Advertisement

150 Rs.ನೀಡಿ ಪವಿತ್ರ ಅಮರನಾಥ ಯಾತ್ರೆಗೆ ನೋಂದಣಿ ಮಾಡಿಸಿ!

01:09 AM Apr 16, 2024 | Team Udayavani |

ಜಮ್ಮು: ವಾರ್ಷಿಕ ಅಮರನಾಥ ಯಾತ್ರೆಗಾಗಿ ನೋಂದಣಿ ಪ್ರಕ್ರಿಯೆ ಸೋಮವಾರದಿಂದಲೇ ಶುರು ವಾಗಿದೆ. ದೇಶಾದ್ಯಂತ ಇರುವ ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ನ 540 ಶಾಖೆಗಳಲ್ಲಿ 150 ರೂ. ನೀಡುವ ಮೂಲಕ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಶ್ರೀ ಅಮರನಾಥ ಪುಣ್ಯಕ್ಷೇತ್ರ ಮಂಡಳಿ
(ಎಸ್‌ಎಎಸ್‌ಬಿ) ತಿಳಿಸಿದೆ.

Advertisement

ಪ್ರಸಕ್ತ ವರ್ಷ ಜೂ.19ರಿಂದ ಆರಂಭವಾಗಿ ಆ.19ಕ್ಕೆ ಪೂರ್ಣಗೊಳ್ಳ ಲಿದೆ. ಒಟ್ಟು 52 ದಿನಗಳು ಈ ಯಾತ್ರೆ ನಡೆಯಲಿದೆ. 13 ವರ್ಷ ಕೆಳಗಿನವರು, 75 ವರ್ಷ ಮೇಲ್ಪಟ್ಟವರು, 6 ವಾರಗಳಿಗಿಂತ ಹೆಚ್ಚು ಗರ್ಭದಾರಣೆ ಹೊಂದಿರುವ ಮಹಿಳೆಯರಿಗೆ ಯಾತ್ರೆ ನೋಂದಣಿಗೆ ಅವಕಾಶವಿಲ್ಲ. ಸಮುದ್ರ ಮಟ್ಟದಿಂದ 3,880 ಮೀಟರ್‌ ಎತ್ತರ ದಲ್ಲಿರುವ ಅಮರನಾಥ ಗುಹಾಂತರ ದೇಗುಲಕ್ಕೆ 2 ಮಾರ್ಗಗಳಲ್ಲಿ ತೆರಳಲು ಅವಕಾಶ ಇದೆ.

Advertisement

Udayavani is now on Telegram. Click here to join our channel and stay updated with the latest news.

Next