ಖಂಡಾಲ: ಪುಣೆ ಸತಾರ ರಾಷ್ಟ್ರೀಯ ಹೆದ್ದಾರಿಯ ಕಂಬಳಿ ಘಾಟಾ ಬಳಿ ಮಂಗಳವಾರ ಬೆಳ್ಳಂಬೆಳಗ್ಗೆ ಸಂಭವಿಸಿದ ಭೀಕರ ಅವಘಡದಲ್ಲಿ ವಿಜಯಪುರ ಮೂಲದ 17 ಮಂದಿ ಕೂಲಿ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ವಿಜಯಪುರದಿಂದ ಕೂಲಿ ಕಾರ್ಮಿಕರನ್ನು ಹೊತ್ತೂಯ್ಯುತ್ತಿದ್ದ ಟ್ರಕ್ ಬ್ಯಾರಿಕೆಡ್‌ಗೆ ಢಿಕ್ಕಿಯಾಗಿ ಮಗುಚಿ ಬಿದ್ದಿದ್ದು ಪರಿಣಾಮವಾಗಿ ಸ್ಥಳದಲ್ಲೇ 17 ಮಂದಿ ದಾರುಣವಾಗಿ ಸಾವನ್ನಪ್ಪಿದ್ದು, 15 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮೃತರ ವಿವರ
ಮದಭಾವಿ ತಾಂಡಾದ ಸಂಗೀತಾ ಕಿರಣ ರಾಠೋಡ,ದೇವುಬಾಯಿ ಮೋಹನ ರಾಠೋಡ, ತನ್ವೀರ ಕಿರಣ ರಾಠೋಡ, ಕಲ್ಲುಬಾಯಿ ರಾಠೋಡ, ವಿಠಲ ಕಿರು ರಾಠೋಡ, ಪ್ರಿಯಾಂಕಾ ಫಲ್ಲು ರಾಠೋಡ, ದೇವಾನಂದ ನಾ ರಾಠೋಡ, ಫಲ್ಲುಬಾಯಿ ವಿ ರಾಠೋಡ, ಕೂಡಗಿ ತಾಂಡಾದ ಅರ್ಜುನ ರ ಚವ್ಹಾಣ್, ಶ್ರೀಕಾಂತ್ ಬಾಸು ರಾಠೋಡ, ಮಾಧವಿ ಅ ರಾಠೋಡ, ಹಡಲಗಿ ತಾಂಡಾದ ಶಂಕರ ರೇಕು ಚವ್ಹಾಣ್, ಸಂತೋಷ ಕಾಶಿನಾಥ ನಾಯಕ, ಮಂಗಳಾಬಾಯಿ ನಾಯಕ,ಕೃಷ್ಣ ಚವ್ಹಾಣ್ ಮತ್ತು ಮೆಹಬೂಸಾಬ ರಜಾಕಸಾಬ ಅತ್ತಾರ ಮಜೀದ ಮೆಹಬೂಬ ಅತ್ತಾರ.
ಸೋಮವಾರ ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ಶಾಲಾ ಬಸ್ 200 ಅಡಿ ಆಳದ ಪ್ರಪಾತಕ್ಕೆ ಬಿದ್ದ ಪರಿಣಾಮ 27 ಮಕ್ಕಳು , ಇಬ್ಬರು ಶಿಕ್ಷಕರು ಹಾಗೂ ವಾಹನ ಚಾಲಕ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದರು.