Advertisement
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿ ಕಾರಿ ಸಿಂಧೂ ಬಿ. ರೂಪೇಶ್ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಲಹಾ ಸಮಿತಿ ಸಭೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳ ಪ್ರಗತಿ ಬಗ್ಗೆ ಮಾಹಿತಿ ನೀಡಿದ ಮಹಮ್ಮದ್ ನಜೀರ್ ಅವರು ಒಟ್ಟು 20 ಬಸ್ ನಿಲ್ದಾಣಗಳನ್ನು ಎ, ಬಿ, ಸಿ ಶ್ರೇಣಿಗಳೆಂದು ವಿಂಗಡಿಸಲಾಗಿದೆ. “ಎ’ ಶ್ರೇಣಿಯ ಬಸ್ ನಿಲ್ದಾಣಗಳನ್ನು ಒಟ್ಟು 21 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಇದರಲ್ಲಿ 12 ಲಕ್ಷ ರೂ. ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಗೆ, 6 ಲಕ್ಷ ರೂ. ವೆಚ್ಚದಲ್ಲಿ ಇ-ಶೌಚಾಲಯ ಹಾಗೂ 3 ಲಕ್ಷ ರೂ. ವೆಚ್ಚದಲ್ಲಿ ಎಲ್‌ಇಡಿ ಡಿಸ್‌ಪ್ಲೆ ಸಹಿತ ಐಸಿಟಿ ವ್ಯವಸ್ಥೆಗಳನ್ನು ಅಳವಡಿಸಲಾಗುತ್ತಿದೆ. “ಬಿ’ ಶ್ರೇಣಿ ಬಸ್ ನಿಲ್ದಾಣಗಳನ್ನು 15 ಲಕ್ಷ ರೂ. ಹಾಗೂ ಸಿ. ಶ್ರೇಣಿಯ ಬಸ್ ನಿಲ್ದಾಣಗಳನ್ನು 12 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಹಿಂದಿನ ಬಸ್‌ನಿಲ್ದಾಣಗಳ ವಿನ್ಯಾಸದಲ್ಲಿ ಕೆಲವು ಲೋಪಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ವಿನ್ಯಾಸವನ್ನು ಪರಿಷ್ಕರಿಸ ಲಾಗಿದೆ. ಸರ್ಕ್ನೂಟ್ ಹೌಸ್, ಪಚ್ಚನಾಡಿ ಹಾಗೂ ಶಕ್ತಿನಗರದಲ್ಲಿ ಇ-ಶೌಚಾ ಲಯ ಇರುವ ಬಸ್ ನಿಲ್ದಾಣ ನಿರ್ಮಾಣ ಗೊಳ್ಳುತ್ತಿದೆ ಎಂದರು.
ಹಂಪನಕಟ್ಟೆಯಲ್ಲಿ ಎ.ಬಿ. ಶೆಟ್ಟಿ ವೃತ್ತದಿಂದ ಕ್ಲಾಕ್‌ಟವರ್‌ವರೆಗೆ ಸ್ಮಾರ್ಟ್ ರೋಡ್ ಕಾಮಗಾರಿ ಚಾಲನೆಯಲ್ಲಿದೆ. ಇದನ್ನು ಏಕಮುಖ ರಸ್ತೆಯನ್ನಾಗಿ ಮಾಡುವ ಪ್ರಸ್ತಾವನೆಯನ್ನು ಸಿಟಿ ಬಸ್ ನಿಲ್ದಾಣ ಸ್ಥಳಾಂತರದ ಬಳಿಕ ಕಾರ್ಯ ಗತಗೊಳಿಸುವುದು