Advertisement

ಕಾಸರಗೋಡು 17 ಮಂದಿಗೆ ಸೋಂಕು ; ಮಡಿಕೇರಿ: ಶನಿವಾರ ರವಿವಾರ ಲಾಕ್‌ಡೌನ್‌

01:48 AM Jul 11, 2020 | Hari Prasad |

ಕಾಸರಗೋಡು: ಜಿಲ್ಲೆಯಲ್ಲಿ ಶುಕ್ರವಾರ 17 ಮಂದಿಗೆ ಕೋವಿಡ್‌ 19 ಪಾಸಿಟಿವ್‌ ಆಗಿದೆ. ಇವರಲ್ಲಿ ಸಂಪರ್ಕ ಮೂಲಕ 11 ಮಂದಿಗೆ ಸೋಂಕು ತಗಲಿದೆ. ಮೂವರು ಇತರ ರಾಜ್ಯಗಳಿಂದ, ಮೂವರು ವಿದೇಶದಿಂದ ಬಂದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ| ಎ.ವಿ.ರಾಮದಾಸ್‌ ತಿಳಿಸಿದರು.

Advertisement

ಸಂಪರ್ಕ ಮೂಲಕ 11 ಮಂದಿಗೆ ಪಾಸಿಟಿವ್‌
ಜಿಲ್ಲೆಯಲ್ಲಿ ಒಂದೇ ದಿನ ಸಂಪರ್ಕ ಮೂಲಕ 11 ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಜಾಗರೂಕತೆ ವಹಿಸಬೇಕು ಮತ್ತು ತರಕಾರಿ ಅಂಗಡಿಯ ನೌಕರ ಮತ್ತು ಮಾಲಕರಿಗೆ ಸೋಂಕು ತಗಲಿರುವ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಬರುವ ವಾಹನಗಳ ತಪಾಸಣೆ ಚುರುಕುಗೊಳಿಸಲಾಗುವುದು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ| ಎ.ವಿ.ರಾಮದಾಸ್‌ ತಿಳಿಸಿದರು.

ಕೇರಳದಲ್ಲಿ 416 ಮಂದಿಗೆ ಸೋಂಕು
ರಾಜ್ಯದಲ್ಲಿ ಶುಕ್ರವಾರ 416 ಮಂದಿಗೆ ಕೋವಿಡ್‌ 19 ಸೋಂಕು ದೃಢೀಕರಿಸಲಾಗಿದೆ. ಇದೇ ಸಂದರ್ಭ 112 ಮಂದಿ ರೋಗಮುಕ್ತರಾಗಿದ್ದಾರೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಿಳಿಸಿದ್ದಾರೆ.

ಕೊಡಗು: 9 ಮಂದಿಗೆ ಸೋಂಕು
ಜಿಲ್ಲೆಯಲ್ಲಿ ಶುಕ್ರವಾರ 9 ಮಂದಿಯಲ್ಲಿ ಕೋವಿಡ್‌ 19 ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 131ಕ್ಕೆ ಏರಿಕೆಯಾಗಿದೆ.

ವಿರಾಜಪೇಟೆ ತಾಲೂಕಿನ ತಿತಿಮತಿಯಲ್ಲಿ ಈ ಹಿಂದೆ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 6, 35 ವರ್ಷದ ಮಹಿಳೆ, 32, 45 ವರ್ಷದ ಪುರುಷ, 20, 19 ವರ್ಷದ ಯುವಕ ಮತ್ತು 45 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ.

Advertisement

ಒಟ್ಟು ಸೋಂಕಿತರ ಸಂಖ್ಯೆ 131 ಆಗಿದ್ದು, 18 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದು, 112 ಮಂದಿಗೆ ಮಡಿಕೇರಿಯ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮಡಿಕೇರಿ: ಶನಿವಾರ ರವಿವಾರ ಲಾಕ್‌ಡೌನ್‌
ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜು. 26ರ ವರೆಗೆ ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 6ರಿಂದ ಸಂಜೆ 4ರ ವರೆಗೆ ಮಾತ್ರ ಕಾರ್ಯನಿರ್ವಹಿಸಲು ಮತ್ತು ಜು. 18 ಹಾಗೂ 25ರ ಶನಿವಾರ ಕಡ್ಡಾಯವಾಗಿ ಲಾಕ್‌ಡೌನ್‌ ಮಾಡಲು ಮಡಿಕೇರಿ ನಗರ ಚೇಂಬರ್‌ ಆಫ್ ಕಾಮರ್ಸ್‌ ನಿರ್ಧರಿಸಿದೆ. ನಗರದ ವರ್ತಕರು, ಸಾರ್ವಜನಿಕರು ತಮ್ಮ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಸ್ವ-ನಿರ್ಬಂಧಕ್ಕೊಳಗಾಗಲು ವಿನಂತಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next