Advertisement

Chicken burger: ಚಿಕನ್‌ ಬರ್ಗರ್‌ ನೀಡಿದ್ದಕ್ಕೆ 15 ಸಾವಿರ ದಂಡ!

04:14 PM Sep 05, 2023 | Team Udayavani |

ಬೆಂಗಳೂರು: ಸಸ್ಯಹಾರಿ ವ್ಯಕ್ತಿಗೆ ಚಿಕನ್‌ ಬರ್ಗರ್‌ ನೀಡಿ ಧಾರ್ಮಿಕ ಆಚರಣೆಗೆ ಧಕ್ಕೆ ತಂದು ಅನಾರೋಗ್ಯಕ್ಕೆ ಕಾರಣವಾದ ಹೊಟೇಲ್‌ವೊಂದಕ್ಕೆ ಗ್ರಾಹಕ ನ್ಯಾಯಾಲಯ 15 ಸಾವಿರ ದಂಡ ಪರಿಹಾರ ನೀಡುವಂತೆ ತೀರ್ಪು ಹೊರಡಿಸಿದೆ.

Advertisement

ದೊಡ್ಡಬಳ್ಳಾಪುರದ 62 ವರ್ಷದ ವ್ಯಕ್ತಿಯು ತನ್ನ ಮಗನ ಪರವಾಗಿ ಗ್ರಾಹಕ ನ್ಯಾಯಾಲಯಕ್ಕೆ ದೂರು ದಾಖಲಿಸಿದ್ದಾರೆ. ತನ್ನ ಮಗ ನಗರದ ಖಾಸಗಿ ಹೊಟೇಲ್‌ ಒಂದರಲ್ಲಿ ಕೊಠಡಿಯನ್ನು ಬುಕ್‌ ಮಾಡಿ ವಾಸ್ತವ್ಯ ಹೂಡಿದ್ದರು. ಈ ವೇಳೆ ವೆಜ್‌ ಬರ್ಗರ್‌ ಆರ್ಡಾರ್‌ ಮಾಡಿದ್ದಾರೆ. ಈ ವೇಳೆ ಹೊಟೇಲ್‌ನವರು ವೆಜ್‌ ಬರ್ಗರ್‌ ಬದಲಾಗಿ ಚಿಕನ್‌ ಬರ್ಗರ್‌ ನೀಡಿದ್ದಾರೆ. ಈ ಮಾಹಿತಿ ಗೊತ್ತಿಲ್ಲ ಮಗ ಬರ್ಗರ್‌ ಸೇವಿಸಿದ್ದಾರೆ. ಮಾಂಸಹಾರವನ್ನೇ ಮುಟ್ಟದವರು ಚಿಕನ್‌ ಬರ್ಗರ್‌ ಸೇವಿಸಿರುವುದು ಅಘಾತ ಉಂಟು ಮಾಡಿದೆ. ಈ ವೇಳೆ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖೀಸಿದ್ದಾರೆ. ಗ್ರಾಹಕ ಸೇವೆಯಲ್ಲಿ ವ್ಯತ್ಯಯದ ಬಗ್ಗೆ ಹೊಟೇಲ್‌ ಮಾಲೀಕರ ಗಮನಕ್ಕೆ ತರಲಾಗಿದೆ.

ಹೊಟೇಲ್‌ನಲ್ಲಿ ಆಗಿರುವ ತೊಂದರೆ ಬಗ್ಗೆ ಉಲ್ಲೇಖಿಸಿ, ಹೊಟೇಲ್‌ ಬಿಲ್‌ ಮೊತ್ತವನ್ನು ಮರುಕಳಿಸುವಂತೆ ಮನವಿ ಮಾಡಿದರೂ, ಯಾವುದೇ ಪ್ರಯೋಜನವಾಗಿಲ್ಲ. ಈ ವೇಳೆ ಹೊಟೇಲ್‌ ಮಾಲೀಕ ಪರಿಹಾರವಾಗಿ ಉಚಿತ ತಿಂಡಿ, ಊಟ ವ್ಯವಸ್ಥೆ ನೀಡುವುದಾಗಿ ತಿಳಿಸಿದ್ದಾರೆ. ಇದರಿಂದ ಬೇಸತ್ತ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ. ಎರಡು ಕಡೆಯ ವಾದ ವಿವಾದವನ್ನು ಆಲಿಸಿದ ನ್ಯಾಯಾಧೀಶರು, ಸಸ್ಯಹಾರಿಗೆ ಚಿಕನ್‌ ಬರ್ಗರ್‌ ನೀಡಿದ ಹೊಟೇಲ್‌ 15 ಸಾವಿರ ರೂ. ಪರಿಹಾರ ನೀಡುವಂತೆ ಆದೇಶ ಹೊರಡಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next