ಬಳ್ಳಾರಿ: ಜಿಲ್ಲೆಯಲ್ಲಿ ಕೋವಿಡ್‌ಗಾಗಿ ಇದುವರೆಗೆ 10ಕೋಟಿ ರೂ. ಜಿಲ್ಲಾ ಖನಿಜ ನಿಧಿ ಅನುದಾನ ಸೇರಿದಂತೆ 16.23 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದ್ದು, ಆಡಿಟ್ ವರದಿ ಕೂಡ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಳಿದರು.
ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ನಡೆಸಿದ ಗುರುವಾರ ನಡೆದ ವಿಡಿಯೋ ಸಂವಾದದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವರಿಗೆ ಈ ಕುರಿತ ಮಾಹಿತಿಯನ್ನು ವಿವರಿಸಿದರು. ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ತೆಗೆದುಕೊಳ್ಳಲಾದಕ್ರಮಗಳು, ಪ್ರವಾಹ ಪರಿಸ್ಥಿತಿ ಹಾಗೂ ಅದರಿಂದ ಉಂಟಾದ ಹಾನಿಗೆ ಸಂಬಂಧಿ ಸಿದ ಮಾಹಿತಿಯನ್ನೂ ಮುಖ್ಯಮಂತ್ರಿಗಳ ಗಮನ ಸೆಳೆದರು.
ಜಿಲ್ಲೆಯಲ್ಲಿ ಪ್ರತಿದಿನ 2500 ಟೆಸ್ಟ್ ಮಾಡಲಾಗುತ್ತಿದೆ. ವಿಮ್ಸ್‌ನಲ್ಲಿ ಆರ್‌ಟಿಪಿಸಿಎಲ್ ಲ್ಯಾಬ್ ಇದ್ದು, ಜಿಂದಾಲ್‌ನವರುಕೂಡ ಆರ್‌ಟಿಪಿಸಿಎಲ್ ಮಶೀನ್ ನೀಡಿರುವುದು ಉಪಯೋಗವಾಗಿದೆ. ಶೇ.20ರಷ್ಟು ಬೆಡ್‌ಗಳು ಖಾಲಿಯಿವೆ ಎಂದು ತಿಳಿಸಿದರು.
ಇತ್ತೀಚೆಗೆ ಉದ್ಘಾಟಿಸಲಾದ ಟ್ರೋಮಾಕೇರ್ ಕೇಂದ್ರದ ಕಾರ್ಯಾರಂಭದಿಂದ ತುಂಬಾ ಅನುಕೂಲಕರವಾಗಿದೆ. ಈಗ ಕಳೆದ ಮಾರ್ಚ್‌ತಿಂಗಳಿಂದ ಜಿಲ್ಲಾ ಕೋವಿಡ್ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಜಿಲ್ಲಾಸ್ಪತ್ರೆಯನ್ನು ಮುಂಚೆಯಂತೇ ಅ.1ರಿಂದ ನಾನ್ ಕೋವಿಡ್‌ಆಸ್ಪತ್ರೆಯನ್ನಾಗಿ ಕಾರ್ಯನಿರ್ವಹಿಸುವುದಕ್ಕೆವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ 24915 ಪ್ರಕರಣಗಳು ದೃಢಪಟ್ಟಿದ್ದು, 20621 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸದ್ಯ 3979 ಪ್ರಕರಣಗಳು ಮಾತ್ರ ಸಕ್ರಿಯವಾಗಿವೆ.
315 ಜನರು ಇದುವರೆಗೆ ಕೋವಿಡ್‌ನಿಂದ ಮರಣವನ್ನಪ್ಪಿದ್ದು, ಮರಣದ ಪ್ರಮಾಣ ಶೇ.1.24 ರಷ್ಟಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಕೋವಿಡ್ 98 ವೆಂಟಿಲೇಟರ್ ಮತ್ತು ನಾನ್‌ಕೋವಿಡ್‌ಗಾಗಿ 39 ವೆಂಟಿಲೇಟರ್ ಸೇರಿದಂತೆ 137 ವೆಂಟಿಲೇಟರ್‌ನಮ್ಮಲ್ಲಿ ಲಭ್ಯವಿದೆ. ಯಾವುದೇ ರೀತಿಯ ಸಮಸ್ಯೆ ಬಳ್ಳಾರಿಯಲ್ಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.