Advertisement

ಕುಡಿದು ವಾಹನ ಓಡಿಸಿದಾತಗೆ 15 ಸಾವಿರ ದಂಡ

11:23 AM Sep 06, 2019 | sudhir |

ಧಾರವಾಡ : ಕುಡಿದು ವಾಹನ ಚಲಾಯಿಸುವಾಗ ಇಲ್ಲಿ ವರೆಗು 300- 500 ದಂಡ ಕಟ್ಟಿ ಓಡುತ್ತಿದ್ದವರಿಗೆ ಇದೀಗ ಹುಬ್ಬಳ್ಳಿ ಧಾರವಾಡ ಅವಳಿ ನಗರದ ಪೊಲೀಸು ಬರೊಬ್ಬರಿ ಬಿಸಿ ಮುಟ್ಟಿಸಿದ್ದಾರೆ.

Advertisement

ಕುಡಿದು ಬೈಕ್ ಚಲಾಯಿಸುವಾಗ ಸಿಕ್ಕಿಬಿದ್ದ ಸಂತೋಷ ಕಾಶಿನಟ್ಟಿ ಎಂಬಾತನ ಮೇಲೆ ನೂತನವಾಗಿ ಜಾರಿಯಾದ ಟ್ರಾಫಿಕ್ ನಿಯಮಗಳ‌ಡಿ ಸೆ.1 ರಂದು ಪ್ರಕರಣ ದಾಖಲಿಸಿದ್ದರು.

ವಿಚಾರಣೆ ನಡೆಸಿದ ಇಲ್ಲಿನ 1ನೇ ಜೆಎಂಎಫ್ಸಿ ನ್ಯಾಯಾಲಯ ಇಂದು ಬರೊಬ್ಬರಿ‌ 15 ಸಾವಿರ ದಂಡ ವಿಧಿಸಿದೆ.

ಧಾರವಾಡ ಜಿಲ್ಲೆಯ ಲ್ಲಿ ನೂತನ ಸಂಚಾರಿ ನಿಯಮದಡಿ ದೊಡ್ಡ ಗಾತ್ರದ ದಂಡ ವಿಧಿಸಿದ ಮೊದಲ ಪ್ರಕರಣ ಇದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next