Advertisement

300 ದಿನದಲ್ಲಿ 150 ಶಾಸಕ, 25 ಸಂಸದ ಸ್ಥಾನ ಗುರಿ

12:43 PM May 07, 2017 | Team Udayavani |

ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಮೈಸೂರಿನಲ್ಲಿ ರಾಜ್ಯ ಕಾರ್ಯಕಾರಣಿ ನಡೆಸಿದ ಬಿಜೆಪಿ,” ರಾಜ್ಯ ಕಾಂಗ್ರೆಸ್‌ ಸರ್ಕಾರದ ದುರಾಡಳಿತಕ್ಕೆ ಅಂತ್ಯ ಹಾಡುವ ಮೂಲಕ ಕಾಂಗ್ರೆಸ್‌ ಮುಕ್ತ ಕರ್ನಾಟಕ ನಿರ್ಮಾಣ ಮಾಡಬೇಕು. ವಿಧಾನಸಭೆ ಚುನಾವಣೆಗೆ ಇನ್ನು ಉಳಿದಿರುವ 300 ದಿನಗಳಲ್ಲಿ 150 ಸ್ಥಾನ ಹಾಗೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನ ಪಡೆಯಲು ರಾಜ್ಯ ಪ್ರವಾಸ ಮಾಡಿ ಸಿದ್ದು ಸರ್ಕಾರವನ್ನು ಕಿತ್ತೆಸೆಯೋಣ’ ಎಂಬ ಒಕ್ಕೊರಲ ತೀರ್ಮಾನ ಕೈಗೊಂಡಿದೆ.

Advertisement

ಮೈಸೂರು: ರಾಜ್ಯ ಸರ್ಕಾರದಲ್ಲಿ ವರ್ಗಾವಣೆ ದಂಧೆಯಾಗಿ ಪರಿಣಮಿಸಿದೆ. ಅಧಿಕಾರಿಗಳದೇ ಒಂದು ರೀತಿಯ ಧೋರಣೆಯಾಗಿದೆ. ಕಾನೂನು ಸುವ್ಯವಸ್ಥೆ ಎಷ್ಟರಮಟ್ಟಿಗೆ ಹದಗೆಟ್ಟಿದೆ ಎಂದರೆ ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ 6521 ಜನರ ಕೊಲೆಯಾಗಿದೆ. ಸಚಿವ ತನ್ವೀರ್‌ ಸೇಠ್ ಗ್ರಂಥಾಲಯ ಮೇಲ್ವಿಚಾರಕರುಗಳಿಂದ 3 ಕೋಟಿ ಲಂಚ ಪಡೆದ ಆರೋಪ ಕೇಳಿಬಂದಿದೆ. ಆದರೂ ಮುಖ್ಯಮಂತ್ರಿ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ನಡೆಯುತ್ತಿರುವ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂಬರುವ ಚುನಾವಣೆಯಲ್ಲಿ ವಿಧಾನ ಸಭೆಗೆ 150 ಸ್ಥಾನ ಹಾಗೂ ಲೋಕಸಭೆಗೆ ರಾಜ್ಯದಿಂದ 25 ಸ್ಥಾನ ಗೆಲ್ಲಲು ಈಗಿನಿಂದಲೇ ಸಂಘಟನೆಗೆ ಪರಿಶ್ರಮ ಹಾಕಬೇಕಿದೆ ಎಂದರು.

ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿ ಯಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ದುಡಿಯುವ ಕೈಗೆ ಕೆಲಸವಿಲ್ಲದಂತಾಗಿದೆ. ಕಾನೂನು – ಸುವ್ಯವಸ್ಥೆ ಹದಗೆಟ್ಟಿದೆ, ಭ್ರಷ್ಟತೆ ಯಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ಅಧ್ಯಯನ ವೊಂದರ ಪ್ರಕಾರ ಪ್ರಥಮ ಸ್ಥಾನ ದೊರೆತಿದೆ. ಆದರೂ ಮುಖ್ಯಮಂತ್ರಿ ದುಬೈ ಪ್ರವಾಸ ಮಾಡುತ್ತಾರೆ ಎಂದು ಟೀಕಿಸಿದರು.

ಕಳೆದ ನಾಲ್ಕು ವರ್ಷಗಳಲ್ಲಿ ಸಿದ್ದರಾಮಯ್ಯ ಸರ್ಕಾರ 90 ಸಾವಿರ ಕೋಟಿ ಸಾಲ ಮಾಡಿದೆ. ನೀರಾವರಿಗೆ ವಾರ್ಷಿಕ ಹತ್ತು ಸಾವಿರ ಕೋಟಿ ಖರ್ಚು ಮಾಡುತ್ತೇವೆಂದವರು ಈವರೆಗೆ ಮಾಡಿರುವುದು 3800 ಕೋಟಿ ಮಾತ್ರ. ಪ್ರತಿಯೊಂದಕ್ಕೂ ಕೇಂದ್ರದತ್ತ ಬೊಟ್ಟು ಮಾಡುವ ಈ ಸರ್ಕಾರಕ್ಕೆ ಕೊಟ್ಟ ಹಣವನ್ನು ಖರ್ಚು ಮಾಡುವ ಯೋಗ್ಯತೆ ಇಲ್ಲ.

Advertisement

ಕಳೆದ ಮೂರು ವರ್ಷಗಳಲ್ಲಿ ಕೇಂದ್ರ ಸರ್ಕಾರ, ಕರ್ನಾಟಕಕ್ಕೆ 1.15 ಲಕ್ಷ ಮನೆಗಳನ್ನು ಮಂಜೂರು ಮಾಡಿದ್ದರೆ, ರಾಜ್ಯಸರ್ಕಾರ ಕೇವಲ 10.408 ಮನೆಗಳನ್ನು ಮಾತ್ರ ಕಟ್ಟಿಕೊಟ್ಟಿದೆ ಎಂದು ದೂರಿದರು. ಸುಳ್ಳು ಭರವಸೆಗಳನ್ನು ನೀಡಿ ಜನತೆಗೆ ದ್ರೋಹ ಬಗೆಯುತ್ತಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ಹಗರಣಗಳ ಸರಮಾಲೆಯೇ ಸುತ್ತಿಕೊಂಡಿದೆ ಎಂದು ಟೀಕಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next