Advertisement
ನಮಗೆ ಸತ್ಯ ತಂದೆ ಇದ್ದಂತೆ, ನ್ಯಾಯ ತಾಯಿ ಇದ್ದಂತೆ. ಈ ಎರಡನ್ನೂ ಸದಾಕಾಲ ಎತ್ತಿಹಿಡಿಯುವ ಕೆಲಸವನ್ನು ನಾವೆಲ್ಲ ಮಾಡಬೇಕಿದೆ. ಈ ಸಂದರ್ಭದಲ್ಲಿ ಹಲವಾರು ಸವಾಲುಗಳು ಎದುರಾಗುತ್ತವೆ. ಈ ಎಲ್ಲಾ ಸವಾಲು ಜಯಿಸಿ, ನಾವು ನಮ್ಮ ಕರ್ತವ್ಯ ನಿಷ್ಠೆ ಮರೆಯದೇ, ನೀವು ಏನು ಪ್ರಮಾಣ ವಚನ ಸ್ವೀಕರಿಸಿದ್ದಿರೋ ಅದಕ್ಕೆ ಬದ್ಧರಾಗಿರಿ ಎಂದರು.
Related Articles
Advertisement
ಇಂದು ದೇಶಕ್ಕೆ ಹಲವಾರು ಸವಾಲುಗಳು ಇದೆ. ವಿದೇಶಿ ನುಸುಳುಕೋರರು ಹೆಚ್ಚಿದ್ದಾರೆ. ಈ ರೀತಿ ನುಸುಳಿ ಬಂದವರು ಭಯೋತ್ಪಾದನೆಯಂತಹ ಕೃತ್ಯಗಳಲ್ಲಿ ತೊಡಗಲು ಸಿದ್ಧಾರಾಗಿದ್ದರೆ ಎಂದು ಎನ್‌ಐಎ ಮಾಹಿತಿ ನೀಡಿದೆ. ಈ ಸಂದರ್ಭದಲ್ಲಿ ಈ ಎಲ್ಲಾ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ನೀವು ಸಿದ್ಧರಾಗಬೇಕಿದೆ ಎಂದು ಕಿವಿಮಾತು ಹೇಳಿದರು. 58 ಮಂದಿ ಪುರುಷ ಹಾಗೂ 4 ಮಂದಿ ಮಹಿಳಾ ಪ್ರಶಿಕ್ಷಣಾರ್ಥಿಗಳು 11 ತಿಂಗಳು ತರಬೇತಿ ಪಡೆದಿದ್ದಾರೆ.
ಚರಣ್ ಎಸ್.ಗೆ ಸರ್ವೋತ್ತಮ ಪ್ರಶಸ್ತಿ: 42ನೇ ತಂಡದ ಪ್ರೊಬೆಷನರಿ ಆರ್‌ಎಸ್‌ಐ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಚರಣ್ ಎಸ್. ಸರ್ವೋತ್ತಮ ಪ್ರಶಸ್ತಿ ಪಡೆದುಕೊಂಡರು. 2ನೇ ಸ್ಥಾನವನ್ನು ಎಸ್. ರಘುರಾಜ್ ಪಡೆದುಕೊಂಡರು. ಸರ್ವೋತ್ತಮ ಮಹಿಳಾ ಪ್ರಶಿಕ್ಷಣಾರ್ಥಿ ಪ್ರಶಸ್ತಿಯನ್ನು ಅರ್ಪಿತಾರೆಡ್ಡಿ ಪಡೆದುಕೊಂಡರು. ಉತ್ತಮ ರೈಫಲ್ ಫೈರಿಂಗ್ ವಿಭಾಗದಲ್ಲಿ ಬಾನೆ ಸಿದ್ದಣ್ಣ, ರಿವಾಲ್ವರ್ ಫೈರಿಂಗ್‌ನಲ್ಲಿ ಸಂಜೀವ ಗಟ್ಟರಗಿ, ಬೆಸ್ಟ್ ಡೈರೆಕ್ಟರ್ ಅಸೆಸ್‌ಮೆಂಟ್ ವಿಭಾಗದಲ್ಲಿ ಉಮಾಶ್ರೀ ಕಲಕುಟಗಿ, ಒಳಾಂಗಣ ಅತ್ಯತ್ತಮ ಪ್ರಶಿಕ್ಷಣಾರ್ಥಿಯಾಗಿ ಎಸ್. ರಘುರಾಜ್, ಹೊರಾಂಗಣ ಅತ್ಯತ್ತಮ ಪ್ರಶಿಕ್ಷಣಾರ್ಥಿಯಾಗಿ ಮಂಜಣ್ಣ ಪ್ರಶಸ್ತಿ ಪಡೆದುಕೊಂಡರು.
