Advertisement

ಪಾರ್ಶ್ವವಾಯು ಗುಣಪಡಿಸೋ ನೆಪದಲ್ಲಿ ಚಿನ್ನಾಭರಣ ದೋಚಿದ ಸ್ವಾಮಿ!

12:23 PM Nov 06, 2017 | Team Udayavani |

ಬೆಂಗಳೂರು: ಪಾರ್ಶ್ವವಾಯು ಗುಣಪಡಿಸುವ ನೆಪದಲ್ಲಿ ಮನೆಗೆ ಬಂದಿಪಾರ್ಶ್ವವಾಯು ಗುಣಪಡಿಸೋ ನೆಪದಲ್ಲಿ 160 ಗ್ರಾಂ ಚಿನ್ನಾಭರಣ ದೋಚಿದ ನಕಲಿ ಸ್ವಾಮಿಯೊಬ್ಬ ಮಹಿಳೆಯ ಮೈಮೇಲಿದ್ದ 160 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
 
ಅಶ್ವತ್ಥ ರೆಡ್ಡಿ ಎಂಬವರ ತಾಯಿ ರತ್ನಮ್ಮ ಅವರಿಗೆ ಪಾರ್ಶ್ವವಾಯು ಕಾಯಿಲೆಯಿಂದ ನರಳುತ್ತಿದ್ದರು. ತಾನು ಪಾರ್ಶ್ವವಾಯು ಗುಣಮಾಡುತ್ತೇನೆ ಎಂದು ಮನೆಗೆ ಬಂದಿದ್ದ ನಕಲಿ ಸ್ವಾಮಿ, ಪೂಜೆ ವೇಳೆ ಚಿನ್ನಾಭರಣ ಧರಿಸಿ ಕುಳಿತುಕೊಳ್ಳುವಂತೆ ಸಲಹೆ ನೀಡಿದ್ದ.

Advertisement

ಅದರಂತೆ ಚಿನ್ನಾಭರಣ ಧರಿಸಿ ಕುಳಿತಿದ್ದ ರತ್ನಮ್ಮ ಅವರಿಗೆ ತೀರ್ಥದಲ್ಲಿ ಮತ್ತು ಬರಿಸುವ ಔಷಧಿ ಸೇರಿಸಿ ಕೊಟ್ಟಿದ್ದ. ಬಳಿಕ ಅವರ ಮೈಮೇಲಿದ್ದ 160 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಏತನ್ಮಧ್ಯೆ ಮಗನಿಗೆ ವಿಷಯ ತಿಳಿದರೆ ಬೈಯಬಹುದು ಎಂದು ಚಿನ್ನಾಭರಣ ದೋಚಿಕೊಂಡು ಹೋಗಿದ್ದ ಘಟನೆಯನ್ನು ಮುಚ್ಚಿಟ್ಟಿದ್ದರು.

ಕೊನೆಗೂ ವಿಷಯ ತಿಳಿದ ಪುತ್ರ ಅಶ್ವತ್ಥ ರೆಡ್ಡಿ ಅವರು ಮಡಿವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದೀಗ ಕಳ್ಳ ಸ್ವಾಮಿಯನ್ನು ಸೆರೆಹಿಡಿಯಲು ಶೋಧ ಕಾರ್ಯ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next