ಒಡಿಶಾ: ಒಡಿಶಾದ ಕಟಕ್ ನಲ್ಲಿ ಬೃಹತ್ ಸೈನರ್ ಕ್ರೈಮ್ ಜಾಲವನ್ನು ಬೇಧಿಸಿರುವ ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಬರೋಬ್ಬರಿ 16 ಸಾವಿರ ಸಿಮ್ ಕಾರ್ಡ್ ಗಳನ್ನು ವಶಪಡಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:BMW 5 Series ಫೇಸ್‌ಲಿಫ್ಟ್ ಆವೃತ್ತಿ ಬಿಡುಗಡೆ: ಉತ್ಕೃಷ್ಟ ಡ್ಯಾಶ್‌ಬೋರ್ಡ್, ವಿಶಾಲ ಒಳಾಂಗಣ
ಪ್ರಕರಣದ ಬಗ್ಗೆ ಭುವನೇಶ್ವರ್ ಕಟಕ್ ಪೊಲೀಸ್ ಕಮಿಷನರ್ ಎಸ್.ಕೆ.ಪ್ರಿಯದರ್ಶಿ ಅವರು ಎಎನ್ ಐ ಸುದ್ದಿಸಂಸ್ಥೆಗೆ ನೀಡಿರುವ ವಿವರದಂತೆ, ನಮ್ಮ ಪೊಲೀಸರ ತಂಡ ಸೈಬರ್ ಕ್ರೈಮ್ ಜಾಲವನ್ನು ಬೇಧಿಸಿದ್ದು, ಇಬ್ಬರು ಸರ್ವೀಸ್ ಪ್ರೊವೈಡರ್ ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದಾರೆ. ಇವರು ನಕಲಿ ಐಡಿಗಳನ್ನು ಬಳಸಿ ಸಿಮ್ ಗಳನ್ನು ತಯಾರಿಸಿ ರಾಜ್ಯದ ಹೊರಗೆ ಹಣದ ವರ್ಗಾವಣೆಗೆ ಬಳಸುತ್ತಿದ್ದರು ಎಂದು ತಿಳಿಸಿದ್ದಾರೆ.
ಆರೋಪಿಗಳಿಂದ 16 ಸಾವಿರ ಸಿಮ್ ಕಾರ್ಡ್ ಹಾಗೂ ಅಪಾರ ಪ್ರಮಾಣದ ಸೆಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಸಾಮಾನ್ಯವಾಗಿ ಸೂಕ್ತ ದಾಖಲೆಗಳನ್ನು ನೀಡಿದ ನಂತರವೇ ಸರ್ವೀಸ್ ಪ್ರೊವೈಡರ್ ಗಳು ಸಿಮ್ ಕಾರ್ಡ್ ಸಕ್ರಿಯಗೊಳ್ಳುತ್ತದೆ. ಆದರೆ ಈ ಅಪರಾಧಿಗಳು ಮೊದಲೇ ಸಕ್ರಿಯಗೊಳಿಸಲಾದ ಸಿಮ್ ಕಾರ್ಡ್ ಗಳನ್ನು ಬಳಸುತ್ತಿದ್ದರು, ಯಾಕೆಂದರೆ ಅವುಗಳನ್ನು ಪತ್ತೆಹಚ್ಚಲು ಆಗುವುದಿಲ್ಲ ಎಂದು ಪ್ರಿಯದರ್ಶಿ ವಿವರಿಸಿದ್ದಾರೆ.
ಆರ್ಥಿಕ ಅಪರಾಧ ಮತ್ತು ವಂಚನೆಗಳು ಸೇರಿದಂತೆ ಸೈಬರ್ ಅಪರಾಧಗಳ ಏರಿಕೆಯ ಹಿನ್ನೆಲೆಯಲ್ಲಿ ಇಂತಹ ಸಿಮ್ ಕಾರ್ಡ್ ಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.63.ರಷ್ಟು ಸೈಬರ್ ಕ್ರೈಮ್ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ ಎಂದು ತಿಳಿಸಿದೆ.