Advertisement
ಮೇ 18ರಿಂದ ‘ಪೆಟ್‌ಕಮ್ಮಿ’ ತೆರೆಗೆ ಬರಲಿದ್ದು, ಕೋಸ್ಟಲ್‌ವುಡ್‌ನಲ್ಲಿ ಹೊಸ ನಿರೀಕ್ಷೆ ಹುಟ್ಟು ಹಾಕಿದೆ. ಅದಾದ ಬಳಿಕ ಒಂದೊಂದೇ ಸಿನೆಮಾಗಳು ತೆರೆಗೆ ಬರುವ ಧಾವಂತದಲ್ಲಿವೆ. ಯಾವುದೂ ಕೂಡ ಈಗಾಗಲೇ ಡೇಟ್ ಅನೌನ್ಸ್ ಮಾಡಿಲ್ಲ. ಸದ್ಯ ‘ಅಪ್ಪೆ ಟೀಚರ್’ ಕೋಸ್ಟಲ್‌ವುಡ್ ನಲ್ಲಿ ಸಾಕಷ್ಟು ಮಾರುಕಟ್ಟೆ ಸೃಷ್ಟಿಸಿ, ಹೊರ ಜಿಲ್ಲೆಗಳಿಗೂ ತೆರಳಿದೆ. ಇದೇ ಮಾಡೆಲ್‌ನಲ್ಲಿ ಹೊಸ ಸಿನೆಮಾಗಳು ಕೂಡ ಮೋಡಿ ಮಾಡಬಹುದು ಎಂಬುದು ಈಗಿನ ಲೆಕ್ಕಾಚಾರ.
ಪ್ರಥಮವಾಗಿ ತುಳುವಿನಲ್ಲಿ ಪ್ರಾರಂಭಿಸಿದ ಚಿತ್ರ ‘ಎನ್ನ ತಂಗಡಿ’. ಅಲ್ಲಿಂದ ಶುರುವಾದ ತುಳು ಚಿತ್ರಲೋಕ ಹಲವು ಸಿನೆಮಾಗಳನ್ನು ನೋಡಿದ್ದು, ಇನ್ನಷ್ಟು ಸಿನೆಮಾಗಳ ಹೊಸ್ತಿಲಲ್ಲಿದೆ. ಹೆಚ್ಚಾ ಕಡಿಮೆ ಎಲ್ಲ ಸಿನೆಮಾಗಳು ಇದೇ ವರ್ಷ ರಿಲೀಸ್ ಆದರೆ, ಈ ವರ್ಷ ಕೋಸ್ಟಲ್‌ವುಡ್‌ಗೆ ಶತಕದ ಸಂಭ್ರಮ ಎದುರಾಗುವುದು ನಿಚ್ಚಳ. ಬರೋಬ್ಬರಿ 47ನೇ ವರ್ಷದಲ್ಲಿ ತುಳು ಸಿನೆಮಾವಿದೆ. ಒಂದೊಂದೇ ಸಿನೆಮಾಗಳು ತೆರೆಕಾಣುವ ಮೂಲಕ ತುಳು ಚಿತ್ರ ನಡಿಗೆ ಮುಂದೆ ಸಾಗುತ್ತಿದೆ. 25- ಬೆಳ್ಳಿಹಬ್ಬ, 40- ಮಾಣಿಕ್ಯ, 50- ಸುವರ್ಣ, 60- ವಜ್ರ ಸಂಭ್ರಮ, 75- ಅಮೃತ ಮಹೋತ್ಸವವನುದಾಟಿ ತುಳು ಸಿನೆಮಾಗಳು ಮುಂದೆ ಸಾಗಿದ್ದು, ಶತಕದ ಗಡಿಯಲ್ಲಿದೆ.
Related Articles
Advertisement
ದಿನೇಶ್ ಇರಾ