Advertisement

ಒಂದೇ ತಿಂಗಳಲ್ಲಿ 152 ಸ್ಯಾನಿಟೈಸರ್ ಬ್ರಾಂಡ್‌ಗಳು!

12:06 PM Apr 19, 2020 | Sriram |

ಜಗತ್ತಿನಾದ್ಯಂತ ಕೋವಿಡ್‌-19 ಕೊಟ್ಟ ಈ ಅವಕಾಶ ಬಳಸಿಕೊಂಡ ಸ್ಥಳೀಯ ಬ್ರಾಂಡ್‌ಗಳು ಸ್ಯಾನಿಟೈಸರ್ ಮತ್ತು ಹ್ಯಾಂಡ್‌ ವಾಶ್‌ ರೀತಿಯ ಸ್ವತ್ಛತೆಗೆ ಸಂಬಂಧಿಸಿದ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಭಾರೀ ಲಾಭ ಮಾಡಿಕೊಂಡಿವೆ.

Advertisement

ನೀಲ್ಸನ್‌ ವರದಿ ಪ್ರಕಾರ ಮಾರ್ಚ್‌ ಒಂದೇ ತಿಂಗಳಲ್ಲಿ 152 ಸ್ಥಳೀಯ ಸ್ಯಾನಿಟೈಸರ್‌ ಬ್ರಾಂಡ್‌ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಈ ಕಂಪೆನಿಗಳ ಶೇರು ಮೌಲ್ಯ ಶೇ.46 ಇದೆ. ಇದೇ ವೇಳೆ ಫೆಬ್ರವರಿಯಲ್ಲಿ ಶೇ.85ರಷ್ಟು ಮಾರುಕಟ್ಟೆ ಷೇರು ಹೊಂದಿದ್ದ ಎಚ್‌ಯುಎಲ್‌ ಮತ್ತು ರೆಕಿಟ್‌ ಬೆನ್‌ಕಿಸರ್‌ ರೀತಿಯ ದಿಗ್ಗಜ ಬ್ರಾಂಡ್‌ಗಳ ಪಾಲು ಮಾರ್ಚ್‌ ತಿಂಗಳಲ್ಲಿ ಶೇ.39ಕ್ಕೆ ಕುಸಿದಿದೆ.

ಇದೇ ವೇಳೆ ಈವರೆಗೂ ಸ್ಯಾನಿಟೈಸರ್ ಮಾರುಕಟ್ಟೆಯತ್ತ ತಿರುಗಿ ಕೂಡ ನೋಡದ ಇಮಾಮಿ, ಪಿ ಆಂಡ್‌ ಜಿ, ಮಾರಿಕೋ, ಕವಿನ್‌ಕೇರ್‌ ಸೇರಿ ಎಫ್‌ಎಂಸಿಜಿ ವಲಯದ ಹಲವು ಪ್ರತಿಷ್ಠಿತ ಕಂಪೆನಿಗಳೂ ಸ್ಯಾನಿಟೈಸರ್‌ ಬ್ರಾಂಡ್‌ಗಳನ್ನು ಪರಿಚಯಿಸಿವೆ ಎಂದು ನೀಲ್ಸನ್‌ ತನ್ನ ವರದಿಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next