Advertisement

Climate change: ಭಾರತ ಸೇರಿ ಏಷ್ಯಾದ 16 ರಾಷ್ಟ್ರಗಳಿಗೆ ಸಂಕಷ್ಟ

09:56 PM May 24, 2023 | Team Udayavani |

ನವದೆಹಲಿ: ಭಾರತ ಸೇರಿದಂತೆ ಏಷ್ಯಾದ 16 ರಾಷ್ಟ್ರಗಳಿಗೆ ಹವಾಮಾನ ವಿಕೋಪದ ಬಿಸಿ ತಟ್ಟಲಿದೆ. ಈ ರಾಷ್ಟ್ರಗಳಲ್ಲಿ ನೀರು ಮತ್ತು ಇಂಧನ ಪೂರೈಕೆಯಲ್ಲಿ ಭಾರೀ ಸಮಸ್ಯೆಯಾಗಲಿದೆ. ಹಿಂದೂ ಕುಶ್‌-ಹಿಮಾಲಯ ಪ್ರದೇಶದ ನೀರಿನ ವ್ಯವಸ್ಥೆಗೆ ಸಂಬಂಧಿಸಿದಂತೆ ಹವಾಮಾನ ಸಮಸ್ಯೆಗಳು ಭೀಕರ ಪರಿಸ್ಥಿತಿಯನ್ನು ಸೃಷ್ಟಿಸಬಹುದಾಗಿದೆ. ಹೀಗಾಗಿ ಏಷ್ಯಾಗೆ ಇದು ಪ್ರಮುಖ ಕಾಳಜಿಯ ವಿಷಯವಾಗಿದೆ.

Advertisement

ಹಿಂದೂ ಕುಶ್‌-ಹಿಮಾಲಯ ಜಲಾನಯನ ಪ್ರದೇಶದ ಮೇಲೆ ಹವಾಮಾನ ಬದಲಾವಣೆ ಪರಿಣಾಮ ಬೀರುವುದರಿಂದ ಭಾರತಕ್ಕೂ ಇದರ ಅನುಭವವಾಗಲಿದೆ. ಹೀಗಾಗಿ ಪ್ರಾದೇಶಿಕ ನೀರಿನ ಹರಿವನ್ನು ರಕ್ಷಿಸಲು ಒಂದು ಸಂಘಟಿತ ಕ್ರಮದ ಅಗತ್ಯವಿದೆ. ಹಿಂದೂ ಕುಶ್‌-ಹಿಮಾಲಯ ಪ್ರದೇಶದಲ್ಲಿ 10 ನದಿಗಳು ಹರಿಯುತ್ತವೆ. ಈ ನದಿಗಳು ಸುಮಾರು 100 ಕೋಟಿ ಜನರ ಜೀವನದ ಆಧಾರವಾಗಿವೆ. ಈ ಪ್ರದೇಶದಲ್ಲಿ ವಾರ್ಷಿಕ 4.3 ಲಕ್ಷ ಕೋಟಿ ಡಾಲರ್‌ ಜಿಡಿಪಿ ಉತ್ಪಾದನೆಯಾಗುತ್ತದೆ.

ಈ ಹತ್ತು ನದಿಗಳಲ್ಲಿ ಗಂಗಾ ಮತ್ತು ಬ್ರಹ್ಮಪುತ್ರ ನದಿಗಳು ಸೇರಿವೆ. ಈ ಎರಡು ನದಿಗಳು ಭಾರತ ಮತ್ತು ಬಾಂಗ್ಲಾದೇಶದಲ್ಲಿ ಹರಿಯುತ್ತವೆ. ಇದರೊಂದಿಗೆ ಚೀನಾದ ಯಾಂಗ್ವೆ, ಯೆಲ್ಲೊ, ಮೆಕಾಂಗ್‌ ಮತ್ತು ಸಲ್ವಿನ್‌ ನದಿಗಳು ಸೇರಿವೆ.

“ಹಿಮ ಕರಗುವಿಕೆ, ವಿಪರೀಪ ಹವಾಮಾನ ವೈಪರೀತ್ಯದಂತಹ ಹವಾಮಾನ ಬದಲಾವಣೆಯು ಈಗಾಗಲೇ ಈ ಪ್ರದೇಶಕ್ಕೆ ಗಂಭೀರ ಬೆದರಿಕೆಗಳನ್ನು ಒಡ್ಡಿವೆ. ಈ ಪ್ರದೇಶದಲ್ಲಿ ನೀರು ಮತ್ತು ಇಂಧನಕ್ಕೆ ಸಂಬಂಧಿಸಿದ ಮೂಲಸೌಕರ್ಯ ನಿರ್ಮಾಣ ಕಾರ್ಯಗಳು ಸಮಸ್ಯೆಯನ್ನು ಹೆಚ್ಚಿಸಿವೆ. ಇದರಿಂದ ಮುಂದಿನ ದಿನಗಳಲ್ಲಿ ನೀರು ಮತ್ತು ಇಂಧನ ಸರಬರಾಜಿನಲ್ಲಿ ಭಾರೀ ವ್ಯತ್ಯಯವಾಗಲಿದೆ’ ಎಂದು ಚೀನಾ ನೀರಿನ ಅಪಾಯದ ಕುರಿತಾದ ಚಿಂತಕರ ಚಾವಡಿ ಎಚ್ಚರಿಕೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next