ಅಹ್ಮದಾಬಾದ್: ಎಸ್‌ಬಿಐ ಇದುವರೆಗೆ 17 ಸಾವಿರ ಕೋಟಿ ರೂ. ಮೌಲ್ಯದ 2 ಸಾವಿರ ರೂ. ಮೌಲ್ಯದ ನೋಟುಗಳನ್ನು ವಿನಿಮಯ ಅಥವಾ ಠೇವಣಿಯಾಗಿ ಸ್ವೀಕರಿಸಿದೆ. ಈ ಬಗ್ಗೆ ಬ್ಯಾಂಕ್‌ನ ಅಧ್ಯಕ್ಷ ದಿನೇಶ್ ಕುಮಾರ್ ಖಾರಾ ಹೇಳಿದ್ದಾರೆ. ಅಹ್ಮದಾಬಾದ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಪೈಕಿ ವಿನಿಮಯದ ಮೊತ್ತವೇ 3 ಸಾವಿರ ಕೋಟಿ ರೂ. ಮತ್ತು 14 ಸಾವಿರ ಕೋಟಿ ರೂ. ಠೇವಣಿಯಾಗಿರುವ ನೋಟುಗಳ ಮೌಲ್ಯ ಎಂದು ಅವರು ಹೇಳಿದ್ದಾರೆ. ಒಟ್ಟಾರೆಯಾಗಿ ಹೇಳುವುದಿದ್ದರೆ ಇದು ದೇಶದಲ್ಲಿ ಚಲಾವಣೆಯಲ್ಲಿ ಇರುವ ನೋಟುಗಳ ಶೇ.20 ಎಂದು ಎಸ್‌ಬಿಐ ಅಧ್ಯಕ್ಷರು ಹೇಳಿದ್ದಾರೆ. ದೇಶದಲ್ಲಿ ಮೇ 23ರಂದು 2 ಸಾವಿರ ರೂ. ನೋಟುಗಳನ್ನು ವಾಪಸ್ ಪಡೆಯುವ ಪ್ರಕ್ರಿಯೆ ಶುರುವಾಗಿತ್ತು. ಈ ಬಗ್ಗೆ ಮೇ 19ರಂದು ಆರ್‌ಬಿಐ ನಿರ್ಧಾರ ಪ್ರಕಟಿಸಿತ್ತು. ಸೆ.30ರ ವರೆಗೆ ನೋಟುಗಳ ವಿನಿಮಯ ಮತ್ತು ಠೇವಣಿಗೆ ಅವಕಾಶ ಇದೆ.
Advertisement
SBI ನಿಂದ 17 ಸಾವಿರ ಕೋಟಿ 2 ಸಾವಿರ ರೂ. ನೋಟು ವಿನಿಮಯ
11:21 PM May 30, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.