Advertisement

ಮಿದುಳು ಸೋಂಕಿನಿಂದ 17 ಮಕ್ಕಳು ಸಾವು

12:36 AM Jun 10, 2019 | Sriram |

ಹೊಸದಿಲ್ಲಿ: ಬಿಹಾರದ ವಿವಿಧೆಡೆ ಕಾಣಿಸಿ ಕೊಂಡ ಮಿದುಳು ಸೋಂಕಿಗೆ ಕಳೆದ ಒಂದು ವಾರದಲ್ಲಿ 17ಕ್ಕೂ ಹೆಚ್ಚು ಮಕ್ಕಳು ಸಾವನ್ನ ಪ್ಪಿದ್ದಾರೆ. ಇನ್ನೂ ಹಲವು ಮಕ್ಕಳು ವಿಪರೀತ ಜ್ವರದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಪರಿಸ್ಥಿತಿ ಚಿಂತಾಜನಕ ಎಂದು ಹೇಳಲಾಗಿದೆ. ಮುಜಾಫ‌ರಪುರದಲ್ಲಿ ಸೋಂಕು ವ್ಯಾಪಿಸಿದ್ದು, ಇಲ್ಲೇ 12 ಮಕ್ಕಳು ಸಾವನ್ನಪ್ಪಿದ್ದಾರೆ.

Advertisement

ರವಿವಾರ ಒಟ್ಟು 13 ಮಕ್ಕಳು ಆಸ್ಪತ್ರೆಗೆ ದಾಖಲಾಗಿವೆ. ಶುಕ್ರವಾರ 21 ಮಕ್ಕಳು ದಾಖ ಲಾಗಿದ್ದವು. ಇನ್ನೂ 14 ಪ್ರಕರಣಗಳು ಇನ್ನೊಂದು ಆಸ್ಪತ್ರೆಯಲ್ಲಿ ದಾಖಲಾಗಿವೆ. ಕಳೆದ ಮೂರು ವರ್ಷದ ಹಿಂದೆಯೂ ಇದೇ ರೋಗ ಕಂಡುಬಂದಿತ್ತು. ತಾಪಮಾನ ವಿಪರೀತ ಏರಿಕೆ ಯಾದಾಗ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗಿದೆ. ಮಳೆ ಆರಂಭವಾಗು ತ್ತಿದ್ದಂತೆಯೇ ರೋಗ ನಿಯಂತ್ರಣಕ್ಕೆ ಬರುತ್ತದೆ.

ವಿಪರೀತ ಜ್ವರ ಕಾಣಿಸಿಕೊಂಡಾಗ ಮಕ್ಕಳನ್ನು ಪಾಲಕರು ಆಸ್ಪತ್ರೆಗೆ ಕರೆತರುತ್ತಾರೆ. ಕೆಲವು ಮಕ್ಕಳಲ್ಲಿ ಹೈಪೋಗ್ಲೆ„ಸೀಮಿಯಾ ಕಾಣಿಸಿ ಕೊಳ್ಳುತ್ತದೆ. ಇಂಥವರಿಗೆ ದೇಹದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ. ಸಕ್ಕರೆ ಪ್ರಮಾಣ ಕಡಿಮೆಯಾದರೆ ಜೀವ ರಕ್ಷಕ ವ್ಯವಸ್ಥೆಯೇ ವಿಫ‌ಲವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next