Advertisement
ರಾಜ್ಯದಲ್ಲಿ ಇಂದು 17 ಜನರಿಗೆ ಸೋಂಕು ತಾಗಿರುವುದು ದೃಢವಾಗಿದೆ. ಬುಧವಾರ ರಾತ್ರಿ ಐದು ಜನರಿಗೆ ಸೋಂಕು ದೃಢವಾಗಿದ್ದು, ಬುಧವಾರ ಸಂಜೆ 5 ಗಂಟೆಯ ನಂತರ ಇದುವರೆಗೆ ಒಟ್ಟು 22 ಜನರ ದೇಹದೊಳಗೆ ಕೋವಿಡ್-19 ಸೋಂಕು ಹೊಕ್ಕಿದೆ.
Related Articles
Advertisement
ಬಾಗಲಕೋಟೆಯ 23 ವರ್ಷದ ಯುವಕ ದೇಶೀಯ ಪ್ರಯಾಣದ ಹಿನ್ನಲೆ ಹೊಂದಿದ್ದು, ಸೋಂಕು ದೃಢವಾಗಿದೆ. ದಾವಣಗೆರೆಯಲ್ಲಿ ಇಬ್ಬರಿಗೆ ಸೋಂಕು ತಾಗಿದ್ದು, ಓರ್ವ ಕಂಟೈನ್ ಮೆಂಟ್ ಝೋನ್ ಸಂಪರ್ಕಕ್ಕೆ ಬಂದಿದ್ದರೆ, ಮತ್ತೋರ್ವ ಶೀತ ಜ್ವರದಿಂದ ಬಳಲುತ್ತಿದ್ದಾನೆ ಎನ್ನಲಾಗಿದೆ.
ಇಬ್ಬರು ಸಾವು: 80 ವರ್ಷದ ಮಹಿಳೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಪಾರ್ಶ್ವವಾಯು ಸಮಸ್ಯೆಯಿಂದ ದಾಖಲಾಗಿದ್ದರು. ಎಪ್ರಿಲ್ 24 ರಂದು ಸೋಂಕು ಕಾರಣದಿಂದ ಕೋವಿಡ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಇಂದು ನಿಧನ ಹೊಂದಿದ್ದಾರೆ.
ಆಂಧ್ರಪ್ರದೇಶದ ಅನಂತಪುರ ನಿವಾಸಿ 60 ವರ್ಷದ ವೃದ್ಧ ಬೆಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಸೋಂಕು ಕಂಡುಬಂದಿತ್ತು. ಇಂದು ಹೃದಯಾಘಾತದಿಂದ ಮರಣ ಹೊಂದಿದ್ದಾರೆ.
ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 981ಕ್ಕೆ ಏರಿಕೆಯಾಗಿದೆ. ಸೋಂಕಿನ ಕಾರಣದಿಂದ 35 ಜನರು ಸಾವನ್ನಪ್ಪಿದ್ದು, 456 ಜನರು ಗುಣಮುಖರಾಗಿದ್ದಾರೆ.