Advertisement

ನಾಯರ್‌ ಆಸ್ಪತ್ರೆಯಲ್ಲಿ 160 ಮಂದಿಗೆ ಡಯಾಲಿಸಿಸ್‌: ದಾಖಲೆ

01:13 PM Jun 23, 2020 | Suhan S |

ಮುಂಬಯಿ, ಜೂ. 22: ಮುಂಬಯಿ ಸೆಂಟ್ರಲ್‌ನ ಬಿವೈಎಲ್‌ ನಾಯರ್‌ ಆಸ್ಪತ್ರೆ ಏಪ್ರಿಲ್‌ 18ರಿಂದ ಕೋವಿಡ್ ವೈರಸ್‌ ಸೋಂಕಿಗೆ ಒಳಗಾದ 160 ಮಂದಿ ರೋಗಿಗಳಿಗೆ ಡಯಾಲಿಸಿಸ್‌ ಮಾಡುವ ಮೂಲಕ ದಾಖಲೆ ನಿರ್ಮಿಸಿದೆ. ಕೋವಿಡ್‌ ಆಸ್ಪತ್ರೆಯು ಮೂತ್ರಪಿಂಡ ಕಾಯಿಲೆ ಹೊಂದಿರುವ ಕೋವಿಡ್‌ ಸೋಂಕಿತರ ಮೇಲೆ 1,000 ಡಯಾಲಿಸಿಸ್‌ ಸೆಷನ್‌ಗಳನ್ನು ಪ್ರತಿದಿನ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

Advertisement

ಡಯಾಲಿಸಿಸ್‌ ಎನ್ನುವುದು ಜೀವ ಉಳಿಸುವ ವಿಧಾನವಾಗಿದ್ದು, ಮೂತ್ರಪಿಂಡದ ಕಾಯಿಲೆ ಇರುವ ರೋಗಿಯು ವಾರಕ್ಕೆ ಮೂರು ಬಾರಿ ಡಯಾಲಿಸಿಸ್‌ ಗೆ ಒಳಗಾಗಬೇಕಾಗುತ್ತದೆ. ಕಡಿಮೆ ರೋಗನಿರೋಧಕ ಶಕ್ತಿಯಿಂದಾಗಿ ಈ ರೋಗಿಗಳು ಕೊರೊನಾ ವೈರಸ್‌ಗೆ ಹೆಚ್ಚಾಗಿ ಗುರಿಯಾಗುತ್ತಿದ್ದಾರೆ. ಮೂತ್ರಪಿಂಡದ ಕಾಯಿಲೆ ಇರುವ ಕೋವಿಡ್‌ -19 ರೋಗಿಗಳು ಡಿಸ್ಚಾರ್ಜ್‌ ಆಗುವವರೆಗೆ ಪರ್ಯಾಯ ದಿನಗಳಲ್ಲಿ ಡಯಾಲಿಸಿಸ್‌ ಗೆ ಒಳಗಾಗುತ್ತಾರೆ. ನಮ್ಮಲ್ಲಿ ಒಂಬತ್ತು ಯಂತ್ರಗಳಿಂದ ಮೂರು ಪಾಳಿಯಲ್ಲಿ ಡಯಾಲಿಸೀಸ್‌ ಮಾಡಲಾಗುತ್ತಿದೆ ಎಂದು ಆಸ್ಪತ್ರೆಯ ಡಯಾಲಿಸೀಸ್‌ ವಿಭಾಗದ ಮುಖ್ಯಸ್ಥ ಡಾ| ಕಲ್ಪನಾ ಮೆಹ್ತಾ ಹೇಳಿದರು. ಆಸ್ಪತ್ರೆಯು ಪ್ರತಿದಿನ ಕೋವಿಡ್ ಸೋಂಕಿತರಿಗೆ ಸುಮಾರು 1,083 ಡಯಾಲಿಸಿಸ್‌ ನಡೆಸುತ್ತದೆ.

ಡಯಾಲಿಸಿಸ್‌ ಘಟಕವು ಆಸ್ಪತ್ರೆಯ ತೀವ್ರ ನಿಗಾ ಘಟಕದ (ಐಸಿಯು) ಒಂದು ಭಾಗವಾಗಿ ಕಾರ್ಯನಿರ್ವಹಿಸುತ್ತದೆ, ಇದನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಪ್ರತಿಯೊಬ್ಬ ರೋಗಿಯು ಡಯಾಲಿಸಿಸ್‌ಗೆ ಒಳಗಾದ ಅನಂತರ, ಮುಂದಿನ ಅಧಿವೇಶನವನ್ನು ಪ್ರಾರಂಭಿಸುವ ಮೊದಲು ಎಲ್ಲವನ್ನು ಸ್ವಚ್ಚಗೊಳಿಸಬೇಕು ಎಂದು ಮೆಹ್ತಾ ಹೇಳಿದರು.  ಎಲ್ಲ ಸಿಬಂದಿಗಳಿಗೆ ಔಷದಿಗಳೊಂದಿಗೆ ಸುರಕ್ಷತಾ ಸಾಧನಗಳನ್ನು ನೀಡಲಾಗುತ್ತದೆ ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next