Advertisement

2011 ರಿಂದ ಭಾರತದ ಪೌರತ್ವ ತೊರೆದ 17.5 ಲಕ್ಷ ಮಂದಿ: ಎಸ್. ಜೈಶಂಕರ್‌ ಮಾಹಿತಿ

07:53 PM Jul 22, 2023 | Team Udayavani |

ನವದೆಹಲಿ: ಲೋಕಸಭೆಯಲ್ಲಿ ನಡೆಯುತ್ತಿರುವ ಮಳೆಗಾಲದ ಅಧಿವೇಶನದಲ್ಲಿ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಅಧಿವೇಶನದ ವೇಳೆ ಮಾತನಾಡಿದ ಎಸ್‌. ಜೈಶಂಕರ್‌ 2011 ರಿಂದ 2023 ರ ಜೂನ್ ವರೆಗೆ ಎಷ್ಟು ಮಂದಿ ಭಾರತದ ಪೌರತ್ವ ತೊರೆದಿದ್ದಾರೆ ಮತ್ತು ಅವರೆಲ್ಲ ಎಲ್ಲಿ ನೆಲೆಸಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ.

Advertisement

ಎಸ್‌. ಜೈಶಂಕರ್‌ ನೀಡಿರುವ ಮಾಹಿತಿಗಳ ಪ್ರಕಾರ 2011 ರಿಂದ 2023 ರ ಜೂನ್ ವರೆಗೆ 17.5 ಲಕ್ಷ ಮಂದಿ ಭಾರತದ ಪೌರತ್ವ ತೊರೆದಿದ್ಧಾರೆ. ಮೊದಲು ಭಾರತದಲ್ಲಿ ಜೀವಿಸುತ್ತಿದ್ದ ನಾಗರೀಕರು ಬೇರೆ ಬೇರೆ ಕಾರಣಗಳಿಂದಾಗಿ ಭಾರತವನ್ನು ತೊರೆದು ವಿದೇಶದಲ್ಲಿ ನೆಲೆಸಿದ್ದಾರೆ. ಅವರು ಅಲ್ಲಿನ ಪೌರತ್ವ ಪಡೆದ ಬಳಿಕ ಭಾರತದ ಪೌರತ್ವ ತ್ಯಜಿಸಿದ್ದಾರೆ. ವಿದೇಶದಲ್ಲಿನ ವಿಪುಲವಾದ ಉದ್ಯೋಗಾವಕಾಶಗಳೇ ಭಾರತದ ಪೌರತ್ವ ತ್ಯಜಿಸಲು ಮುಖ್ಯ ಕಾರಣ ಎಂದು ಅವರು ಹೇಳಿದ್ದಾರೆ.

ಭಾರತದ ಮಂದಿ ಪೌರತ್ವ ತ್ಯಜಿಸಿದ್ದಾರೆ ಎನ್ನುವುದು ಭಾರತಕ್ಕೆ ಸಮಸ್ಯೆಯಲ್ಲ. ಬದಲಾಗಿ ವಿದೇಶಗಳಲ್ಲಿ ಭಾರತೀಯರು ಪೌರತ್ವ ಪಡೆಯುವುದು ಭಾರತದ ಪಾಲಿಗೆ ಹೆಮ್ಮೆಯ ಸಂಗತಿ. ಬೇರೆ ಬೇರೆ ದೇಶಗಳಲ್ಲಿ ಭಾರತೀಯರು ನೆಲೆಸಿರುವುದು ಇತರೆ ದೇಶಗಳೊಂದಿಗೆ ಭಾರತದ ಹೊಂದಿರುವ ನಂಟನ್ನು ವೃದ್ಧಿಸುತ್ತದೆ ಎಂದೂ ಅವರು ತಿಳಿಸಿದ್ದಾರೆ.

2011 ರಲ್ಲಿ 1,22,819, 2012 ರಲ್ಲಿ 1,20,923, 2013 ರಲ್ಲಿ 1,31,405, 2014 ರಲ್ಲಿ 1,29,328, 2015 ರಲ್ಲಿ 1,31,405, 2016 ರಲ್ಲಿ 1,41,603 , 2017 ರಲ್ಲಿ 1,33,049 ,2018 ರಲ್ಲಿ 1,34,561, 2019 ರಲ್ಲಿ 1,44,017 , 2020 ರಲ್ಲಿ 85,256 , 2021 ರಲ್ಲಿ 1,63,370, 2022 ರಲ್ಲಿ 2,25,620 ಮಂದಿ ಭಾರತದ ಪೌರತ್ವ ತ್ಯಜಿಸಿದ್ದಾರೆ.

ಹೆಚ್ಚು ಭಾರತೀಯರು ಎಲ್ಲೆಲ್ಲಿ ನೆಲೆಸಿದ್ದಾರೆ..?

Advertisement

2023 (ಜೂನ್‌ ವರೆಗೆ) ರಲ್ಲಿ ಭಾರತೀಯ ಪೌರತ್ವ ತ್ಯಜಿಸಿದವರಲ್ಲಿ ಹೆಚ್ಚು ಮಂದಿ ಅಮೆರಿಕ ಮತ್ತು ಆಸ್ಟ್ರೇಲಿಯಾ ದೇಶಗಳನ್ನು ಆಯ್ಕೆ ಮಾಡಿಕೊಂಡಿದ್ಧಾರೆ. 87 ಸಾವಿರ ಜನರ ಪೈಕಿ ಸುಮಾರು 23 ಸಾವಿರ ಜನ ಈ ಎರಡು ದೇಶಗಳಲ್ಲಿ ನೆಲೆಸಿದ್ದಾರೆ. ಅದರ ನಂತರದ ಆಯ್ಕೆಗಳಲ್ಲಿ ಕೆನಡಾ, ಬ್ರಿಟನ್‌, ಇಟಲಿ, ನ್ಯೂಜಿಲ್ಯಾಂಡ್‌, ಸಿಂಗಾಪುರ, ಜರ್ಮನಿ, ನೆದರ್‌ಲ್ಯಾಂಡ್ಸ್‌, ಸ್ವೀಡನ್‌, ಸ್ಪೇನ್‌  ದೇಶಗಳಿವೆ ಎಂದು ಜೈಶಂಕರ್‌ ತಿಳಿಸಿದ್ದಾರೆ.

2020 ರ ವರೆಗಿನ ವರದಿಯ ಪ್ರಕಾರ ಅಮೆರಿಕದಲ್ಲಿ 40 ಲಕ್ಷ, ಯುಎಇ ಯಲ್ಲಿ 35 ಲಕ್ಷ, ಸೌದಿ ಅರೇಬಿಯಾದಲ್ಲಿ 25 ಲಕ್ಷ ಭಾರತೀಯರು ನೆಲೆಸಿದ್ದಾರೆ.

ಇದನ್ನೂ ಓದಿ: ಸಂಸದ ರಮೇಶ ಜಿಗಜಿಣಗಿ ಹೆಸರಿನಲ್ಲಿ ಅನಾಮಧೇಯ ಕರೆ

Advertisement

Udayavani is now on Telegram. Click here to join our channel and stay updated with the latest news.

Next