Advertisement

ಪಾಕ್‌ನಲ್ಲಿ ಹಿಂದೂ ಯುವತಿ ಅಪಹರಣ, ಮತಾಂತರ ?

07:26 AM Jul 15, 2022 | Team Udayavani |

ಇಸ್ಲಾಮಾಬಾದ್‌:  ಪಾಕಿಸ್ಥಾನದ ಸಿಂಧ್‌ ಪ್ರಾಂತ್ಯದಲ್ಲಿ 16 ವರ್ಷದ ಹಿಂದೂ ಸಮುದಾಯದ ಬಾಲಕಿಯನ್ನು ಅಪಹರಿಸಲಾಗಿದೆ ಮತ್ತು ಒತ್ತಾಯಪೂರ್ವಕವಾಗಿ ಮದುವೆ ಮಾಡಿಕೊಳ್ಳಲಾಗಿದೆ. ಇದಾದ ಬಳಿಕ ಆಕೆಯನ್ನು ಇಸ್ಲಾಂಗೆ ಮತಾಂತರ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

Advertisement

ಸಿಂಧ್‌ ಪ್ರಾಂತದ ಕಜಿ ಮೊಹಮದ್‌ ನಗರದಿಂದ ಯುವತಿಯನ್ನು ಅಪಹರಿಸಿಕೊಂಡು ಹೋಗಿರುವುದಾಗಿ ಪಾಕಿಸ್ಥಾನದ ಡಾನ್‌ ಪತ್ರಿಕೆ ವರದಿ ಮಾಡಿದೆ.

ಈ ಪ್ರಕರಣವನ್ನು ವಿರೋಧಿಸಿ, ಪಾಕಿಸ್ಥಾನದ ಹಿಂದೂ ಸಮುದಾಯ ಪ್ರತಿಭಟನೆಯನ್ನೂ ಮಾಡಿದೆ. ಆದರೆ ಸ್ಥಳೀಯ ಪೊಲೀಸರು ಮಾತ್ರ ಇದನ್ನು ಪ್ರೀತಿ ಎಂದು ಕರೆದಿದ್ದು, ಯುವಕ-ಯುವತಿ ಇಬ್ಬರೂ ಪರಸ್ಪರ ಪ್ರೀತಿಸಿ, ಓಡಿಹೋಗಿ ಮದುವೆಯಾಗಿದ್ದಾರೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next