ಹೊಸದಿಲ್ಲಿ : ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 16 ಉಗ್ರ ಶಿಬಿರಗಳು ಸಕ್ರಿಯವಾಗಿದ್ದು, ಉಗ್ರರು ಕಾಶ್ಮೀರದೊಳಗೆ ನುಸುಳಲು ಸಿದ್ದವಾಗಿದ್ದಾರೆ ಎಂದು ಗುಪ್ತಚರ ಇಲಾಖೆಯ ವರದಿಗಳು ಮಾಹಿತಿ ನೀಡಿವೆ.
ಸೇನಾ ಮೂಲಗಳ ಮಾಹಿತಿಗಳ ಪ್ರಕಾರ ಪುಲ್ವಾಮಾ ದಾಳಿಯ ಬಳಿಕ ಜೈಷ್ -ಇ-ಮೊಹಮದ್ ಉಗ್ರ ಸಂಘಟನೆ ತೀವ್ರ ಹೊಡೆತ ಅನುಭವಿಸಿದೆ. ಸೇನಾ ಸಂಘಟನೆಯ ಹಲವು ಉಗ್ರರನ್ನು ಆಂದೋಲನ ನಡೆಸಿ ಹೊಡೆದು ಹಾಕಿರುವ ಕಾರಣ ಕಾಶ್ಮೀರದ ಸ್ಥಳೀಯ ಯುವಕರು ಜೈಷ್ ಸಂಘಟನೆಯನ್ನು ಬೆಂಬಲಿಸಲು ಮನಸ್ಸು ಮಾಡುತ್ತಿಲ್ಲ.
ಹಲವು ಉಗ್ರರ ಶಿಬಿರಗಳು ಕಾರ್ಯಾಚರಣೆ ನಡೆಸಲು ಸಿದ್ದವಾಗಿದ್ದು, ಪಾಕ್ ಸೇನೆ ಮತ್ತು ಐಎಸ್‌ಐನ ಸಂಪೂರ್ಣ ಬೆಂಬಲ ಉಗ್ರರಿಗೆ ದೊರಕಿದೆ. ನಾವು ಅಂತರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಿದ್ದೇವೆ ಎಂದು ಸೇನಾ ಮೂಲಗಳು ತಿಳಿಸಿದೆ.
ಕಾಶ್ಮೀರದಲ್ಲಿ ಪುಲ್ವಾಮಾ ದಾಳಿ ಬಳಿಕ ಜೈಷ್ ಉಗ್ರ ಸಂಘಟನೆಯ ಎಲ್ಲಾ ಪ್ರಮುಖ ನಾಯಕರನ್ನು ಹತ್ಯೆಗೈಯಲಾಗಿದೆ.
ಜೈಷ್ ಕಮಾಂಡರ್ ಝಾಕೀರ್ ಮೂಸಾ ನನ್ನು ಎನ್‌ಕೌಂಟನರ್ ಮಾಡಿದ ಬಳಿಕ ಸಣ್ಣ ಪ್ರಮಾಣದಲ್ಲಿ ಪ್ರತಿಭಟನೆ ನಡೆದಿತ್ತು, ಆದರೆ ಬುರ್ಹಾನ್ ವಾನಿ ಹತ್ಯೆಯಾದಾಗ ನಡೆದಿದ್ದ ಮಾದರಲ್ಲಿ ವ್ಯಾಪಕ ಹಿಂಸಾಚಾರ ಸಂಭವಿಸದೆ ಇರುವುದು ಉಗ್ರರಿಗೆ ಬೆಂಬಲ ಕಡಿಮೆಯಾಗಿರುವುದನ್ನು ಸೂಚಿಸಿತ್ತು.
ಕಾಶ್ಮೀರದಲ್ಲಿ ಬೇರೂರುವ ಉಗ್ರರ ಯತ್ನವನ್ನು ಸೇನೆ ನಿರಂತರವಾಗಿ ವಿಫಲಗೊಳಿಸುತ್ತಲೆ ಬಂದಿದೆ. ಐಸಿಸ್ ಸಂಘಟನೆಯ ಅಸ್ಥಿತ್ವ ಸ್ಥಾಪಿಸುವ ಯತ್ನವನ್ನೂ ಸೇನೆ ವಿಫಲಗೊಳಿಸುತ್ತಲೇ ಬಂದಿದೆ.