Advertisement
ದೇಶದ ಯಾವುದೇ ಭಾಗದಲ್ಲೂ ಸಿಗದ ಅಪರೂಪದ ಲೋಹ ಇದಾಗಿದೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ದೇಶದ ಎಲ್ಲ ಭಾಗಗಳಲ್ಲೂ ಹುಡುಕಾಟ ನಡೆಸಿತ್ತು. ಅದರಂತೆ ಕಳೆದ ವರ್ಷ ಅಲ್ಲಾಪಟ್ಟಣ ಹಾಗೂ ಗಂಜ್ರಾ ಬಳಿಯ ಬೆಟ್ಟಗುಡ್ಡಗಳಲ್ಲಿ ಶೋಧ ನಡೆಸಿದಾಗ ಲಿಥಿಯಂ ಹಾಗೂ ಕಲ್ಲಿದ್ದಲು ಇರುವುದು ಗೊತ್ತಾಗಿತ್ತು. ಅಂದಿನಿoದಲೂ ಅಧಿಕಾರಿಗಳ ತಂಡ ಸಂಶೋಧನೆಯಲ್ಲಿ ತೊಡಗಿದ್ದರು.
Related Articles
Advertisement
ರಾಜಸ್ಥಾನ, ಛತ್ತೀಸ್‌ಘಡ, ಗುಜರಾತ್ ಹಾಗೂ ಒಡಿಶಾ ರಾಜ್ಯಗಳ ವಿವಿಧ ಭಾಗಗಳಲ್ಲಿ ಲಿಥಿಯಂ ನಿಕ್ಷೇಪವನ್ನು ಹೊರತೆಗೆಯುವ ಕಾರ್ಯಗಳು ನಡೆಯುತ್ತಿವೆ. ಅದರ ಮಧ್ಯೆ ಮಂಡ್ಯದ ಶ್ರೀರಂಗಪಟ್ಟಣದ ಬಳಿ ಪತ್ತೆಯಾಗಿರುವುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ವರ್ಷ ಅಲ್ಲಾಪಟ್ಟಣ ಬಳಿ ಇದೇ ಸಂಶೋಧಕರ ತಂಡ ಸ್ಥಳದಲ್ಲಿ ಬೀಡು ಬಿಟ್ಟು ನಿಕ್ಷೇಪ ಪತ್ತೆಗಾಗಿ ಹುಡುಕಾಟ ನಡೆಸಿದ್ದರು. ಆಗ ಲಿಥಿಯಂ ಇರುವುದು ದೃಢಪಟ್ಟಿತ್ತು. ನಂತರ ಕೊರೊನಾದಿಂದ ತಂಡ ಹುಡುಕಾಟ ಕಾರ್ಯ ನಿಲ್ಲಿಸಿತ್ತು. ಈಗ ಮತ್ತೆ ಮರು ಚಾಲನೆ ದೊರೆತಿದೆ.
ಶ್ರೀರಂಗಪಟ್ಟಣದ ಅಲ್ಲಾಪಟ್ಟಣ ಬಳಿ ಲಿಥಿಯಂ ಹಾಗೂ ಕಲ್ಲಿದ್ದಲು ಪತ್ತೆಯಾಗಿದೆ. ಇದು ಹಲವಾರು ವರ್ಷಗಳಿಂದ ಸಂಶೋಧನೆ ನಡೆಯುತ್ತಿದೆ. ಆದರೆ ಎಷ್ಟು ಪ್ರಮಾಣದಲ್ಲಿ ಲಭ್ಯವಾಗಲಿದೆ ಎಂಬುದರ ಬಗ್ಗೆ ಸೋಮವಾರ ಎಎಂಡಿ ತಂಡ ಪರಿಶೀಲನೆ ನಡೆಸಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆoಕಟೇಶ್ ಉದಯವಾಣಿಗೆ ತಿಳಿಸಿದರು.