Advertisement
ಆಕರ್ಷಕ ವೇದಿಕೆ150ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಕೆಂಪುಕೋಟಯನ್ನು ಅದ್ಭುತವಾಗಿ ಸಿದ್ಧಪಡಿಸಲಾಗಿತ್ತು. ಕಾಲೇಜಿನ ಎಲ್ಲ ಕಟ್ಟಡಗಳನ್ನು ವಿದ್ಯುದೀಪಗಳೊಂದಿಗೆ ಜಗಮಗಿಸುವಂತೆ ಮಾಡಲಾಗಿತ್ತು. ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ವಿ.ವಿ. ಕಾಲೇ ಜಿನ ಹೊರಭಾಗದ ಆವರಣದಲ್ಲಿ ಆಕರ್ಷಕ ವೇದಿಕೆ ನಿರ್ಮಿಸಲಾಗಿತ್ತು. ಗುರು ವಾರ ಸಂಜೆ ಆಕ ರ್ಷಕ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ಜರಗಿತು.
ಕಾಲೇಜಿನ ರವೀಂದ್ರ ಕಲಾಭವನದಲ್ಲಿ ತುಳುನಾಡಿನ ಗತಕಾಲದ ವೈಭವವನ್ನು ಪ್ರಸ್ತುತ ಪಡಿಸುವ ಪುರಾತನ ವಸ್ತು ಸಂಗ್ರಹದ ಪ್ರದರ್ಶನ ಸಂಭ್ರಮಾಚರಣೆಗೆ ಹೊಸ ಮೆರುಗು ನೀಡಿತು. ಕಾಲೇಜಿನ ವಿವಿಧ ವಿಭಾಗಗಳ ವಿದ್ಯಾರ್ಥಿಗಳ ಕೈಚಳ ಕದ ಮಾದರಿಗಳು ಗಮನ ಸೆಳೆದವು.ಗುರುವಾರ ಆರಂಭವಾದ ವಸ್ತು ಪ್ರದರ್ಶನ ಮೂರು ದಿನಗಳ ಕಾಲ ನಡೆಯಲಿದೆ. ಸಂಸತ್ತಿನ ಮಾದರಿಗಳು
ಸಮಾಜ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಪ್ರದರ್ಶನದಲ್ಲಿ ವಿಧಾನಸೌಧ, ಸಂಸತ್ತಿನ ಮಾದರಿಗಳು ಗಮನ ಸೆಳೆಯುತ್ತಿವೆ. ತಿಮಿಂಗಿಲ, ಕಾಡುಕೋಣ, ಆಮೆ, ಕಾಡೆಮ್ಮೆಗಳ ತಲೆಬುರುಡೆಗಳು ಕೂಡ ವಿವಿ ಕಾಲೇಜಿನಲ್ಲಿ ನಡೆಯುತ್ತಿರುವ ಪುರಾತತ್ವ ಇಲಾಖೆಯ ಪ್ರದರ್ಶನದಲ್ಲಿವೆ.
Related Articles
ರವೀಂದ್ರ ಕಲಾಭವನದ 10 ಕೊಠಡಿಗಳಲ್ಲಿ ನಡೆಯುತ್ತಿರುವ ಪ್ರದ ರ್ಶ ನದಲ್ಲಿ ತುಳುನಾಡಿನ ಪ್ರಾಚೀನ ವಸ್ತು ಗಳು, ಪೈಟಿಂಗ್ ಗಳು, ಸಾವಿರಾರು ಸಂಖ್ಯೆಯ ಹಳೆ ನಾಣ್ಯ- ಕರೆನ್ಸಿಗಳು ಅಂಚೆ ಚೀಟಿಗಳ ವೈವಿಧ್ಯತೆಗಳನ್ನು ಸಂಗ್ರಹದಲ್ಲಿ ಅನಾವರಣ ಗೊಂಡಿದೆ. ವಿದ್ಯಾರ್ಥಿಗಳ ವಿಜ್ಞಾನದ ಮಾದರಿಗಳು, ಭತ್ತದ ಸುಮಾರು 70ರಷ್ಟು ವೈವಿ ಧ್ಯಮಯ ಬೀಜಗಳು, ಕಸದಿಂದ ರಸ, ಬೀಜ ಗಳ ವೈವಿಧ್ಯತೆ, ಹಳೆಯ ಎಂಜಿನ್, ಅಳತೆ- ಮಾಪಕಗಳ ಪಳೆಯುಳಿಕೆಗಳು ವಿಜ್ಞಾನ, ಪ್ರಕೃತಿ ಸಾಗಿ ಬಂದ ಹಾದಿಯನ್ನು ಮೆಲುಕು ಹಾಕುವಂತಿದೆ.
Advertisement