ಉಚಿತ ಎಂಬ ಸಲಹೆ ಹಿನ್ನೆಲೆಯಲ್ಲಿ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ರಸ್ತೆ ಮಧ್ಯದಲ್ಲಿರುವ ವಿಭಾಜಕವನ್ನು ನೆಹರೂ ಮೈದಾನ್ ಕಡೆಗೆ 1.8 ಮೀಟರ್‌ನಷ್ಟು ವರ್ಗಾಯಿಸಿ ಬಸ್ ನಿಲ್ದಾಣಗಳು ಇರುವ ಕಡೆಯ ರಸ್ತೆಯನ್ನು ಹೆಚ್ಚು ವಿಸ್ತರಿಸಲು ನಿರ್ಧರಿಸಲಾಗಿದೆ. ಇದರಿಂದ ಬಸ್ ನಿಲ್ದಾಣ ಇರುವ ಕಡೆ ಸುಮಾರು 3 ಮೀಟರ್‌ನಷ್ಟು ವ್ಯವಸ್ಥಿತ ಫುಟ್‌ಪಾತ್ ನಿರ್ಮಾಣ ಮಾಡಲಾಗುವುದು ಎಂದು ವಿವರಿಸಿದರು. ಸ್ಮಾರ್ಟ್ ಸ್ತಂಭ
ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಯಲ್ಲಿ ಮೊದಲ ಹಂತವಾಗಿ ಸುಮಾರು 15 ಜಂಕ್ಷನ್‌ಗಳಲ್ಲಿ ಸ್ಮಾರ್ಟ್ ಸ್ತಂಭ ಗಳನ್ನು (ಸ್ಮಾರ್ಟ್‌ಪೋಲ್) ತಲಾ 5 ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಲಾಗುತ್ತಿದೆ.
Related Articles
Advertisement
ಜಿಲ್ಲಾಧಿಕಾರಿ ಕಚೇರಿ ಅವರಣದಲ್ಲಿರುವ ಖಾಲಿ ಪ್ರದೇಶ ಅಭಿವೃದ್ಧಿ ಪರಿಕಲ್ಪನೆ ತಾಂತ್ರಿಕ ಸಮಿತಿಗೆ ಸಲ್ಲಿಸಲಾಗಿದೆ. ರಥಬೀದಿ ಹಾಗೂ ವೆಂಕಟರಮಣ ದೇವಾಲಯ ಪ್ರದೇಶವನ್ನು ಧಾರ್ಮಿಕ ವಲಯವಾಗಿ ಅಭಿವೃದ್ಧಿಪಡಿಸುವ ಪ್ರಸ್ತಾವನೆ ಸ್ಮಾರ್ಟ್‌ಸಿಟಿ ಮಂಡಳಿಗೆ ಸಲ್ಲಿಸಿದ್ದು ಅನುಮತಿ ಪಡೆಯಲಾಗಿದೆ. ಎಮ್ಮೆಕೆರೆಯಲ್ಲಿ ಅಂತಾರಾಷ್ಟ್ರೀಯ ಈಜುಕೊಳ ನಿರ್ಮಾಣಕ್ಕೆ ಮರು ಟೆಂಡರ್ ಕರೆಯಲಾಗಿದೆ . ಕಾವೂರು ಕೆರೆ ಹಾಗೂ ಗುಜ್ಜರಕೆರೆ ಅಭಿವೃದ್ದಿ ಯೋಜನೆ ಕುರಿತ ಪ್ರಕ್ರಿಯೆಗಲು ಪ್ರಗತಿಯಲ್ಲಿವೆ ಎಂದವರು ತಿಳಿಸಿದರು.ಮಹಾನಗರ ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ , ಕ್ರೆಡೈ ಚೇರ್‌ಮನ್ ಡಿ.ಬಿ. ಮೆಹ್ತಾ ಹಾಗೂ ಸಲಹಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಇ-ಸ್ಮಾರ್ಟ್ ಸ್ಕೂಲ್
