Advertisement
ಏನಿದು ಪ್ರಕರಣ: ಇತ್ತೀಚಿಗೆ ಬಾಲಕನೊಬ್ಬನನ್ನು ಆತನ ಪೋಷಕರು ಸೂರತ್‌ನ ಔರಂಗಾಬಾದ್‌ನ ಜಾಮಿಯಾ ಬುರ್ಹಾನುಲ್ ಉಲೂಮ್ ಮದರಸಾಕ್ಕೆ ಸೇರಿಸಿದ್ದರು, ಕಳೆದ ಕೆಲ ದಿನಗಳ ಹಿಂದೆ ಈ ಮದರಸಾ ಬಳಿಯ ಅಂಗಡಿಯೊಂದರಲ್ಲಿ ವಾಚು ಕಾಳವಾಗಿರುವ ಘಟನೆ ನಡೆದಿದೆ ಈ ಕುರಿತು ಅಂಗಡಿ ಮಾಲೀಕ ಇಲ್ಲಿನ ಮದರಸಾದ ವಿದ್ಯಾರ್ಥಿಗಳೇ ವಾಚು ಕದ್ದಿರುವುದಾಗಿ ಹೇಳಿಕೊಂಡಿದ್ದಾರೆ ಅಲ್ಲದೆ ಠಾಣೆಗೆ ದೂರು ನೀಡುವ ನಿರ್ಧಾರಕ್ಕೆ ಬಂದಿದ್ದಾನೆ ಈ ವಿಚಾರಕ್ಕೆ ಸಂಬಂಧಿಸಿ ಮದರಸಾದ ಶಿಕ್ಷಕ ಅಂಗಡಿ ಬಳಿಯ ಸಿಸಿಟಿವಿ ದೃಶ್ಯಾವಳಿಯನ್ನು ಗಮನಿಸಿದ್ದಾರೆ ಈ ವೇಳೆ ಮದರಸಾದಲ್ಲೇ ಕಲಿಯುವ ವಿದ್ಯಾರ್ಥಿ ವಾಚು ಕದ್ದಿರುವುದು ಬೆಳಕಿಗೆ ಬಂದಿದೆ.
ಘಟನೆಯಿಂದ ಕೋಪಗೊಂಡ ಶಿಕ್ಷಕ ವಿದ್ಯಾರ್ಥಿಯನ್ನು ಅರೆಬೆತ್ತಲೆಗೊಳಿಸಿ ಬೆನ್ನಿಗೆ ಉಗುಳಿ ಥಳಿಸಿದ್ದಾನೆ, ಅಷ್ಟು ಮಾತ್ರವಲ್ಲದೆ ಅಲ್ಲಿನ ಇತರ ವಿದ್ಯಾರ್ಥಿಗಳಿಂದಲೂ ಬೆನ್ನಿಗೆ ಉಗಿಸಿ ಥಳಿಸಲು ಹೇಳಿದ್ದಾನೆ, ಈ ಘಟನೆಯ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಬಳಿಕ ಬಾಲಕನ ಕುಟುಂಬಕ್ಕೂ ತಲುಪಿದೆ. ಕೂಡಲೇ ಎಚ್ಚೆತ್ತ ಬಾಲಕನ ಪೋಷಕರು ಮದರಸಾ ಶಿಕ್ಷಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.