Advertisement

150 ಊಟದ ತಟ್ಟೆ  ವಿತರಣೆ

10:57 PM Jan 12, 2022 | Girisha |

ಆಲಮಟ್ಟಿ: ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳು ದೇಶದ ವಿವಿಧ ಉನ್ನತ ಹುದ್ದೆಯಲ್ಲಿರಲು ಗ್ರಾಮೀಣ ಜನತೆಯ ಉತ್ಸಾಹ ಹಾಗೂ ಪ್ರೋತ್ಸಾಹವೇ ಕಾರಣ ಎಂದು ಕೆಬಿಜೆಎನ್ನೆಲ್‌ ಅಧೀ ಕ್ಷಕ ಅಭಿಯಂತರ ಡಿ. ಬಸವರಾಜ ಹೇಳಿದರು.

Advertisement

ಬೇನಾಳ ಆರ್‌.ಎಸ್‌. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ವೈಯಕ್ತಿಕವಾಗಿ ಸುಮಾರು 150 ಊಟದ ತಟ್ಟೆ ವಿತರಿಸಿ ಮಾತನಾಡಿದರು. ಗ್ರಾಮೀಣ ಶಾಲೆಗಳಲ್ಲಿ ಮೂಲ ಸೌಲಭ್ಯಗಳ ಕೊರತೆ ಇದ್ದು ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಪಂಗಳು ಶ್ರಮಿಸಬೇಕು.

ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಸಂಸ್ಕಾರವಂತರನ್ನಾಗಿಸಲು ಶ್ರಮಿಸಬೇಕು ಎಂದರು. ಈ ವೇಳೆ ಆಲಮಟ್ಟಿ ಅಣೆಕಟ್ಟು ವಿಭಾಗದ ಕಾರ್ಯಪಾಲಕ ಅಭಿಯಂತರ ಸಂಗಮೇಶ ಮುಂಡಾಸ, ವಿ.ಜಿ. ಕುಲಕರ್ಣಿ, ಎಸ್‌ಡಿಎಂಸಿ ಅಧ್ಯಕ್ಷ ಜಿ.ಸಿ. ಮುತ್ತಲದಿನ್ನಿ, ಶಶಿ ಭಾವಿಕಟ್ಟಿ, ರಾಮಣ್ಣ ವಂದಾಲ, ಎಸ್‌.ಆರ್‌. ಬಿರಾದಾರ, ಬಿ.ಎಚ್‌. ಗಣಿ ಸೇರಿದಂತೆ ಇತರರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next