯಾಜ್ಯ ನದಿಗೆ ಎಸೆದ ಸೇನೆ: ಬಾಲಕೋಟ್ ದಾಳಿ ನಡೆದ ನಂತರ ದಾಳಿಯಿಂದಾಗಿ ಹಾನಿಗೀಡಾದ ಪ್ರದೇಶವನ್ನು ಮರುನಿರ್ಮಾಣ ಮಾಡಿದೆ. ದಾಳಿ ನಡೆದ ಮರುದಿನ ರಾತ್ರಿಯಿಂದಲೇ ಲಾರಿಗಳಲ್ಲಿ ತ್ಯಾಜ್ಯವನ್ನು ಸಮೀಪದ ನದಿಗೆ ಎಸೆಯಲಾಗಿದೆ. ಹಗಲು ಹೊತ್ತಿನಲ್ಲಿ ಇಲ್ಲಿ ಯಾವ ಕೆಲಸವೂ ನಡೆಯುತ್ತಿರಲಿಲ್ಲ. ರಾತ್ರಿಯೇ ಕೆಲಸ ಮಾಡಿ ಇಡೀ ಪ್ರದೇಶದಲ್ಲಿ ದಾಳಿಯ ಕುರುಹು ಕಾಣದಂತೆ ಮರುನಿರ್ಮಾಣ ಮಾಡಲಾಗಿದೆ. ಇಡೀ ಕಟ್ಟಡಕ್ಕೆ ಹೊಸದಾಗಿ ಪೇಂಟ್ ಮಾಡಲಾಗಿದೆ ಎಂದು ಪತ್ರಕರ್ತೆ ಮರಿನೋ ಹೇಳಿದ್ದಾರೆ. ಪಾಕಿಸ್ತಾನ ತನ್ನ ಮಾನ ಉಳಿಸಿಕೊಳ್ಳಲು ಅಂತಾರಾಷ್ಟ್ರೀಯ ಪತ್ರಕರ್ತರಿಗೆ ಈ ಪ್ರದೇಶವನ್ನು ತೋರಿಸಿತ್ತು. ಆದರೆ ನಿಜವಾಗಿ ದಾಳಿಗೊಳಗಾದ ಪ್ರದೇಶವನ್ನು ತೋರಿಸಲಿಲ್ಲ. ಈ ಪ್ರದೇಶ ಸುಮಾರು ಒಂದೂವರೆ ಎಕರೆ ವ್ಯಾಪ್ತಿಯಲ್ಲಿದೆ. 3-4 ಶಿಕ್ಷಕರನ್ನು ತೋರಿಕೆಗೆ ನೇಮಿಸಲಾಗಿದೆ. ಈ ಪ್ರದೇಶಕ್ಕೆ ತೆರಳಲು ಗುಡ್ಡದ ಬುಡದಿಂದ ಒಂದೂವರೆ ಗಂಟೆ ಬೇಕು. ಇಲ್ಲಿ ಜನವಸತಿ ಇಲ್ಲ. ಜನವಸತಿಯಿಂದ ಇಷ್ಟು ದೂರದಲ್ಲಿ ಯಾರೂ ಮದರಸಾ ನಿರ್ಮಾಣ ಮಾಡುವುದಿಲ್ಲ ಎಂದು ಪತ್ರಕರ್ತೆ ಮರಿನೋ ತಮ್ಮ ವರದಿಯಲ್ಲಿ ಹೇಳಿಕೊಂಡಿದ್ದಾರೆ.