ಗದಗ: ತನ್ನ ಸ್ವಂತ ಜಮೀನಿನಲ್ಲಿ ಗಾಂಜಾ ಬೆಳೆದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದ ಉಡಚಪ್ಪ ಬಸವಣ್ಣೆಪ್ಪ ಪುರದ ಎಂಬ ವ್ಯಕ್ತಿಗೆ ಗದಗ ಜಿಲ್ಲಾ ಸತ್ರ ನ್ಯಾಯಾಲಯ 15 ವರ್ಷ ಕಠಿಣ ಶಿಕ್ಷೆ ಜೊತೆಗೆ 2 ಲಕ್ಷ ರೂ. ದಂಡ ವಿಧಿಸಿ ಆದೇಶ ನೀಡಿದೆ.
ನ. 9, 2013ರಂದು ಅಂದಿನ ಪ್ರೊಬೆಷನರಿ ಡಿವೈಎಸ್ಪಿ ಆಗಿದ್ದ ಬಿ.ಎಸ್. ನೇಮಗೌಡ (ಇಂದಿನ ಎಸ್ಪಿ) ನೇತೃತ್ವದಲ್ಲಿ ಉಡಚಪ್ಪನ ಹೊಲದಲ್ಲಿ ದಾಳಿ ಮಾಡಿ ಅಂದಾಜು 101 ಕೆಜಿ ಗಾಂಜಾ ಸ್ವತ್ತು ವಶಪಡಿಸಿಕೊಳ್ಳಲಾಗಿತ್ತು. ಹತ್ತಿ ಮತ್ತು ತೊಗರಿ ಬೆಳೆಯ ನಡುವೆ ಉಡಚಪ್ಪ ಗಾಂಜಾ ಬೆಳೆದಿದ್ದನು.
ಇದನ್ನೂ ಓದಿ:ಕುಮಾರಸ್ವಾಮಿಯದ್ದು ಮನೆ-ಊರು ದಾಟಿದ ಸಾಮರ್ಥ್ಯ: ಸಿ.ಟಿ.ರವಿ ಟಾಂಗ್
ಅಂದಾಜು 1 ಲಕ್ಷ ರೂ. ಮೌಲ್ಯದ ಗಾಂಜಾ ಇದಾಗಿತ್ತು. ಎನ್ಡಿಪಿಎಸ್ ಪ್ರಕರಣ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪಿಎಸ್ಐ ಆರ್.ಎಸ್. ಕಟ್ಟಿಮನಿ ತನಿಖೆ ನಡೆಸಿ ಏಪ್ರಿಲ್ 30, 2014ರಂದು ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಆರೋಪ ಸಾಭಿತಾದ ಹಿನ್ನೆಲೆಯಲ್ಲಿ ಜಿಲ್ಲಾ ಸತ್ರ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿದೆ.