Advertisement

ರಾಮಾಪುರ ಪೊಲೀಸರ ಭರ್ಜರಿ ಬೇಟೆ : 154ಕೆ.ಜಿ.ತೂಕದ 228 ಗಾಂಜಾ ಗಿಡ ವಶ

06:45 PM Oct 11, 2020 | sudhir |

ಹನೂರು(ಚಾಮರಾಜನಗರ): ಖಾಲಿ ನಿವೇಶನ ಮತ್ತು ಜಮೀನಿನಲ್ಲಿ ಗಾಂಜಾ ಬೆಳೆದಿದ್ದ 154ಕೆ.ಜಿ ತೂಕದ 228 ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳುವಲ್ಲಿ ರಾಮಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಗೋವಿಂದರಾಜು, ಚಿನ್ನವೆಂಕಟಭೋವಿ ಮತ್ತು ಕುಮಾರ ಎಂಬ ವ್ಯ್ಕತಿಗಳು ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿರುವುದಾಗಿ ಮಾಹಿತಿ ದೊರೆತಿದೆ. ಈ ಮಾಹಿತಿಯನ್ನಾಧರಿಸಿ ಕೊಳ್ಳೇಗಾಲ ಉಪವಿಭಾಗದ ಡಿವೈಎಸ್ಪಿ ಜಿ.ನಾಗರಾಜು ಅವರ ನೇತೃತ್ವದ ತಂಡ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ 3 ಜನ ಆರೋಪಿಗಳು ಪರಾರಿಯಾಗಿದ್ದು ಅವರ ಬಂಧನಕ್ಕೆ ಪೊಲೀಸರು ಬಲೆಬೀಸಿದ್ದಾರೆ.

8 ಅಡಿ ಕಾಂಪೌಂಡ್ ಹಾಕಿ ಗಾಂಜಾ ಬೆಳೆದಿದ್ದರು: ದಾಳಿ ವೇಳೆ ಗಾಂಜಾ ಬೆಳೆಗೆ ಕೈಗೊಂಡಿರುವ ಕ್ರಮಗಳನ್ನು ಕಂಡು ಪೊಲೀಸರೇ ದಿಗ್ಭ್ರಾಂತರಾಗಿದ್ದಾರೆ. ಜಮೀನಿನಲ್ಲಿ ಮನೆಯನ್ನು ನಿರ್ಮಾಣ ಮಾಡಿ ಅದರ ಪಕ್ಕದಲ್ಲಿನ 13*40 ಅಳತೆಯ ಖಾಲಿ ನಿವೇಶನದಲ್ಲಿ ಯಾವುದೇ ಪ್ರವೇಶ ದ್ವಾರವಿಲ್ಲದಂತೆ 8 ಅಡಿ ಎತ್ತರಕ್ಕೆ ಕಾಂಪೌಂಡ್ ಹಾಕಿ ಗಾಂಜಾ ಬೆಳೆಯಲಾಗಿತ್ತು. ಈ ಸ್ಥಳದಲ್ಲಿ 150 ಗಾಂಜಾ ಗಿಡಗಳನ್ನು ಬೆಳೆಯಲಾಗಿತ್ತು. ಇದಲ್ಲದೆ ಆ ಮನೆಯ ಪಕ್ಕದಲ್ಲಿನ ಜಮೀನಿನಲ್ಲಿ 78 ಗಾಂಜಾ ಗಿಡಗಳನ್ನು ಬೆಳೆಯಲಾಗಿತ್ತು. ಒಟ್ಟಾರೆ 158 ಕೆ.ಜಿ ತೂಕದ 228 ಗಿಡಗಳನ್ನು ವಶಪಡಿಸಿಕೊಂಡು ರಾಮಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ:ಚೀನಾದ ಬೆಂಬಲದೊಂದಿಗೆ ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ಅಸ್ತಿತ್ವಕ್ಕೆ ಬರಬಹುದು: ಫಾರೂಕ್

ಕೊಳ್ಳೇಗಾಲ ಉಪವಿಭಾಗದ ಡಿವೈಎಸ್ಪಿ ಜಿ.ನಾಗರಾಜು ಮತ್ತು ರಾಮಾಪುರ ಸಿಪಿಐ ಮನೋಜ್‍ಕುಮಾರ್ ಮತ್ತು ತಂಡದ ಕಾರ್ಯವೈಖರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಶ್ಲಾಘನೆ ವ್ಯಕ್ತಪಡಿಸಿ ನಗದು ಬಹುಮಾನವನ್ನು ಘೋಷಣೆ ಮಾಡಿದ್ದಾರೆ.

Advertisement

ದಾಳಿಯಲ್ಲಿ ರಾಮಾಪುರ ಸಿಪಿಐ ಮನೋಜ್‍ಕುಮಾರ್, ಪಿಎಸ್‍ಐ ಮಂಜುನಾಥ್ ಪ್ರಸಾದ್. ಪೇದೆಗಳಾದ ನಂಮುಂಡ, ನಾಗೇಂದ್ರ, ಮಾದೇಶ್, ರಘು, ಅಣ್ನಾದೊರ್ಯ, ಮುಶ್ರಫ್, ಶಿವಮೂರ್ತಿ, ಮಂಗಲ ನಾಗೇಂದ್ರ, ನಾಗಶೆಟ್ಟಿ, ರಘು, ಆನಂದ್, ಮಹದೇವಸ್ವಾಮಿ, ರವಿಪ್ರಸಾದ್, ಬೊಮ್ಮೇಗೌಡ, ರಂಗಸ್ವಾಮಿ, ಸುರೇಶ್, ಗ್ರಾ.ಪಂ ಪಿಡಿಓ ಮಹಾದೇವು, ಗ್ರಾಮ ಲೆಕ್ಕಾಧಿಕಾರಿ ಶಿವಕುಮಾರ್, ಅರಣ್ಯ ರಕ್ಷಕ ಮಲ್ಲಿಕಾರ್ಜುನ ಹಂಗರಗಿ ಇನ್ನಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next