Advertisement

16ರ ಸುತ್ತು ತಲುಪಿದ ಐಗಾ ಸ್ವಿಯಾಟೆಕ್‌

10:48 PM Jul 02, 2021 | Team Udayavani |

ಲಂಡನ್‌ : ವಿಂಬಲ್ಡನ್‌ ವನಿತಾ ಸಿಂಗಲ್ಸ್‌ನ “ಬ್ಯಾಟಲ್‌ ಆಫ್ ಜೆಕ್ಸ್‌’ನಲ್ಲಿ 8ನೇ ಶ್ರೇಯಾಂಕದ ಕ್ಯಾರೋಲಿನಾ ಪ್ಲಿಸ್ಕೋವಾ ಮೇಲುಗೈ ಸಾಧಿಸಿದ್ದಾರೆ. ಅವರು ಟೆರೆಜಾ ಮಾರ್ಟಿಂಕೋವಾ ವಿರುದ್ಧ 6-3, 6-3 ನೇರ ಸೆಟ್‌ ಜಯ ಒಲಿಸಿಕೊಂಡರು.

Advertisement

ಪೋಲೆಂಡ್‌ನ‌ ಐಗಾ ಸ್ವಿಯಾಟೆಕ್‌ ರೊಮೇನಿಯಾದ ಐರಿನಾ ಕ್ಯಾಮೇಲಿಯಾ ಬೆಗು ವಿರುದ್ಧ 6-1, 6-0 ಅಂತರದ ಸುಲಭ ಗೆಲುವು ಕಂಡರು.

ಅಮೆರಿಕದ ಸ್ಲೋನ್‌ ಸ್ಟೀಫ‌ನ್ಸ್‌ ಅವರನ್ನು ಮಣಿಸಿದ ರಶ್ಯದ ಲಿಯುದ್ಮಿಲಾ ಸಾಮೊÕನೋವಾ ಅಚ್ಚರಿಯ ಫ‌ಲಿತಾಂಶ ದಾಖಲಿಸಿದರು. 2-6, 6-2, 6-4 ಅಂತರದ ಜಯದೊಂದಿಗೆ ಸಾಮೊÕನೋವಾ 4ನೇ ಸುತ್ತಿಗೇರಿದರು. ಬೆಲರೂಸ್‌ನ ಅರಿನಾ ಸಬಲೆಂಕಾ, ಕಜಾಕ್‌ಸ್ಥಾನದ ಎಲೆನಾ ರಿಬಾಕಿನಾ ಕೂಡ 3ನೇ ಸುತ್ತು ದಾಟಿದ್ದಾರೆ.

ರುಬ್ಲೇವ್‌ 4ನೇ ಸುತ್ತಿಗೆ
ಪುರುಷರ ಸಿಂಗಲ್ಸ್‌ನಲ್ಲಿ ರಶ್ಯದ ಆ್ಯಂಡ್ರೆ ರುಬ್ಲೇವ್‌ 4ನೇ ಸುತ್ತು ಮುಟ್ಟಿದ್ದಾರೆ. ಅವರು ಇಟಲಿಯ ಫ್ಯಾಬಿಯೊ ಫೊಗ್ನಿನಿ ವಿರುದ್ಧ 6-3, 5-7, 6-4, 6-2 ಅಂತರದ ಮೇಲುಗೈ ಸಾಧಿಸಿದರು. ಮತ್ತೋರ್ವ ರಶ್ಯನ್‌ ಕರೆನ್‌ ಕಶನೋವ್‌, ಚಿಲಿಯ ಕ್ರಿಸ್ಟಿಯನ್‌ ಗ್ಯಾರಿನ್‌ ಕೂಡ 3ನೇ ಸುತ್ತಿನಿಂದ ಮುನ್ನಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next