Advertisement

ಚೀನಾ ಸೇನೆಗೆ ಅಪಮಾನ ಮಾಡಿ 16.51 ಕೋಟಿ ರೂ.ದಂಡ !: ಬೆಲೆ ತೆತ್ತ ಕಾಮಿಡಿ ಸ್ಟುಡಿಯೋ

09:13 PM May 18, 2023 | Team Udayavani |

ಬೀಜಿಂಗ್‌: ಹಾಸ್ಯ ಕಾರ್ಯಕ್ರಮವೊಂದರಲ್ಲಿ ಚೀನಾದ ಸೇನೆಯನ್ನು ಅಪಮಾನ ಮಾಡಿರುವುದಕ್ಕಾಗಿ ಕಾಮಿಡಿ ಸ್ಟುಡಿಯೋ ಒಂದಕ್ಕೆ ಸರ್ಕಾರ 2 ದಶಲಕ್ಷ ಡಾಲರ್‌ (16.51 ಕೋಟಿ ರೂ.)ಗಳ ದಂಡ ವಿಧಿಸಿರುವ ಘಟನೆ ವರದಿಯಾಗಿದೆ. ಚೀನಾದ ಕಠಿಣ ನಿಯಮಗಳನ್ನು ಹೊಂದಿರುವ ಆಡಳಿತದಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಇಲ್ಲವೆನ್ನುವುದು ಸಾಬೀತಾಗಿದೆ.

Advertisement

ಖ್ಯಾತ ಹಾಸ್ಯನಟ ಲಿ ಹಾವೋಶಿ ಕಳೆದವಾರ ಬೀಜಿಂಗ್‌ನಲ್ಲಿ ಎರಡು ಹಾಸ್ಯ ಕಾರ್ಯಕ್ರಮವನ್ನು ನಡೆಸಿದ್ದರು. ಈ ವೇಳೆ ಚೀನಾ ಸೇನೆಯನ್ನು ಬೀದಿ ನಾಯಿಗಳಿಗೆ ಹೋಲಿಕೆ ಮಾಡಿದ್ದಾರೆ ಎಂದು ಬೀಜಿಂಗ್‌ನ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆ ಆರೋಪಿಸಿದೆ. ಹಾವೋಶಿ ಅವರ ಕಾರ್ಯಕ್ರಮವು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಸೇನೆಯ ಬಗೆಗಿನ ಭಾವನೆಯನ್ನೇ ಬದಲಿಸಬಹುದು ಅಂಥದಕ್ಕೆ ಅವಕಾಶ ನೀಡುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಬೆಳವಣಿಗೆ ಬಳಿಕ ಬೀಜಿಂಗ್‌ನಾದ್ಯಂತ ಹವೋಶಿ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.