ಈ ಸಂದರ್ಭ ತರಬೇತಿ ವಿಭಾಗದ ಪೊಲೀಸ್ ಮಾಹಾ ನಿರ್ದೇಶಕ ಪಿ.ಕೆ. ಗರ್ಗ್, ಪೊಲೀಸ್ ಮಹಾ ನಿರೀಕ್ಷಕ ಎಸ್. ರವಿ, ಪೊಲೀಸ್ ಮಹಾ ನಿರೀಕ್ಷಕರು ಮತ್ತು ನಿರ್ದೇಶಕ ವಿಪುಲ್ ಕುಮಾರ್, ಕರ್ನಾಟಕ ಪೊಲೀಸ್ ಅಕಾಡೆಮಿ ಮೈಸೂರಿನ ಸುಧೀರ್ ಕುಮಾರ್ ರೆಡ್ಡಿ ಇದ್ದರು.
ಪ್ರತಿ ಜಿಲ್ಲೆಯಲ್ಲೂ ವಿಧಿ ವಿಜ್ಞಾನ ಲ್ಯಾಬ್: ಎಫ್ಎಸ್‌ಎಲ್‌ಗಳನ್ನು ಜಿಲ್ಲಾ ಮಟ್ಟಕ್ಕೆ ತೆಗೆದುಕೊಂಡು ಹೋಗುವ ನಿರ್ಧರಿಸಿದ್ದು, ಪ್ರತಿ ಜಿಲ್ಲೆಯಲ್ಲಿಯೂ ವಿಧಿವಿಜ್ಞಾನ ಪ್ರಯೋಗಾಲಯ ಸ್ಥಾಪಿಸಲಾಗುವುದು. ಇದರ ಜೊತೆಗೆ ಪ್ರತಿ ಠಾಣೆಗಳಲ್ಲೂ ಪ್ರಾಥಮಿಕ ವಿಧಿವಿಜ್ಞಾನ ಪ್ರಯೋಗಾಲಯ ಮಾಡುವ ಚಿಂತನೆಯೂ ಇದೆ. ಈ ಹಿನ್ನೆಲೆ ಮುಂದಿನ ದಿನಗಳಲ್ಲಿ ಸೈಬರ್ ಕ್ರೈಂ ಡಿಟೆಕ್ಷನ್ ಮಾಡುವ ಹಾಗೂ ಎಫ್ಎಸ್‌ಎಲ್ ಲ್ಯಾಬ್ ನಡೆಸುವುದರ ಬಗ್ಗೆ ಎರಡೂ ಮೂಲಭೂತ ತರಬೇತಿಗಳನ್ನು ಹೊಸದಾಗಿ ಮುಂದಿನ ವರ್ಷ ಅಕಾಡೆಮಿಗಳಲ್ಲಿ ಅಳವಡಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಪೊಲೀಸರಿಗೆ ಸ್ವಂತ ಮಾಹಿತಿ ಜಾಲ ಇರಲಿ: ಪೊಲೀಸರಿಗೆ ಸ್ವಂತ ಮಾಹಿತಿ ಜಾಲ ಇರಬೇಕು. ಇಂದು ಸಾಕಷ್ಟು ತಂತ್ರಜ್ಞಾನ ಇದೆ. ಅದನ್ನು ಬಳಕೆ ಮಾಡಿಕೊಂಡು ತಮ್ಮದೇ ಸ್ವಂತ ಮಾಹಿತಿ ಜಾಲವನ್ನು ಹೊಂದಬೇಕು. ಇದರಿಂದ ನಿಮ್ಮನ್ನು ಯಾರೂ ದಾರಿತಪ್ಪಿಸಲು ಸಾಧ್ಯವಾಗುವುದಿಲ್ಲ. ಕಳ್ಳರಿಗೆ, ಉಗ್ರರಿಗೆ ಕಠಿಣರಾಗಿ, ಜನಸಾಮಾನ್ಯರೊಂದಿಗೆ ಜನಸ್ನೇಹಿಯಾಗಿ ಇರಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಪೊಲೀಸರಿಗೆ ಕರ್ತವ್ಯದ ಜೊತೆಗೆ ಸಮಯ ಪ್ರಜ್ಞೆ ಮತ್ತು ಸ್ಥಿತ ಪ್ರಜ್ಞೆ ಮುಖ್ಯವಾಗಿದೆ. ಮಾನಸಿಕವಾಗಿ ನೀವು ಶಕ್ತಿಶಾಲಿಯಾದರೆ ದೈಹಿಕವಾಗಿಯೂ ಶಕ್ತಿಶಾಲಿಯಾಗುತ್ತೀರಿ. ದೇಹ, ಮನಸ್ಸು ಎರಡೂ ಒಂದಾಗಿ ಕೆಲಸ ಮಾಡಿದರೆ ಯಶಸ್ಸು ಖಂಡಿತವಾಗಿ ಸಿಗಲಿದೆ. ಇಂದಿನ ಯುವ ಪೀಳಿಗೆ ದೇಶಾಭಿಮಾನ ಮತ್ತು ದೇಶಪ್ರೇಮವನ್ನು ಆದರ್ಶವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.