Advertisement

ನ್ಯಾಶನಲ್‌ ಡೆಮಾಕ್ರಟಿಕ್‌ ಫ್ರಂಟ್‌ ಆಫ್ ಬೋಡೋಲ್ಯಾಂಡ್‌ : 1,615 ಉಗ್ರರ ಶರಣಾಗತಿ

09:47 AM Jan 31, 2020 | Hari Prasad |

ಗುವಾಹಾಟಿ: ಬೋಡೋ ಉಗ್ರಗಾಮಿ ಸಂಘಟನೆ ಜತೆಗೆ ಶಾಂತಿ ಒಪ್ಪಂದ ಮಾಡಿಕೊಂಡ ಮೂರೇ ದಿನಗಳಲ್ಲಿ ನ್ಯಾಶನಲ್‌ ಡೆಮಾಕ್ರಟಿಕ್‌ ಫ್ರಂಟ್‌ ಆಫ್ ಬೋಡೋಲ್ಯಾಂಡ್‌ ನ (ಎನ್‌ಬಿಎಫ್ಸಿ) 1,615 ಮಂದಿ ಉಗ್ರರು ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗತರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಈ ಬೆಳವಣಿಗೆಯನ್ನು ಸ್ವಾಗತಿಸಿದ್ದಾರೆ. ಹಿಂಸೆಯಿಂದ ಯಾವುದೇ ಸಾಧನೆ ಸಾಧ್ಯವಿಲ್ಲ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಮತ್ತು ಸಂವಿಧಾನದಲ್ಲಿ ನಂಬಿಕೆ ಇರುವುದನ್ನು ಈ ಅಂಶ ಪುಷ್ಟೀಕರಿಸುತ್ತದೆ ಎಂದಿದ್ದಾರೆ. ಶರಣಾಗತರಾಗಿರುವ ಉಗ್ರರು ಎ.ಕೆ.47 ರೈಫ‌ಲ್‌ಗ‌ಳು, ಲೈಟ್‌ ಮಷಿನ್‌ ಗನ್‌ಗಳು ಸೇರಿದಂತೆ 4,800 ಶಸ್ತ್ರಾಸ್ತ್ರಗಳನ್ನೂ ಸರಕಾರಕ್ಕೆ ಒಪ್ಪಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next