ವಿಕ್ರೋಲಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ವಿಕ್ರೋಲಿ-ಕಾಂಜೂರ್‌ಮಾರ್ಗ ಸ್ಥಳೀಯ ಸಮಿತಿಯ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರುಗಳ 167ನೇ ಜಯಂತಿ ಉತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ಆ. 28ರಂದು ವಿಕ್ರೋಲಿ ಪೂರ್ವದ ಸ್ಥಳೀಯ ಸಮಿತಿಯ ಕಚೇರಿಯಲ್ಲಿ ನಡೆಯಿತು.
ಸಂಜೆ 5ರಿಂದ ದೀಪ ಪ್ರಜ್ವಲನೆಯೊಂದಿಗೆ ಓಂ ನಮೋ ನಾರಾಯಣ ನಮೋ ಶಿವಾಯ ಜಪ ಪ್ರಾರಂಭಗೊಂಡಿತು. ಮಂಜುನಾಥ್ ಶಾಂತಿ ಅವರು ಗುರುಪೂಜೆಯನ್ನು ವಿಧಿವತ್ತಾಗಿ ನೆರವೇರಿಸಿದರು. ಪೂಜಾ ಕೈಂಕರ್ಯವನ್ನು ಸ್ಥಳೀಯ ಸಮಿತಿಯ ಗೌರವ ಕೋಶಾಧಿಕಾರಿ ಜಗಜೀವನ್ ಪೂಜಾರಿ ಮತ್ತು ಸರ್ವಾಣಿ ಜೆ. ಪೂಜಾರಿ ನೆರವೇರಿಸಿದರು. ಶ್ರೀ ಬ್ರಹ್ಮಲಿಂಗೇಶ್ವರ ಭಜನ ಮಂಡಳಿ ಭಾಂಡೂಪ್ ಮತ್ತು ಬಿಲ್ಲವರ ಅಸೋಸಿಯೇಶನ್ ವಿಕ್ರೋಲಿ-ಕಾಂಜೂರ್‌ಮಾರ್ಗ ಸ್ಥಳೀಯ ಸಮಿತಿಯಿಂದ ಭಜನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ರಾತ್ರಿ 8ರಿಂದ ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿತರಣೆ ನಡೆಯಿತು. ಉಪಾಧ್ಯಕ್ಷೆ ನಳಿನಿ ಸುವರ್ಣ, ಹರ್ಷಾ, ಪೂಜಾ ಇವರ ವತಿಯಿಂದ ಅನ್ನಸಂತರ್ಪಣೆ ನೆರವೇರಿತು. ಸಮಿತಿಯ ಗೌರವಾಧ್ಯಕ್ಷ ಕೆ. ಎಂ. ಮಾಬಿಯನ್, ಕಾರ್ಯಾಧ್ಯಕ್ಷ ರಾಘವ ಕುಂದರ್, ಗೌರವ ಪ್ರಧಾನ ಕಾರ್ಯದರ್ಶಿ ಉಮೇಶ್ ಪೂಜಾರಿ, ಸದಸ್ಯರಾದ ದೇವದಾಸ್ ಸನಿಲ್, ಸಂಜೀವ ಪೂಜಾರಿ, ನಾರಾಯಣ ಪೂಜಾರಿ, ರಮೇಶ್ ಪೂಜಾರಿ, ಸುರೇಶ್ ಮಾಬಿಯಾನ್, ಗೋಪಾಲ್ ಪೂಜಾರಿ, ಸುರೇಶ್ ಪೂಜಾರಿ, ಕಿರಣ್ ಪೂಜಾರಿ, ವಿಮಲಾ ಆರ್. ಕುಂದರ್, ವಿದ್ಯಾ ಸುರೇಶ್ ಕೋಟ್ಯಾನ್, ಬೇಬಿ ಪೂಜಾರಿ, ಶ್ವೇತಾ ಆರ್. ಪೂಜಾರಿ, ಮನೋರಮಾ ಜಯಂತಿ ಐಲ್, ಪ್ರಮೀಳಾ ಆರ್. ಪೂಜಾರಿ, ಜಲಜಾ, ಅನುಷಾ, ಲತಾ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ:9 ವಾರ್ಡ್‌ಗಳ ಗೆಲುವಿನ ಕಟ್ಟೆ ಹತ್ತುವವರಾರು?
ಮುಖ್ಯ ಅತಿಥಿಗಳಾಗಿ ಕೇಂದ್ರ ಕಚೇರಿಯ ಪರವಾಗಿ ಗೌರವ ಕೋಶಾಧಿಕಾರಿ ರಾಜೇಶ್ ಬಂಗೇರ ಉಪಸ್ಥಿತರಿದ್ದರು. ಅತಿಥಿಗಳಾಗಿ ಹೊಟೇಲ್ ಉದ್ಯಮಿಗಳಾದ ಹೇಮಂತ್ ಸಾಲ್ಯಾನ್, ವಿಕ್ರೋಲಿ ಕನ್ನಡ ಸಂಘದ ಅಧ್ಯಕ್ಷ ಸತೀಶ್ ಐಲ್, ಗೌರವ ಪ್ರಧಾನ ಕಾರ್ಯದರ್ಶಿ ಉದಯ್ ಶೆಟ್ಟಿ, ಗೌರವ ಕೋಶಾಧಿಕಾರಿ ಪ್ರವೀಣ್ ಶೆಟ್ಟಿ, ವಿಕ್ರೋಲಿ ಬಂಟ್ಸ್ ಸಂಘದ ಅಧ್ಯಕ್ಷ ಗಣೇಶ್ ಶೆಟ್ಟಿ, ಗೌರವ ಕಾರ್ಯದರ್ಶಿ ಯುಗಾನಂದ್ ಶೆಟ್ಟಿ, ಶಿವ ಟೇಲರ್ ಇದರ ಮಾಲಕ ಶಿವರಾಂ ಸಾಲ್ಯಾನ್, ನಂದಿನಿ ಟೈಲರ್ ಮಾಲಕ ನವೀನ್ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು. ಅತಿಥಿ-ಗಣ್ಯರನ್ನು ಸಮಿತಿಯ ಪದಾಧಿಕಾರಿಗಳು ಪ್ರಸಾದವನ್ನಿತ್ತು ಗೌರವಿಸಿದರು.