Advertisement

ರಾಜ್ಯದಲ್ಲಿಂದು ಕೋವಿಡ್ ಇಳಿಕೆ : 1598 ಪ್ರಕರಣ ಪತ್ತೆ; 1914 ಸೋಂಕಿತರು ಗುಣಮುಖ

06:43 PM Aug 08, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 1598 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಹಾಗೂ 20 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ.

Advertisement

ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ 1914 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 2857776 ತಲುಪಿದೆ.

ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 23930 ಇದೆ. ಕೋವಿಡ್ ಸೊಂಕಿನ ಖಚಿತ ಪ್ರಕರಣಗಳ ಶೇಕಡಾವಾರು ಪ್ರಮಾಣ 1.09 % ಹಾಗೂ ಸೋಂಕಿನಿಂದ ಮೃತ ಪಟ್ಟವರ ಶೇಕಡಾವಾರು ಪ್ರಮಾಣ 1.25 % ಇದೆ.

ಜಿಲ್ಲಾವಾರು ಪ್ರಕರಣಗಳ ಸಂಖ‍್ಯೆ :

ಬಾಗಲಕೋಟೆ-2, ಬಳ್ಳಾರಿ-10, ಬೆಳಗಾವಿ-37, ಬೆಂಗಳೂರು ಗ್ರಾಮಾಂತರ-25, ಬೆಂಗಳೂರು ನಗರ-348, ಬೀದರ್-2, ಚಾಮರಾಜನಗರ-22, ಚಿಕ್ಕಬಳ್ಳಾಪುರ-12, ಚಿಕ್ಕಮಗಳೂರು-52, ಚಿತ್ರದುರ್ಗ-22, ದಕ್ಷಿಣ ಕನ್ನಡ-438, ದಾವಣಗೆರೆ-15, ಧಾರವಾಡ-7, ಹಾಸನ-80, ಹಾವೇರಿ-2, ಕಲಬುರಗಿ-5, ಕೊಡಗು-83, ಕೋಲಾರ-36, ಕೊಪ್ಪಳ-7, ಮಂಡ್ಯ-31, ಮೈಸೂರು-98, ರಾಯಚೂರು-4, ರಾಮನಗರ-0, ಶಿವಮೊಗ್ಗ-37, ತುಮಕೂರು-38, ಉಡುಪಿ-129, ಉತ್ತರ ಕನ್ನಡ-53, ವಿಜಯಪುರ-1, ಯಾದಗಿರಿ-1.

Advertisement
Advertisement

Udayavani is now on Telegram. Click here to join our channel and stay updated with the latest news.

Next