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ 13 ಸರಕಾರಿ ಶಾಲೆಗಳನ್ನು ಇ-ಸ್ಮಾರ್ಟ್ ಸ್ಕೂಲ್ ಆಗಿ ರೂಪಿಸುವ ಯೋಜನೆಯಲ್ಲಿ ಈಗಾಗಲೇ 2 ಶಾಲೆಗಳ ಕಾಮಗಾರಿ ಪೂರ್ಣಗೊಂಡಿದೆ. ಇನ್ನೆರಡು ಶಾಲೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಎಲ್‌ಇಡಿ ಬಲ್ಬ್ ಅಳವಡಿಸುವ ಯೋಜನೆಯಲ್ಲಿ 27 ಸರಕಾರಿ ಕಟ್ಟಡಗಳಲ್ಲಿ ಒಟ್ಟು 10,058 ಎಲ್‌ಇಡಿ ಬಲ್ಬ್ಗಳನ್ನು ಅಳವಡಿಸಲಾಗಿದೆ. ಅಳವಡಿಸಿರುವ ಕಡೆಗಳಲ್ಲಿ ಶೇ. 40 ರಷ್ಟು ವಿದ್ಯುತ್ ಉಳಿತಾಯ ಆಗುತ್ತಿರುವ ಬಗ್ಗೆ ವರದಿಗಳು ಬಂದಿವೆ. ಪುರಭವನದ ಮುಂಭಾಗದಲ್ಲಿ 6 ಕೋ.ರೂ. ವೆಚ್ಚದಲ್ಲಿ ಅಂಡರ್‌ಪಾಸ್‌ಗೆ ಈಗಾಗಲೇ ಟೆಂಡರ್ ಆಗಿದೆ. ಸರಕಾರಿ ಕಟ್ಟಡಗಳಿಗೆ ರೂಫ್‌ಟಾಪ್ ಸೋಲಾರ್ ವ್ಯವಸ್ಥೆ ಅಳವಡಿಸುವ ಯೋಜನೆಯಲ್ಲಿ ಮೀನುಗಾರಿಕಾ, ಇಎಸ್‌ಐ ಕಟ್ಟಡಗಳಲ್ಲಿ ಸೋಲಾರ್ ವ್ಯವಸ್ಥೆ ಅಳವಡಿಸಲಾಗಿದೆ. ಪುರಭವನದ ಕಟ್ಟಡದಲ್ಲಿನ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಮಹಮ್ಮದ್ ನಜೀರ್ ತಿಳಿಸಿದ್ದಾರೆ. ಕೇಂದ್ರ ಮಾರುಕಟ್ಟೆ
ನಗರದ ಕೇಂದ್ರ ಮಾರುಕಟ್ಟೆಯನ್ನು 145 ಕೋ. ರೂ. ವೆಚ್ಚದಲ್ಲಿ ಪಿಪಿ ಸಹಭಾಗಿತ್ವದಲ್ಲಿ ಪುನರ್ ನಿರ್ಮಾಣ ಮಾಡುವ ಯೋಜನೆಗೆ ಖಾಸಗಿ ಸಹಭಾಗಿತ್ವಕ್ಕೆ ಯಾವುದೇ ಸ್ಪಂದನೆ ದೊರಕಿಲ್ಲ. ಈ ಹಿನ್ನೆಲೆಯಲ್ಲಿ ಇದನ್ನು 85 ಕೋ.ರೂ. ವೆಚ್ಚದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲೇ ಮಾಡಲು ನಿರ್ಧರಿಸಲಾಗಿತ್ತು. ಇದೀಗ ಮತ್ತೆ ಪಿಪಿ ಸಹಭಾಗಿತ್ವದಲ್ಲೇ ಮಾಡಲು ತೀರ್ಮಾನಿಸಲಾಗಿದೆ. ಯೋಜನೆಯ ಹಿಂದಿನ ಷರತ್ತಿನಲ್ಲಿ ಕೆಲವು ಷರತ್ತುಗಳನ್ನು ಬದಲಾಯಿಸಿ ಮರು ಪ್ರಕಟನೆ ಹೊರಡಿಸಲಾಗುವುದು. ಇದರಲ್ಲಿ ಒಟ್ಟು 597 ಅಂಗಡಿ ಹಾಗೂ ಸ್ಟಾಲ್‌ಗಳಿರುತ್ತವೆ ಎಂದರು.