Advertisement

ಮನು ಭಾಕರ್‌ ಬಂಗಾರ ದಾಖಲೆ

06:00 AM Jun 29, 2018 | Team Udayavani |

ಸುಹಲ್‌ (ಜರ್ಮನಿ): ಭಾರತದ ಪ್ರತಿಭಾನ್ವಿತ ಶೂಟರ್‌ ಮನು ಭಾಕರ್‌, ಐಎಸ್‌ಎಸ್‌ಎಫ್ ಜೂನಿಯರ್‌ ಶೂಟಿಂಗ್‌ ವಿಶ್ವ ಕಪ್‌ನಲ್ಲಿ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಭಾರತದ ಮತ್ತೂಬ್ಬ ಶೂಟರ್‌ ಅನೀಶ್‌ ಭನ್ವಾಲಾ ಅವರು ಕಂಚಿನ ಪದಕ ಗೆದ್ದಿದ್ದು, ಕ್ರೀಡಾಕೂಟದಲ್ಲಿ ಭಾರತದ ಆಧಿಪತ್ಯ ಮುಂದುವರಿದಿದೆ.

Advertisement

10 ಮೀ. ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 16 ವರ್ಷದ ಮನು, 242.5 ಅಂಕಗಳಿಸುವ ಮೂಲಕ ಈ ವಿಭಾಗದಲ್ಲಿ ಚಿನ್ನದ ಗೌರವ ಪಡೆದರಲ್ಲದೆ, ಈ ಹಿಂದೆ ಇದೇ ವಿಭಾಗದಲ್ಲಿ 236.9 ಅಂಕ ಗಳಿಸಿದ್ದ ಚೀನದ ಕೈಮನ್‌ಲು ಅವರ ವಿಶ್ವ ದಾಖಲೆಯನ್ನು ಅಳಿಸಿ ಹಾಕಿದರು. 

Advertisement

Udayavani is now on Telegram. Click here to join our channel and stay updated with the latest news.

Next