Advertisement

Indian: 16ರ ಬಾಲಕಿಯ AI ಸಂಸ್ಥೆ ಮೌಲ್ಯ 100 ಕೋಟಿ ರೂ.!

08:43 PM Oct 11, 2023 | Team Udayavani |

ವಾಷಿಂಗ್ಟನ್‌: ಭಾರತದಲ್ಲಿ ನವೋದ್ಯಮಗಳ ಬೆಳವಣಿಗೆ ಹೊಸ ಕ್ರಾಂತಿ ಸೃಷ್ಟಿಸುತ್ತಿರುವ ನಡುವೆಯೇ, ಭಾರತೀಯ ಮೂಲದ 16ರ ಬಾಲಕಿಯೊಬ್ಬಳು ಎಐ ತಂತ್ರಜ್ಞಾನ ಆಧಾರಿತ ಸಂಸ್ಥೆಯೊಂದನ್ನು ಸ್ಥಾಪಿಸಿ, ಕೇವಲ ಒಂದು ವರ್ಷದಲ್ಲೇ ಸಂಸ್ಥೆಯ ಮೌಲ್ಯವನ್ನು 3.7 ಕೋಟಿ ರೂ.ಯಿಂದ 100 ಕೋಟಿ ರೂ.ಗೆ ತಲುಪಿಸಿದ್ದಾಳೆ.

Advertisement

ಈ ಮೂಲಕ ವಯಸ್ಸು ಬರೀ ಲೆಕ್ಕಕ್ಕೆ ಮಾತ್ರ, ಮನಸ್ಸೊಂದಿದ್ದರೆ ಮಾರ್ಗ ಎಂಬುದನ್ನು ನಿರೂಪಿಸಿ ಯುವಜನತೆಗೆ ಸ್ಫೂರ್ತಿಯಾಗಿದ್ದಾಳೆ. ಪ್ರಾಂಜಲಿ ಅವಸ್ಥಿ 7ನೇ ವಯಸ್ಸಿನಿಂದಲೇ ಕಂಪ್ಯೂಟರ್‌ ಜಗತ್ತಿಗೆ ಕಾಲಿಟ್ಟು, ಕೋಡಿಂಗ್‌ ಕಲಿಕೆಗೆ ಮುಂದಾಗಿದ್ದಳು. 11ನೇ ವಯಸ್ಸಿಗೆ ಕುಟುಂಬದ ಜತೆಗೆ ಅಮೆರಿಕದ ಫ್ಲೋರಿಡಾಗೆ ಸ್ಥಳಾಂತರಗೊಂಡು ಯೂನಿವರ್ಸಿಟಿ ರಿಸರ್ಚ್‌ ಲ್ಯಾಬ್‌ನಲ್ಲಿ ಇಂಟರ್ನಿಯಾಗಿ ಕಾರ್ಯನಿರ್ವಹಿಸಿದ್ದರು. 2022ರಲ್ಲಿ ಎಐ ಚಾಲಿತ ಸರ್ಚ್‌ ಅಪ್ಲಿಕೇಶನ್‌ “ಡೆಲ್ವ್‌ ಎಐ” ಅನ್ನು ಅಭಿವೃದ್ಧಿಪಡಿಸಿ, ಕಂಪನಿ ಸ್ಥಾಪಿಸಿದ್ದು, ಈಗ ಅದರ ಮೌಲ್ಯ 100 ಕೋಟಿ ರೂ.ಗೆ ತಲುಪಿದೆ.

Advertisement

Udayavani is now on Telegram. Click here to join our channel and stay updated with the latest news.

Next