Advertisement

ಬೀದರನಲ್ಲಿ ಮತ್ತೆ 17 ಮಂದಿಗೆ ಸೋಂಕು

02:12 PM Jul 14, 2020 | Suhan S |

ಬೀದರ: ಬೀದರ ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬಾರದೇ ಹೆಮ್ಮಾರಿ ಕೋವಿಡ್ ಸೋಂಕು ಹೆಚ್ಚುತ್ತಲೇ ಇದ್ದು, ಸೋಮವಾರ 17 ಹೊಸ ಪಾಸಿಟಿವ್‌ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1055ಕ್ಕೆ ಏರಿಕೆ ಆಗಿದೆ.

Advertisement

ಹೊಸ 17 ಪ್ರಕರಣಗಳಲ್ಲಿ 7 ಪಾಸಿಟಿವ್‌ ಪ್ರಕರಣಗಳ ಸಂಪರ್ಕವೇ ಇನ್ನೂ ಪತ್ತೆಯಾಗಿಲ್ಲ ಎಂಬುದು ಆತಂಕದ ವಿಷಯ. ಇನ್ನುಳಿದ 4 ಕೇಸ್‌ಗಳು ಸೋಂಕಿತರ ಸಂಪರ್ಕದಿಂದ ಹಾಗೂ 6 ಪ್ರಕರಣಗಳು ತೀವ್ರ ಉಸಿರಾಟದ ತೊಂದರೆಯಿಂದ ಪತ್ತೆಯಾಗಿವೆ. 11 ಜನ ಸೋಂಕಿತರು ಬೀದರ ನಗರದವರೇ ಆಗಿದ್ದಾರೆ. ಬೀದರನ ಜೈಲ್‌ ಕಾಲೋನಿ 3, ಬೀದರ ನಗರ-2 ವಿದ್ಯಾನಗರ, ಜೈಲ್‌ ಕಾಲೋನಿ, ಗಾಂಧಿನಗರ, ಗುಂಪಾ, ನೌಬಾದ್‌, ಬ್ರಿಮ್ಸ್‌ ಆಸ್ಪತ್ರೆ, ಲಾಡಗೇರಿ ಪ್ರದೇಶದಲ್ಲಿ ತಲಾ 1, ತಾಲೂಕಿನ ಚಾಂಬೋಳ 1, ಮಂದಕನಳ್ಳಿ 1 ಕೇಸ್‌ಗಳು ಪತ್ತೆಯಾಗಿವೆ. ಭಾಲ್ಕಿ ತಾಲೂಕಿನ ವರವಟ್ಟಿ, ಔರಾದ ಪಟ್ಟಣ, ಮುಸ್ತಾಪುರ ಹಾಗೂ ಚಿಟಗುಪ್ಪ ತಾಲೂಕಿನ ಬೇಮಳಖೇಡಾದಲ್ಲಿ ತಲಾ 1 ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಈಗ ಸೋಂಕಿತರ ಸಂಖ್ಯೆ1055 ಆದಂತಾಗಿದ್ದು, ಈ ಪೈಕಿ 53 ಜನರು ಸಾವನ್ನಪ್ಪಿದ್ದರೆ 613 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇನ್ನೂ 389 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ ಒಟ್ಟಾರೆ 43,487 ಜನರ ಗಂಟಲು ದ್ರವ ಮಾದರಿಯನ್ನು ಪರೀಕ್ಷಿಸಲಾಗಿದ್ದು, ಈ ಪೈಕಿ 39,304 ಮಂದಿಯದ್ದು ನೆಗೆಟಿವ್‌ ಬಂದಿದೆ. ಇನ್ನೂ 3128 ಜನರ ವರದಿ ಬರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next