Advertisement

ಮಂಜುಗುಣಿಯಲ್ಲಿ ಏ. 16 ಕ್ಕೆ ಬೆಳಿಗ್ಗೆಯೇ ಮಹಾರಥೋತ್ಸವ

07:45 PM Apr 13, 2022 | Team Udayavani |

ಶಿರಸಿ: ಕರ್ನಾಟಕದ ತಿರುಪತಿ ಎಂದೇ ಹೆಸರಾದ ಮಂಜುಗುಣಿಯ ಶ್ರೀ ವೆಂಕಟರಮಣ ದೇವರ‌ ಮಹಾ ರಥೋತ್ಸವ ಏ.16 ರಂದು ಮುಂಜಾನೆ ಎಂಟಕ್ಕೇ ನಡೆಯಲಿದೆ.

Advertisement

ಅಂದು ಮುಂಜಾನೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಬೆಳಿಗ್ಗೆ 7 ಕ್ಕೆ ಶ್ರೀದೇವರ ರಥಾರೋಹಣ ನಡೆಯಲಿದೆ. ಬಳಿಕ 8 ಕ್ಕೆ ಭಕ್ತರ ಹರ್ಷೋದ್ಘಾರದ ನಡುವೆ ರಥೋತ್ಸವ ನಡೆಯಲಿದೆ. ರಥೋತ್ಸವದ ಬಳಿಕ ಅದೇ ದಿನ ನಡು ರಾತ್ರಿ 1 ಗಂಟೆ ತನಕ ರಥಾರೂಢ ಶ್ರೀ ದೇವರ ದರ್ಶನ ನಡೆಯಲಿದೆ ಎಂದು ಮಂಜುಗುಣಿಯ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ಟ ತಿಳಿಸಿದ್ದಾರೆ.

ಏ.2 ರಿಂದ ಮಹಾ ರಥಪೂಜೆಯೊಂದಿಗೆ ರಥೋತ್ಸವದ‌ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದೆ. ಏ.10ಕ್ಕೆ ಪ್ರಾರ್ಥನೆ, ದೇವನಾಂದಿ ಮೂಲಕ ಯಾಗಶಾಲಾ ಪ್ರವೇಶ ‌ಮಾಡಲಾಗಿದೆ. 11ಕ್ಕೆ ಧ್ವಜ ಪೂಜೆ, ಧ್ವಜ ಬಲಿಗಳು, ರತ್ನ ಮಂಟಪೋತ್ಸವ ನಡೆದಿವೆ. 12 ಕ್ಕೆ ಭೂತರಾಜ ಬಲಿ, ಗಜಯಂತ್ರೋತ್ಸವ, 13ಕ್ಕೆ ಸಿಂಹ‌ಯಂತ್ರೋತ್ಸವ ಕಾರ್ಯಕ್ರಮಗಳ ಜರುಗಿವೆ.

ಏ.14 ರಂದು ವಿವಿಧ‌ ಧಾರ್ಮಿಕ ಕಾರ್ಯಕ್ರಮಗಳ ಜೊತೆ ರಾತ್ರಿ ಶೇಷ ಯಂತ್ರೋತ್ಸವ, 15 ಕ್ಕೆ ಶ್ರೀದೇವರ ಪ್ರತಿಷ್ಠಾ ದಿ‌ನ ಕೂಡ ಆಗಿದ್ದು, ಅದೇ ದಿನ ರಾತ್ರಿ‌ ವಿಶೇಷ ದಂಡಬಲಿ, ಭೂತರಾಜ ಬಲಿ ಹಾಗೂ ಗರುಡಯಂತ್ರೋತ್ಸವ ನಡೆಯಲಿದೆ.

ಏ.೧೬ರ ಬೆಳಿಗ್ಗೆನೇ ಮಹಾರಥೋತ್ಸವ ನಡೆಯಲಿದೆ ಎಂಬುದು ವಿಶೇಷವಾಗಿದೆ. ೧೬ರ ಮುಂಜಾನೆ ರಥ ಶುದ್ದಿ, ರಥ ಪೂಜಾ, ರಥಬಲಿಗಳ ಮೂಲಕ ರಥಾರೋಹಣಗೊಳ್ಳುವ ವೆಂಕಟರಮಣ ದೇವರಿಗೆ ವಿಶೇಷ ಪೂಜೆಗಳೂ ನಡೆಯಲಿವೆ. ಬಳಿಕ ೮ಕ್ಕೆ ಭಕ್ತರು ರಥಾರೂಢ ದೇವರನ್ನು‌ ಎಳೆಯಲಿದ್ದಾರೆ. ಅಂದು‌ ಮಧ್ಯಾಹ್ನ ಪ್ರಸಾದ ಭೋಜನ ಕೂಡ‌ ನಡೆಯಲಿದೆ.

Advertisement

ಏ. 17ಕ್ಕೆಅವಭ್ರತ ಸ್ನಾನ, ಏ.30ಕ್ಕೆ ಸಂಪ್ರೋಕ್ಷಣ್ಯ ನಡೆಯಲಿದೆ ಎಂದು ಶ್ರೀನಿವಾಸ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next