Advertisement

150 ಕಿ.ಮೀ. ಮಾರ್ಗ ಪರಿಸರ ಸ್ವತ್ಛತೆ ಅಭಿಯಾನಕ್ಕೆ ಚಾಲನೆ

12:03 AM Dec 23, 2022 | Team Udayavani |

ಮಂಗಳೂರು : ಅಂತಾ ರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಹಮ್ಮಿಕೊಂಡಿರುವ “ನಮ್ಮ ಸಂಸ್ಕೃತಿ-ಸ್ವತ್ಛ ಸಂಸ್ಕೃತಿ’ ಹೆಸರಿನ ಬೃಹತ್‌ ಸ್ವತ್ಛತಾ ಆಂದೋ ಲನಕ್ಕೆ ವಾಮಂಜೂರು ಜಂಕ್ಷನ್‌ನಲ್ಲಿ ಸಂಸದ ನಳಿನ್‌ ಕುಮಾರ್‌ ಕಟೀಲು ಗುರುವಾರ ಚಾಲನೆ ನೀಡಿದರು.

Advertisement

ಅವರು ಮಾತನಾಡಿ, ಜಿಲ್ಲೆಯ ಜನರಲ್ಲಿ ಸ್ವತ್ಛತೆ ಬಗ್ಗೆ ಸಾಕಷ್ಟು ಜಾಗೃತಿ ಇದೆ. ಅದಕ್ಕಾಗಿಯೇ ಜಿ.ಪಂ. ಸ್ವತ್ಛತೆ ಸಂಬಂಧಿ ಪ್ರಶಸ್ತಿ ಯನ್ನು ಪಡೆದಿದೆ ಎಂದರು.

ಸ್ವತ್ಛತೆಯೇ ಪೂಜೆ
ರಾಮಕೃಷ್ಣ ಮಠದ ಸ್ವಾಮೀಜಿ ಶ್ರೀ ಜಿತಕಾಮಾನಂದಜಿ ಅವರು ಮಾತನಾಡಿ, ಸ್ವತ್ಛತೆಯೇ ಈ ಭೂಮಿಗೆ ಸಲ್ಲಿಸುವ ಪೂಜೆ, ಕಸ ವನ್ನು ಹೆಕ್ಕುವ ಮೂಲಕ ಪರಿಸರಕ್ಕೆ ಗೌರವಸಲ್ಲಿಸಬೇಕು ಎಂದರು.

ಶಾಸಕರಾದ ಉಮಾನಾಥ ಕೋಟ್ಯಾನ್‌, ಜಿಲ್ಲಾಧಿಕಾರಿ ರವಿ ಕುಮಾರ್‌ಎಂ.ಆರ್‌., ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌, ಪಾಲಿಕೆ ಸದಸ್ಯರಾದ ಭಾಸ್ಕರ ಮೊಲಿ, ಹೇಮಲತಾ ರಘು ಸಾಲ್ಯಾನ್‌, ಸಂಗೀತಾ ನಾಯಕ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್‌ ನಾಯಕ್‌ ಇಂದಾಜೆ ಮೊದಲಾದವರಿದ್ದರು.

ಐದು ದಿನಗಳ ಅಭಿಯಾನ
ಜಿ.ಪಂ. ಸಿಇಒ ಡಾ| ಕುಮಾರ್‌ ಮಾತನಾಡಿ, “ನಮ್ಮ ಸಂಸ್ಕೃತಿ ಸ್ವತ್ಛ ಸಂಸ್ಕೃತಿ’ ಕಾರ್ಯಕ್ರಮವನ್ನು 5 ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ. 150 ಕಿ.ಮೀ. ವ್ಯಾಪ್ತಿಯಲ್ಲಿ ಸ್ವತ್ಛತೆ ನಡೆಯಲಿದೆ. 50 ಸಾವಿರ ವಿದ್ಯಾರ್ಥಿಗಳು, ಸ್ಕೌಟ್ಸ್‌ ಗೈಡ್ಸ್‌ ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿ ನಿಧಿಗಳು ಸೇರಿದಂತೆ 8 ತಂಡಗಳು ಭಾಗವಹಿಸಲಿವೆ. ಎಂದರು.

Advertisement

ಸ್ವತ್ಛತಾ ತಂಡಗಳು
– ನೇತ್ರಾವತಿ ತಂಡದಲ್ಲಿ 650 ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ವಾಮಂಜೂರಿನಿಂದ ಗುರುಪುರದ ವರೆಗೆ
– ಶರಾವತಿ ತಂಡದಲ್ಲಿ 250 ಸ್ಕೌಟ್ಸ್‌-ಗೈಡ್ಸ್‌ ವಿದ್ಯಾರ್ಥಿಗಳು, ಭುವನೇಂದ್ರ ಕಾಲೇಜಿನ 150 ಎನ್ನೆಸೆಸ್‌ ಸ್ವಯಂಸೇವಕರು ಕಾರ್ಕಳದ 8 ರಸ್ತೆಗಳಲ್ಲಿ 5 ಕಿ.ಮೀ. ವ್ಯಾಪ್ತಿಯಲ್ಲಿ
– ಶಾಂಭವಿ ತಂಡದಲ್ಲಿ 250 ಸ್ಕೌಟ್ಸ್‌-ಗೈಡ್ಸ್‌, 50 ಎನ್‌ಸಿಸಿ ವಿದ್ಯಾರ್ಥಿಗಳು ಮತ್ತು ಸ್ವಯಂ ಸೇವಕರು ಮೂಲ್ಕಿ ಕಾರ್ನಾಡು ಜಂಕ್ಷನ್‌ ನಿಂದ ಕಿಲ್ಪಾಡಿ ರೈಲು ನಿಲ್ದಾಣದ ವರೆಗೆ ಮತ್ತು ಬಪ್ಪನಾಡು ದೇವಾಲಯದಿಂದ ಪುನರೂರು ವರೆಗೆ 7.2 ಕಿ.ಮೀ. ವ್ಯಾಪ್ತಿಯಲ್ಲಿ
– ಎತ್ತಿನಹೊಳೆ ತಂಡದಲ್ಲಿ 250 ಸೌಟ್‌-ಗೈಡ್ಸ್‌ ವಿದ್ಯಾರ್ಥಿ ಗಳು,ಅಮಾrಡಿ ಗ್ರಾ.ಪಂ. ಅಧಿಕಾರಿಗಳು, ಪಂಜಿಕಲ್‌ ಗ್ರಾ.ಪಂ. ಸದಸ್ಯರು, ಆಶಾ ಕಾರ್ಯಕರ್ತೆಯರು, ಸ್ಥಳೀಯರು ಸೇರಿದಂತೆ 800 ಮಂದಿ
– ಬಂಟ್ವಾಳ-ಮೂಡುಬಿದಿರೆ ಜಂಕ್ಷನ್‌ನಿಂದ ಸೊರ್ನಾಡು ಅಂಗನವಾಡಿ ವರೆಗೆ ಹಾಗೂ ಪಯಸ್ವಿನಿ ತಂಡ, ಬೆಳ್ಮಣ್‌ನ ಸ್ವರ್ಣಹೊಳೆ ತಂಡ, ಫಲ್ಗುಣಿ ಹಾಗೂ ನಂದಿನಿ ತಂಡದವರು ವಿವಿಧೆಡೆ ಸ್ವತ್ಛತೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next