Advertisement

ಚಿರತೆ ಕೊಂದು ಚರ್ಮ ಮಾರಲೆತ್ನಿಸಿದ 17 ಮಂದಿ ಬಂಧನ

04:06 PM Jul 11, 2017 | Team Udayavani |

ಹೈದರಾಬಾದ್‌ : ತೆಲಂಗಾಣದ ನಿರ್ಮಲ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಚಿರತೆಯೊಂದನ್ನು ಕೊಂದು ಅದರ ಚರ್ಮವನ್ನು ಮಾರಲೆತ್ನಿಸಿದ ಆರೋಪದ ಮೇಲೆ ನಾಲ್ವರು ಬೇಟೆಗಾರರು ಸೇರಿದಂತೆ ಒಟ್ಟು 17 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. 

Advertisement

ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ನೆರವಿನಲ್ಲಿ ನಡೆಸಲಾದ ಜಂಟಿ ಕಾರ್ಯಾಚರಣೆಯಲ್ಲಿ ನಾಲ್ವರು ಬೇಟೆಗಾರರ ಸಹಿತ 17 ಮಂದಿಯನ್ನು ಬಂಧಿಸಲಾಗಿ ಅವರಿಂದ ಚಿರತೆಯ ಚರ್ಮವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಚಕೊಂಡ ಪೊಲೀಸ್‌ ಕಮಿಷನರ್‌ ಮಹೇಶ್‌ ಎಂ ಭಾಗವತ್‌ ಸುದ್ದಿಗಾರರಿಗೆ ತಿಳಿಸಿದರು. 

ಕಳೆದ ಜೂನ್‌ 7ರಂದು ಇಲ್ಲಿಗೆ ಸಮೀಪದ ಘಾಟ್‌ಕೇಸರ್‌ ಎಂಬಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ ಆರು ಸದಸ್ಯರ ಗ್ಯಾಂಗನ್ನು ಬಂಧಿಸಿ ಅವರಿಂದ ಚಿರತೆಯ ಚರ್ಮವನ್ನು ವಶಪಡಿಸಿಕೊಳ್ಳಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next