Advertisement

150 ಕೋಟಿ ಖಾತೆ ಡಿಲೀಟ್‌

07:13 AM Nov 17, 2018 | |

ವಾಷಿಂಗ್ಟನ್‌: ಸಾಮಾಜಿಕ ಅಂತರ್ಜಾಲ ತಾಣ ಫೇಸ್‌ಬುಕ್‌ ಕಳೆದ ಆರು ತಿಂಗಳಲ್ಲಿ 150 ಕೋಟಿ ನಕಲಿ ಖಾತೆಗಳನ್ನು ಅಳಿಸಿಹಾಕಿದೆ ಎಂದು ಸಂಸ್ಥಾಪಕ ಮಾರ್ಕ್‌ ಝುಕರ್‌ಬರ್ಗ್‌ ಹೇಳಿದ್ದಾರೆ. ಫೇಸ್‌ಬುಕ್‌ನ ಕಾರ್ಯನಿರ್ವಹಣೆಯ ಬಗ್ಗೆ ವಿಸ್ತೃತವಾಗಿ ಬರೆದಿರುವ ಮಾರ್ಕ್‌, ಬಹುತೇಕ ಸ್ಪ್ಯಾಮ್‌, ತಪ್ಪು ಮಾಹಿತಿ ಹಬ್ಬಿಸುವಿಕೆಯಲ್ಲಿ ಈ ನಕಲಿ ಖಾತೆಗಳು ಸಕ್ರಿಯವಾಗಿದ್ದವು. ನಕಲಿ ಖಾತೆಗಳನ್ನು ಪತ್ತೆ ಮಾಡುವಲ್ಲಿ ಫೇಸ್‌ಬುಕ್‌ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ಹೇಳಿದ್ದಾರೆ. ಫೇಸ್‌ಬುಕ್‌ನಲ್ಲಿ ಮಾಸಿಕ 250 ಕೋಟಿ ಸಕ್ರಿಯ ಬಳಕೆದಾರರಿದ್ದಾರೆ. ಡೇಟಾ ಸೋರಿಕೆ ಆರೋಪಗಳು ಕೇಳಿಬಂದಾಗ ಆರಂಭದಲ್ಲಿ ಫೇಸ್‌ಬುಕ್‌ ಸುದ್ದಿ ಮುಚ್ಚಿಹಾಕಲು ಪ್ರಯತ್ನಿಸಿತ್ತು ಎಂದು ಪತ್ರಿಕೆಗಳು ವರದಿ ಮಾಡಿದ ಹಿನ್ನೆಲೆಯಲ್ಲಿ ಮಾರ್ಕ್‌ ಈ ವಿವರಣೆ ನೀಡಿದ್ದಾರೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next