ಶಿಮ್ಲಾ: ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಟ್ರಕ್ಕಿಂಗ್ ಗೆ ತೆರಳಿದ್ದ 17 ಮಂದಿ ನಾಪತ್ತೆಯಾಗಿದ್ದಾರೆಂದು ಅಧಿಕಾರಿಯೊಬ್ಬರು ಬುಧವಾರ(ಅಕ್ಟೋಬರ್ 21) ತಿಳಿಸಿದ್ದಾರೆ.
ಇದನ್ನೂ ಓದಿ:ಐರ್ಲೆಂಡ್ ವಿರುದ್ಧ ಸುಲಭ ಜಯ: ಸೂಪರ್ 12 ಹಂತಕ್ಕೆ ತೇರ್ಗಡೆಯಾದ ಲಂಕಾ
ಅಕ್ಟೋಬರ್ 14ರಂದು ಈ 17 ಮಂದಿ ಚಾರಣಿಗರು ಹರ್ಷಿಲ್ ಮಾರ್ಗದ ಮೂಲಕ ಉತ್ತರಾಖಂಡದ ಉತ್ತರಕಾಶಿಯ ಚಿತ್ಕುಲ್(ಹಿಮಾಚಲ ಪ್ರದೇಶದ ಕಿನ್ನೌರ್) ನತ್ತ ತೆರಳಿದ್ದರು. ಆದರೆ ಅಕ್ಟೋಬರ್ 17ರಿಂದ 19ರವರೆಗಿನ ಹವಾಮಾನ ವೈಪರೀತ್ಯದ ಪರಿಣಾಮ ಲಾಮ್ಖಾಗಾ ಪಾಸ್ ಬಳಿ ನಾಪತ್ತೆಯಾಗಿದ್ದಾರೆಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಕಿನ್ನೌರ್ ಜಿಲ್ಲೆಯ ಉತ್ತರಾಖಂಡದ ಹರ್ಷಿಲ್ ಅನ್ನು ಸಂಪರ್ಕಿಸುವ ಲಾಮ್ಖಾಗಾ ಪಾಸ್ ಅತ್ಯಂತ ದುರ್ಗಮ ಮಾರ್ಗಗಳಲ್ಲಿ ಒಂದಾಗಿದೆ. ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಸಿಬಂದಿಗಳನ್ನು ಶೋಧ ಕಾರ್ಯಕ್ಕಾಗಿ ಕಳುಹಿಸಲಾಗಿದೆ ಎಂದು ಕಿನ್ನೌರ್ ಡೆಪ್ಯುಟಿ ಕಮಿಷನರ್ ಅಬಿದ್ ಹುಸೈನ್ ಸಾದಿಖ್ ತಿಳಿಸಿದ್ದಾರೆ.
ಅಷ್ಟೇ ಅಲ್ಲ ಇಂಡೋ-ಟಿಬೇಟಿಯನ್ ಗಡಿ ಭದ್ರತಾ ಪಡೆಯ ನೆರವನ್ನು ಕೋರಲಾಗಿದೆ. ಗುರುವಾರ ನಸುಕಿನ ವೇಳೆ ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.